ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ವಿಡಿಯೋ ಲೀಕ್ ಆದಾಗಿನಿಂದ ರಾಜ್ಯ ರಾಜಕೀಯ ಅಲ್ಲೋಲ ಕಲ್ಲೋಲವಾಗಿದೆ. ಬಿಜೆಪಿಯ ಕೆಲ ಶಾಸಕರು ರಮೇಶ್ ಜಾರಕಿಹೊಳಿ ಅವರ ಪರ ಬ್ಯಾಟಿಂಗ್ ಮಾಡುತ್ತಿದ್ದರೆ ವಿರೋಧ ಪಕ್ಷಗಳು ಸಿಕ್ಕಿದ್ದೇ ಚಾನ್ಸ್ ಎನ್ನುತ್ತಾ ಬಿಜೆಪಿ ವಿರುದ್ಧ ಸಾಲು ಸಾಲು ಹೇಳಿಕೆಗಳನ್ನು ನೀಡತೊಡಗಿವೆ.
ಇದೀಗ ಈ ವಿವಾದದ ಕುರಿತು ಸಿಪಿ ಯೋಗೇಶ್ವರ್ ಅವರು ಮಾತನಾಡಿದ್ದಾರೆ. ಹೌದು ರಮೇಶ್ ಜಾರಕಿಹೊಳಿ ಅವರ ಸಿಡಿ ಹಿಂದಿನ ಕೈವಾಡ ಯಾರದ್ದು ಎಂಬುದನ್ನು ಸಿಪಿ ಯೋಗೀಶ್ವರ್ ಅವರು ತಿಳಿಸಿದ್ದಾರೆ. ಸಿಡಿ ಹಿಂದೆ ಇರುವುದು ಬೇರೆ ಯಾರೂ ಅಲ್ಲ ಕನಕಪುರ ಮತ್ತು ಬೆಳಗಾವಿಯವರು ಎಂದು ಸ್ಫೋಟಕ ಹೇಳಿಕೆಯನ್ನು ಸಿಪಿ ಯೋಗೀಶ್ವರ್ ಅವರು ನೀಡಿದ್ದಾರೆ.
.
.ಹೌದು ಸಿಡಿ ಬಿಡುಗಡೆ ಹಿಂದೆ ಕನಕಪುರ ಮತ್ತು ಬೆಳಗಾವಿಯವರ ಕೈವಾಡ ಇದೆ ಎಂದು ಹೇಳುವುದರ ಮೂಲಕ ಇದೀಗ ವಿವಾದ ದೊಡ್ಡಮಟ್ಟಕ್ಕೆ ಹೋಗುವಂತೆ ಸಿಪಿ ಯೋಗೇಶ್ವರ್ ಅವರು ಮಾಡಿದ್ದಾರೆ. ಸಿಪಿ ಯೋಗೇಶ್ವರ್ ಅವರು ಹೇಳಿದ ಪ್ರಕಾರ ಸಿಡಿ ಹಿಂದೆ ಇರುವ ಆ ಕನಕಪುರ ಮತ್ತು ಬೆಳಗಾವಿಯವರು ಯಾರು ಎಂಬ ಚರ್ಚೆಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿವೆ.