ಈ ಮೂಲಕ ತಾವು ಜಾಹೀರಾತುಗಳಲ್ಲಿ ನಟಿಸುತ್ತಿರುವುದನ್ನು ಅವರು ಸಮರ್ಥಿಸಿಕೊಂಡಿದ್ದಾರೆ. ‘ಜಾಹೀರಾತು, ಸಿನಿಮಾ ಹೀಗೆ ಯಾವುದೇ ವಿಚಾರದಲ್ಲಿಯೂ ನಟರಿಗೆ ಸಾಮಾಜಿಕ ಜವಾಬ್ದಾರಿ ಇರುತ್ತದೆ. ಹಾಗೆ ಇರುವುದಕ್ಕೇ ನಾನು ಅದರಿಂದ ಬಂದ ಹಣವನ್ನು ಒಳ್ಳೊಳ್ಳೆಯ ಕೆಲಸಗಳಿಗೆ ಬಳಸುತ್ತಿದ್ದೇನೆ. ಅದು ಎಲ್ಲರಿಗೂ ಗೊತ್ತಿರುವ ವಿಚಾರ. ನನ್ನದೇ ತಂಡ ಬೇರೆ ಬೇರೆ ರೀತಿಯಲ್ಲಿ ಸಮಾಜಕ್ಕೆ ಕೈಲಾದಷ್ಟು ನೆರವಾಗಿದೆ’ ಎಂದಿದ್ದಾರೆ ಅವರು.
‘ಒಟಿಟಿಯಲ್ಲಿಸಿನಿಮಾಗಳನ್ನು ರಿಲೀಸ್ ಮಾಡುವ ಬಗ್ಗೆ ನಡೆಯುತ್ತಿರುವ ವಾದ, ವಿವಾದಗಳ ಬಗ್ಗೆ ನನಗೆ ಅರಿವಿಲ್ಲ. ಆದರೆ ನಾವು ಸಿನಿಮಾ ಮಾಡುವುದೇ ಚಿತ್ರಮಂದಿರಗಳಿಗೆ. ಚಿತ್ರಮಂದಿರಗಳು ನಮ್ಮಂತಹ ಕಲಾವಿದರಿಗೆ ದೇವಸ್ಥಾನಗಳಿದ್ದಂತೆ. ಎಲ್ಲ ದೇವಸ್ಥಾನಗಳೂ ಮುಚ್ಚಿದ ಸಮಯದಲ್ಲಿ ವಿಧಿ ಇಲ್ಲದೆ ಮನೆಯಲ್ಲಿ ಪೂಜೆ ಮಾಡುತ್ತೇವೆ. ಆದರೆ ಈಗ ದೇವಸ್ಥಾನಗಳು ತೆರೆದಿವೆ. ಹಾಗಾಗಿ ಅಲ್ಲಿಯೇ ಹೋಗಿ ಪೂಜೆ ಮಾಡುತ್ತೇವೆ ಹೊರತು ಮನೆಯಲ್ಲಲ್ಲ’ ಎಂದು ಹೇಳಿ ತಮ್ಮ ಸಿನಿಮಾಗಳನ್ನು ನೇರವಾಗಿ ಒಟಿಟಿಗೆ ಕೊಡುವುದಿಲ್ಲಎಂಬುದನ್ನು ಪರೋಕ್ಷವಾಗಿ ಸೂಚಿಸಿದ್ದಾರೆ ಸುದೀಪ್.
‘ನನ್ನ ನಿರ್ದೇಶನದ ಚಿತ್ರಕ್ಕೆ ಪ್ಲಾನಿಂಗ್ ನಡೆಯುತ್ತಿದೆ. ‘ವಿಕ್ರಾಂತ್ ರೋಣ’ ಚಿತ್ರತಂಡ ನನ್ನನ್ನು ಬಿಟ್ಟರೆ ನಾನು ಕೆಲಸ ಆರಂಭಿಸುತ್ತೇನೆ. ಬುರ್ಜ್ ಖಲೀಫಾದ ಮೇಲೆ ನಮ್ಮ ಕಟೌಟ್ ಹಾಕಲು ಇಡೀ ತಂಡ ಕಷ್ಟಪಡುತ್ತಿದೆ. ಸಿನಿಮಾ ಆರಂಭವಾದಾಗಿನಿಂದಲೂ ನಾನು ‘ಫ್ಯಾಂಟಮ್’ ಬದಲಿಗೆ ‘ವಿಕ್ರಾಂತ್ ರೋಣ’ ಹೆಸರನ್ನೇ ಇಡಿ ಎಂದು ಹೇಳಿದ್ದೆ. ನಿರ್ಮಾಪಕರು ಮತ್ತು ನಿರ್ದೇಶಕರಿಬ್ಬರೂ ನನ್ನ ಮಾತು ಕೇಳಲಿಲ್ಲ. ಈಗ ಅವರೇ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಬದಲಾಯಿಸಿದ್ದಾರೆ’ ಎಂದು ಹೇಳಿದರು ಸುದೀಪ್.
ಜಾಹಿರಾತುವಿನಿಂದ ಬಂದ ಹಣವನ್ನು ಸುದೀಪ್ ಯಾವ್ದಕ್ಕೆ ಬಳಸ್ತಿದ್ದಾರೆ ಗೊತ್ತಾ?
Date: