ಜಿಲ್ಲಾಧಿಕಾರಿ ಕಚೇರಿ ಮುಂದೆ ವಿಷ ಕುಡಿಯಲು ಯತ್ನಿಸಿದ ವ್ಯಕ್ತಿಯೊಬ್ಬರಿಗೆ ಜಿಲ್ಲಾಧಿಕಾರಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಚನ್ನಗಿರಿ ತಾಲೂಕು ಆಸ್ಪತ್ರೆಯಲ್ಲಿ ನಾಲ್ಕು ವರ್ಷದಿಂದ ಆ್ಯಂಬುಲೆನ್ಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದ ಲಿಂಗರಾಜ್ ನ್ಯಾಯಕ್ಕಾಗಿ ಆಗ್ರಹಿಸಿ ವಿಷ ಕುಡಿಯಲು ಮುಂದಾದವರು. ತನ್ನನ್ನು ಏಕಾಏಕಿ ಕೆಲಸದಿಂದ ತೆಗೆದುಹಾಕಿದ್ದಾರೆ. ನನ್ನ ತೆಗೆದು ಶಾಸಕ ಮಾಡಾಳ್ ವಿರುಪಾಕ್ಷ ಶಿಫಾರಸ್ಸಿನಿಂದ ಬೇರೆಯವರನ್ನು ಕೆಲಸಕ್ಕೆ ತೆಗೆದುಕೊಂಡಿದ್ದಾರ. ಈ ಬಗ್ಗೆ ಯಾರ ಬಳಿ ಹೇಳಿಕೊಂಡರೂ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಬಂದ ಜಿಲ್ಲಾಧಿಕಾರಿ ಮಹತೇಂಶ್ ಬೆಳಗಿ, ಏನ್ ಸಾಧಿಸಬೇಕೆಂದು ಆತ್ಮಹತ್ಯೆ ಮಾಡಿಕೊಳ್ಳುತ್ತೀಯಾ? ೫ ವರ್ಷದವನಾಗಿದ್ದಾಗ ತಂದೆ ಕಳೆದುಕೊಂಡೆ. ನನ್ನ ತಾಯಿ ರೊಟ್ಟಿ ಮಾಡಿ ಅದನ್ನು ಮಾರಾಟ ಮಾಡಿ ನನ್ನ ಸಾಕಿದರು. ನಾನು ಕಷ್ಟಪಟ್ಟು ಇಂದು ಜಿಲ್ಲಾಧಿಕಾರಿಯಾಗಿದ್ದೇನೆ. ಬೆಳಗಾವಿಯ ರಾಮದುರ್ಗಕ್ಕೆ ಹೋಗಿ ಜನರನ್ನು ಕೇಳಿ ಕಷ್ಟ ಏನೆಂದು ಗೊತ್ತಾಗುತ್ತೆ. ದುಡಿದು ತಿನ್ನುವ ಬದಲು ಆತ್ಮಹತ್ಯೆಗೆ ಮುಂದಾಗಿದ್ದಿಯಲ್ಲಾ ನೀನೆಂತ ಗಂಡಸು ಎಂದು ಬುದ್ಧಿ ಹೇಳಿದ್ದಾರೆ. ಅಷ್ಟೇ ಅಲ್ಲದೆ ನ್ಯಾಯ ಕೊಡಿಸುವ ಭರವಸೆಯನ್ನು ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಮುಂದೆ ವಿಷ ಕುಡಿಯಲು ಯತ್ನಿಸಿದ ವ್ಯಕ್ತಿಯೊಬ್ಬರಿಗೆ ಡಿ ಸಿ ಫುಲ್ ಕ್ಲಾಸ್!
Date: