ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್, ಏಕದಿನ ಮತ್ತು ಟಿ20 ಸರಣಿಯಿಂದ ದೂರ ಉಳಿದಿದ್ದಾರೆ.
ವಿಶ್ವಕಪ್ ಬಳಿಕ ಮಹೇಂದ್ರ ಸಿಂಗ್ ಧೋನಿಯ ನಿವೃತ್ತಿ ಹೊಂದಲಿದ್ದಾರೆ ಅನ್ನೋ ಕೂಗು ಬಲವಾಗಿ ಕೇಳಿ ಬರುತ್ತಿದೆ. ಧೋನಿ ನಿವೃತ್ತಿ ಹೊಂದಬಾರದು ಅನ್ನೋದು ಬಹುತೇಕರ ಆಶಯ. ಧೋನಿ ಸದ್ಯ ನಿವೃತ್ತಿ ಬಗ್ಗೆ ಯೋಚನೆ ಮಾಡಿಲ್ಲ. ಬದಲಾಗಿ ವಿಂಡೀಸ್ ಪ್ರವಾಸದಿಂದ ದೂರವಿದ್ದುಕೊಂಡು ಗಡಿ ಕಾಯಲು ಮುಂದಾಗಿದ್ದಾರೆ. ವಿಕ್ಟರ್ ಫೋರ್ಸ್ನಲ್ಲಿ ಪೆಟ್ರೋಲಿಂಗ್, ಗಾರ್ಡ್ ಮೊದಲಾದ ಕರ್ತವ್ಯ ನಿರ್ವಹಿಸಲಿದ್ದಾರೆ.
ಧೋನಿ ಅವರ ಕೋರಿಕೆಯಂತೆ ಸೇನೆಯ ಪ್ರಧಾನ ಕಚೇರಿಯಿಂದ ಅನುಮೋದನೆ ನೀಡಲಾಗಿದ್ದು, ಗಸ್ತು, ಕಾವಲು ಮತ್ತು ಪೋಸ್ಟ್ ಡ್ಯೂಟಿ ಕರ್ತವ್ಯಗಳನ್ನು ವಹಿಸಿಕೊಳ್ಳಲಿದ್ದಾರೆ ಮತ್ತು ಅಲ್ಲಿನ ಸೈನಿಕರೊಂದಿಗೆ ಇರುತ್ತಾರೆ ಅಂತ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಶ್ವ ಶ್ರೇಷ್ಠ ಕ್ರಿಕೆಟಿಗರಾಗಿರುವ ಧೋನಿ. ಕೂಲಿ ಕ್ಯಾಪ್ಟನ್ ಎಂದೇ ಹೆಸರುವಾಸಿ. 2007ರಲ್ಲಿ ಭಾರತ ಏಕದಿನ ವಿಶ್ವಕಪ್ ನಲ್ಲಿ ನಿರಾಸೆ ಅನುಭವಿಸಿ ತವರಿಗೆ ಮರಳಿತ್ತು. ಆ ಬೆನ್ನಲ್ಲೇ ಧೋನಿಗೆ ಟೀಮ್ ಇಂಡಿಯಾದ ನಾಯಕನ ಪಟ್ಟವೂ ಒಲಿದುಬಂದಿತ್ತು. ಯಂಗ್ ಕ್ಯಾಪ್ಟನ್ ಧೋನಿ ಸಾರಥ್ಯದಲ್ಲಿ 2007ರಲ್ಲಿ ನಡೆದ ಚೊಚ್ಚಲ ವರ್ಲ್ಡ್ಕಪ್ ಭಾರತಕ್ಕೆ ಒಲಿದುಬಂದಿತ್ತು. ಆ ಗೆಲುವಿನೊಂದಿಗೆ ಭಾರತದ ಕ್ರಿಕೆಟ್ ಹೊಸ ಇತಿಹಾಸವನ್ನು ಸೃಷ್ಠಿಸಿತ್ತು. ಆ ಬಳಿಕ 2011ರಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್ ನಡೆಯಿತು. ಆ ವಿಶ್ವಕಪ್ನಲ್ಲಿ ಭಾರತ ಚಾಂಪಿಯನ್ ಆಗಿತ್ತು. ಧೋನಿ ಟೀಮ್ ಇಂಡಿಯಾ ಮಾತ್ರವಲ್ಲ ಇಡೀ ವಿಶ್ವಕಂಡ ಅತ್ಯುತ್ತಮ ನಾಯಕ. ಅತ್ಯುತ್ತಮ ಫಿನಿಶರ್, ಅತ್ಯುತ್ತಮ ಕೀಪರ್.. ಜಗಮೆಚ್ಚಿದ ಕ್ರಿಕೆಟಿಗ.