ದೇಶದ ಪ್ರಮುಖ ಮೂರು ತೈಲ ಕಂಪನಿಗಳು ಪೆಟ್ರೋಲ್, ಡೀಸೆಲ್ ದರವನ್ನು ಶುಕ್ರವಾರ (ಜೂನ್ 25) ದಂದು ಪರಿಷ್ಕರಣೆ ಮಾಡಿಲ್ಲ. ಜೂನ್ 24ರಂದು ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಮೇಲೆ 29 ಪೈಸೆ ಹಾಗೂ ಡೀಸೆಲ್ ಬೆಲೆ ಪ್ರತಿ ಲೀಟರ್ ಮೇಲೆ 7 ಪೈಸೆಯಷ್ಟು ಏರಿಕೆಯಾಗಿತ್ತು.
ಸುಮಾರು 8 ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ 100 ರು ಪ್ರತಿ ಲೀಟರ್ ದಾಟಿದೆ. ಜೈಪುರ, ಭೋಪಾಲ್, ಮುಂಬೈ, ಹೈದರಾಬಾದ್ ನಂತರ ಬೆಂಗಳೂರಿನಲ್ಲಿ ಪೆಟ್ರೋಲ್ 100 ರು ಗಡಿ ದಾಟಿದೆ. ದೆಹಲಿಯಲ್ಲಿ ದರ ಗುರುವಾರದಂದು ಪೆಟ್ರೋಲ್ ಪ್ರತಿ ಲೀಟರ್‌ಗೆ 97.76ರು ಹಾಗೂ ಡೀಸೆಲ್ ಪ್ರತಿ ಲೀಟರ್‌ಗೆ 88.30ರು ಆಗಿದೆ.
ಮೇ ತಿಂಗಳಲ್ಲಿ 2021ರಲ್ಲಿ ದೇಶದೆಲ್ಲೆಡೆ ಪೆಟ್ರೋಲ್ 16ರು ಹಾಗೂ ಡೀಸೆಲ್ 18 ರುಗೂ ಅಧಿಕ ಏರಿಕೆಯಾಗಿತ್ತು. ಮೇ 4ರ ನಂತರ ಒಟ್ಟು 27 ಬಾರಿ ಬೆಲೆ ಏರಿಕೆ ಮಾಡಲಾಗಿದ್ದು, ಪೆಟ್ರೋಲ್ 6.82 ರು ಹಾಗೂ ಡೀಸೆಲ್ 7.24 ರು ನಷ್ಟು ಏರಿಕೆ ಕಂಡಿದೆ.