ಜ್ಯೋತಿಷಿ ದ್ವಾರಕಾನಾಥ್‌ರನ್ನು ಭೇಟಿ ಮಾಡಿದ ಸಿಎಂ !? ಕಾರಣ ಗೊತ್ತಾ ?

admin
By admin
1 Min Read

ಲೋಕಸಭೆ ಚುನಾವಣೆ ಬಳಿಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದು ಜ್ಯೋತಿಷಿ ದ್ವಾರಕಾನಾಥ್ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.

ಇಂದು ಬೆಳಗ್ಗೆ ರಾಜಭವನದಲ್ಲಿ ರಾಜ್ಯ ಹೈಕೋರ್ಟ್‍ನಲ್ಲಿ ಅಭಯ್ ಶ್ರೀನಿವಾಸ್ ಓಕಾ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ ನಂತರ ಅಲ್ಲಿಂದ ನೇರವಾಗಿ ಆರ್.ಟಿ.ನಗರದಲ್ಲಿರುವ ಜ್ಯೋತಿಷಿ ದ್ವಾರಕಾನಾಥ್ ಮನೆಗೆ ಕುಮಾರಸ್ವಾಮಿ ಭೇಟಿ ನೀಡಿದರು.

ಈ ಮೊದಲು ಮಂಡ್ಯ ಲೋಕಸಭಾ ಚುನಾವಣೆಗೆ ತಮ್ಮ ಪುತ್ರ ನಿಖಿಲ್ ಅವರನ್ನು ಕಣಕ್ಕಿಳಿಸುವ ಮೊದಲು ಕುಮಾರಸ್ವಾಮಿಯವರು ದ್ವಾರಕಾನಾಥ್ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದರು.

ಈ ವೇಳೆ ಪೊಲೀಸರು ಮಾಧ್ಯಮದವರ ಚಿತ್ರೀಕರಣಕ್ಕೆ ಅಡ್ಡಿ ಪಡಿಸಿದ ಪ್ರಸಂಗವೂ ನಡೆದಿದೆ.ಮುಖ್ಯಮಂತ್ರಿಗಳ ಭೇಟಿ ಹಿನ್ನೆಲೆಯಲ್ಲಿ ಮಾಧ್ಯಮಗಳು ಚಿತ್ರೀಕರಿಸಲು ಮುನ್ನುಗ್ಗಿದ್ದಾಗ ಬ್ಯಾರಿಕೇಡ್ ಹಾಕಿ ನಿಗದಿಪಡಿಸಿರುವ ಸ್ಥಳದಲ್ಲಿರುವಂತೆ ಪೊಲೀಸರು ಮಾಧ್ಯಮಗಳಿಗೆ ಸೂಚಿಸಿದ್ದಾರೆ. ಇದರಿಂದ ಕೆಲ ಕಾಲ ಮಾಧ್ಯಮದವರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ.

Share This Article