No menu items!
17.4 C
Munich
Friday, August 21, 2026

ಮಳೆ ಹೊಡೆತಕ್ಕೆ ಕೆರೆಗಳಾದ ಬೆಂಗಳೂರು ರಸ್ತೆಗಳು

Must read

ವಿಜಯದಶಮಿ ದಿನ ಬೆಂಗಳೂರು ನಗರದಲ್ಲಿ ಧಾರಾಕಾರ ಮಳೆಯಾಗಿದೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ಆರಂಭವಾದ ಗುಡುಗು ಸಹಿತ ಮಳೆ ಜೋರಾಗಿ ಸುರಿಯುತ್ತಿದ್ದು, ನಗರದ ಹಲವು ರಸ್ತೆಗಳು ಕೆರೆಯಂತಾಗಿದೆ.

ಶುಕ್ರವಾರ ಬೆಳಗ್ಗೆ ಬಿಸಿಲಿನ ವಾತಾವರಣವಿತ್ತು. ಮಧ್ಯಾಹ್ನ 1 ಗಂಟೆಗೆ ಮೋಡ ಕವಿದಿದ್ದು, 3 ಗಂಟೆಗೆ ಸುಮಾರಿಗೆ ಗುಡುಗು ಸಹಿತ ಮಳೆ ಆರಂಭವಾಯಿತು. ಸುಮಾರು ಒಂದೂವರೆ ಗಂಟೆಗಳ ಕಾಲ ನಗರದಲ್ಲಿ ಮಳೆಯಾಗಿದೆ.

 

ಜಯನಗರ, ಹನುಮಂತನಗರ, ಮೆಜೆಸ್ಟಿಕ್, ಬುಲ್ ಟೆಂಪಲ್ ರಸ್ತೆ, ಕತ್ರಿಗುಪ್ಪೆ, ಸೌತ್ ಎಂಡ್ ವೃತ್ತ, ವಿದ್ಯಾಪೀಠ ವೃತ್ತ ಮಂತಾದ ಕಡೆ ಭಾರೀ ಮಳೆಯಾಗಿದೆ. ರಾತ್ರಿ ಸಹ ಮಳೆ ಮುಂದುವರೆಯುವ ಸೂಚನೆ ಇದೆ. ನಗರದಲ್ಲಿ ಸುರಿದ ಮಳೆಯಿಂದಾಗಿ ಹಲವು ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ವಿಜಯದಶಮಿ ಹಬ್ಬದ ಪ್ರಯುಕ್ತ ರಜೆ ಇದ್ದು, ಅಂಗಡಿ ಪೂಜೆಗಳನ್ನು ಮಾಡಲು ಸಿದ್ಧರಾಗುತ್ತಿದ್ದ ಜನರಿಗೆ ಮಳೆ ಸಂಕಷ್ಟ ತಂದಿದೆ.

ಮಳೆಯಿಂದಾಗಿ ಅನಾಹುತವಾದ ಬಗ್ಗೆ ಯಾವುದೇ ದೂರು ಬಂದಿಲ್ಲ ಎಂದು ಬಿಬಿಎಂಪಿ ಸಹಾಯವಾಣಿ ಕೇಂದ್ರ ಮಾಹಿತಿ ನೀಡಿದೆ. ಆದರೆ ಮಲ್ಲೇಶ್ವರ ಸಮೀಪದ ಗಾಯತ್ರಿ ನಗರದಲ್ಲಿ ಮನೆಗಳಿಗೆ ನೀರು ನುಗ್ಗಿದೆ ಎಂಬ ಮಾಹಿತಿ ಸಿಕ್ಕಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article