ಮಂಡ್ಯದಲ್ಲಿ ಚುನಾವಣೆ ಮುಗಿದಿದೆ. ಆದ್ರೆ ಅದರ ಕಾವಿನ್ನೂ ಆರಿಲ್ಲ. ಇದಕ್ಕೆ ಇವತ್ತು ಯಶ್ ನೀಡಿರುವ ಪ್ರತಿಕ್ರಿಯೆ ಸಾಕ್ಷಿಯಾಗಿದೆ. ಚುನಾವಣೆ ಸಮಯದಲ್ಲಿ ಸಿಎಂ ಕುಮಾರಸ್ವಾಮಿ ಸೇರಿ ಯಾವುದೇ ಮುಖಂಡರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಲ್ಲ. ನನ್ನನ್ನು ಟಾರ್ಗೆಟ್ ಮಾಡುವುದು ಅಷ್ಟು ಸುಲಭದ ಮಾತಲ್ಲ. ನಾವು ಜನಗಳ ಆಸ್ತಿ, ನಮ್ಮನ್ನು ಟಾರ್ಗೆಟ್ ಮಾಡುವವರು ಹುಷಾರಾಗಿರಬೇಕು ಅಂತಾ ಟಾಂಗ್ ನೀಡಿದ್ದಾರೆ.
ಇದೇ ವೇಳೆ ನಿಖಿಲ್ ಗೆದ್ದರೆ ಯಶ್, ದರ್ಶನ್ ಪ್ರಚಾರಕ್ಕೆ ಬರಬಾರದು ಅಂತಾ ಶಿವರಾಮೇಗೌಡರ ಹೇಳಿಕೆಗೆ ತಿರುಗೇಟು ನೀಡಿದ ಯಶ್, ಯಾರ ಮಾತಿಗೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಅಂದ್ರು. ಇನ್ನು ಮಂಡ್ಯದಲ್ಲಿ ಅಂಬರೀಷ್, ಸುಮಲತಾ ಅವರ ಮೇಲಿನ ಪ್ರೀತಿಯಿಂದ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ.