ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ ..!
ಶಾರ್ಜಾ : ಸತತ ನಾಲ್ಕು ಗೆಲುವು ಪಡೆದಿರುವ ಕನ್ನಡಿಗ ಕೆ.ಎಲ್ ರಾಹುಲ್ ನೇತೃತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ಇಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣೆಸುತ್ತಿದೆ.
ಟಾಸ್ ಗೆದ್ದ ಪಂಜಾಬ್ ನಾಯಕ ಕೆ.ಎಲ್ ರಾಹುಲ್ ಎದುರಾಳಿಯನ್ನು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
KKR : : ಶುಭಮನ್ ಗಿಲ್, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್ (ವಿಕೆಟ್‌ಕೀಪರ್), ಐಯಾನ್ ಮಾರ್ಗನ್ (ನಾಯಕ), ಸುನಿಲ್ ನರೈನ್, ಪ್ಯಾಟ್ ಕಮ್ಮಿನ್ಸ್, ಲಾಕಿ ಫರ್ಗ್ಯೂಸನ್, ಕಮಲೇಶ್ ನಗರಕೋಟಿ, ಪ್ರಸಿಧ್ ಕೃಷ್ಣ, ವರುಣ್ ಚಕ್ರವರ್ತಿ.
KXIP : : ಕೆ.ಎಲ್. ರಾಹುಲ್ (ವಿಕೆಟ್‌ಕೀಪರ್/ ನಾಯಕ), ಮಂದೀಪ್ ಸಿಂಗ್, ಕ್ರಿಸ್ ಗೇಲ್, ನಿಕೋಲಸ್ ಪೂರನ್, ಗ್ಲೆನ್ ಮ್ಯಾಕ್ಸ್‌ವೆಲ್, ದೀಪಕ್ ಹೂಡ, ಕ್ರಿಸ್ ಜಾರ್ಡನ್, ಮುರುಗನ್ ಅಶ್ವಿನ್, ರವಿ ಬಿಷ್ಣೋಯ್, ಮೊಹಮ್ಮದ್ ಶಮಿ, ಅರ್ಷ್‌ದೀಪ್ ಸಿಂಗ್.
ಆಟೋ ಡ್ರೈವರ್ ಮಗ IAS ಅಧಿಕಾರಿಯಾದ ಸಖತ್ ಸ್ಟೋರಿ..!
ಇವರು ಅನ್ಸಾರ್ ಅಹಮದ್ ಶೇಕ್ . ಈಗ ಐಎಎಸ್ ಅಧಿಕಾರಿ. ಇವರ ತಂದೆ ಆಟೋ ಓಡಿಸುತ್ತಿದ್ದು, ಮನೆಯಲ್ಲಿ ಬೆಟ್ಟದಷ್ಟು ಕಷ್ಟವಿದ್ದರೂ ಕೂಡ ತನ್ನ 21ನೇ ವಯಸ್ಸಿಗೆ ಯುಪಿಎಸ್ ಸಿ ಪರೀಕ್ಷೆಯಲ್ಲಿ ಪಾಸಾಗಿ ಐಎಎಸ್ ಅಧಿಕಾರಿಯಾದ ಅನ್ಸಾರ್ ಶೇಕ್ ಅವರ ಕಥೆ, ನಿಜಕ್ಕೂ ರೋಚಕ. ಸಾಧನೆಗೆ ಯಾವುದೂ ಅಡ್ಡಿಯಲ್ಲ ಅನ್ನೋದಿಕ್ಕೆ ಅನ್ಸಾರ್ ಶೇಕ್ ಸಾಕ್ಷಿ.
ಅನ್ಸಾರ್ ಅಹಮದ್ ಶೇಕ್ ಅವರ ತಂದೆ ಅಹಮದ್ ಶೇಕ್ ಆಟೋ ಡ್ರೈವರ್. ಅವರಿಗೆ ಮೂರು ಜನ ಪತ್ನಿಯರು. ಅವರ ಕುಟುಂಬದಲ್ಲಿ ಒಟ್ಟು ಎರಡು ಹೆಣ್ಣು ಮತ್ತು ಎರಡು ಗಂಡು ಮಕ್ಕಳು. ಅನ್ಸಾರ್ ಎರಡನೇ ಹೆಂಡತಿಯ ಮಗ. ತನ್ನ ತಂದೆ ಆಟೋ ಓಡಿಸಿ ದಿನಕ್ಕೆ 200ರಿಂದ 300 ರೂಪಾಯಿ ಸಂಪಾನೆ ಮಾಡುತ್ತಿದ್ದರೂ ಮನೆಯನ್ನು ನೋಡಿಕೊಳ್ಳುವುದಕ್ಕೆ ಆಗುತ್ತಿರಲಿಲ್ಲ. ಅಷ್ಟೊಂದು ಕಷ್ಟ.
ಅನ್ಸಾರ್ ತನ್ನ 7ನೇ ತರಗತಿಯಲ್ಲಿ ಇರಬೇಕಾದಾಗಲೇ ಗ್ಯಾರೇಜ್ ಕೆಲಸಕ್ಕೆ ಸೇರಿಕೊಂಡ್ರು. ಸಂಸ್ಕಾರಕ್ಕೆ ತನ್ನಿಂದಾದ ಸಹಾಯವನ್ನು ಮಾಡಿ ವಿದ್ಯಾಭ್ಯಾಸವನ್ನು ಕೂಡ ಮುಂದುವರಿಸಿದರು. ಇಷ್ಟೆಲ್ಲ ಕಷ್ಟಪಟ್ಟು ಓದಿದ ಅನ್ಸಾರ್ 10ನೇ ತರಗತಿಯಲ್ಲಿ ಶೇಕಡ 91ರಷ್ಟು ಫಲಿತಾಂಶ ಗಳಿಸುವ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸಿದ್ದರು. ಅನ್ಸಾರ್ ಅವರ ಸಾಧನೆಗೆ ಗ್ಯಾರೇಜ್ ನವರು ಸ್ವಲ್ಪ ಓದಲು ನೆರವಾದರು.
ಇನ್ನು ಮನೆಯಲ್ಲಿ ಇಷ್ಟೆಲ್ಲ ತೊಂದರೆಗಳು ಇರಬೇಕಾದರೆ ಅನ್ಸಾರ್ ಗೆ ಅನಿಸಿದ್ದು ತಾವು ಯುಪಿಎಸ್ ಸಿ ಪರೀಕ್ಷೆ ತೆಗೆದುಕೊಳ್ಳಬೇಕೆಂದು. ಇದನ್ನು ಮನೆಯವರ ಮುಂದೆ ಹೇಳಿದಾಗ ಮನೆಯ ಕಷ್ಟದ ನಡುವೆಯೂ ಓದಿಗೆ ಸಹಾಯ ಮಾಡುವುದಾಗಿ ಹೇಳಿದ್ರು. ಮತ್ತೆ ತಂದೆ ಮತ್ತು ಕುಟುಂಬದ ಇತರೆ ಸದಸ್ಯರು ಬುದ್ಧಿವಂತ ಅನ್ಸಾರ್ ಗೆ ಯುಪಿಎಸ್ ಸಿ ಓದಲು ಆರ್ಥಿಕವಾಗಿ ಸಹಾಯ ಮಾಡಿದ್ರು.
ಓದಿನಲ್ಲಿ ಬಹಳ ಚುರುಕಾಗಿದ್ದ ಅನ್ಸಾರ್ ಶೇಕ್ ದಿನದ 12 ಗಂಟೆ ದುಡಿದು ಅದರ ಜೊತೆಯಲ್ಲಿಯೇ ತಮ್ಮ ಯುಪಿಎಸ್ ಸಿ ಪರೀಕ್ಷೆಗೆ ತಯಾರಿಯನ್ನು ಮಾಡಿಕೊಳ್ಳುತ್ತಿದ್ದರು. ಇವರ ಈ ಪರಿಶ್ರಮಕ್ಕೆ ಇವರ ಸ್ನೇಹಿತರು ಮತ್ತು ರಾಹುಲ್ ಪಾಂಡ್ಯ ಎನ್ನುವ ಶಿಕ್ಷಕರು ಬಹಳಷ್ಟು ಸಹಾಯದ ಮಾಡುತ್ತಿದ್ದರು. ಕೊನೆಗೂ ಅಂದುಕೊಂಡಂತೆ ಅನ್ಸಾರ್ ಅವರು 2015ರಲ್ಲಿ ಯುಪಿಎಸ್ ಸಿ ಪರೀಕ್ಷೆ ಪಾಸ್ ಮಾಡಿದರು. ಜೊತೆಗೆ ಹೊಸ ದಾಖಲೆಯನ್ನೂ ಸೃಷ್ಟಿಸಿದರು.
ಭಾರತದ ಅತೀ ಕಿರಿಯ ವಯಸ್ಸಿಗೆ ಐಎಎಸ್ ಪಾಸ್ ಮಾಡಿದ ಮೊದಲ ವ್ಯಕ್ತಿ ಅನ್ಸಾರ್ ಆಗಿದ್ದಾರೆ. ಇವರಿಗೂ ಮುಂಚೆ ರೋಮನ್ ಸೈನಿ ಎನ್ನುವವರು ತಮ್ಮ 22ನೇ ವಯಸ್ಸಿಗೆ ಈ ಪರೀಕ್ಷೆಯಲ್ಲಿ ಪಾಸ್ ಮಾಡುವ ಮೂಲಕ ಕಿರಿಯ ಐಎಎಸ್ ಆಫೀಸರ್ ಆಗಿದ್ದಾರೆ. ಈಗ ಅವರ ದಾಖಲೆಯನ್ನು ಅನ್ಸಾರ್ ಬ್ರೇಕ್ ಮಾಡಿದ್ದಾರೆ. ಸದ್ಯಕ್ಕೆ ಅನ್ಸಾರ್ ಶೇಕ್ ಅವರು ಪಶ್ಚಿಮ ಬಂಗಾಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
2015ರ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ ಅನ್ಸಾರ್ ಶೇಕ್, ಯುವಕರಿಗೆ ಹೇಳುವ ಮಾತೆನೆಂದರೆ, ಸಾಧನೆ ಮಾಡುವುದಕ್ಕೆ ಯಾವುದೇ ಆಸ್ತಿ ಅಂತಸ್ಸಿನ ಅವಶ್ಯಕತೆ ಇಲ್ಲ. ತಾವು ಈ ಸ್ಥಾನಕ್ಕೆ ಬರುವುದಕ್ಕೂ ಮುಂಚೆ ತಮ್ಮ ಸುತ್ತಮುತ್ತಲ ಮನೆಯವರಿಗೆ ನಂಬಿಕೆ ಇರಲಿಲ್ಲ. ಹಾಗಾಗಿ ಏನಾದರೂ ಮಾಡುತ್ತೇವೆ ಎನ್ನುವ ಛಲವಿದ್ದರೆ ಮಾತ್ರ ಜೀವನದಲ್ಲಿ ಏನನ್ನಾದರೂ ಮಾಡುವುದಕ್ಕೆ ಸಾಧ್ಯ. ಮನಸ್ಸಿದ್ದರೆ ಖಂಡಿತ ಮಾರ್ಗವಿದೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಅನೇಕರಿಗೆ ಸ್ಫೂರ್ತಿಯ ಚಿಲುಮೆ ಯಾಗಿದ್ದದರೆ.