ಹಾವೇರಿ: ಉಪ ಚುನಾವಣೆ ಟಿಕೆಟ್ ಯಾರಿಗೆ ಸಿಗಲಿದೆ ಅನ್ನೋದನ್ನು ಎಐಸಿಸಿ ನಿರ್ಧರಿಸುತ್ತದೆ, ಆದರೆ ಅದಕ್ಕಿನ್ನೂ ಕಾಲಾವಕಾಶವಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಉಪ ಚುನಾವಣೆಗ ಇನ್ನೂ 4 ತಿಂಗಳು ಸಮಯವಿದೆ, ಅದರೆ ಈಗಿಂದಲೇ ಪಕ್ಷ ಸಂಘಟನೆ ಕೆಲಸ ಶುರುಮಾಡಿ, ಮತ ವಿಭಜನೆ ಅಗದಂತೆ ಎಚ್ಚರವಹಿಸಿ ಅಂತ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರಿಂದ ಸೂಚನೆ ಬಂದಿದ್ದು ಅದೇ ನಿಟ್ಟನಲ್ಲಿ ತಾವು ಕಾರ್ಯೋನ್ಮುಖರಾಗಿರುವುದಾಗಿ ಹೇಳಿದರು.
ಇನ್ನೂ ಟಿಕೆಟ್ ಯಾರಿಗೆ ಸಿಗಲಿದೆ ಅನ್ನೋದನ್ನು ಎಐಸಿಸಿ ನಿರ್ಧರಿಸುತ್ತದೆ, ಆದರೆ ಅದಕ್ಕಿನ್ನೂ ಕಾಲಾವಕಾಶವಿದೆ. ಟಿಕೆಟ್ ಬಹಳಷ್ಟು ಜನ ಕೇಳುತ್ತಿದ್ದಾರೆ, ಕೇಳೋದು ತಪ್ಪು ಅಂತ ಹೇಳಲಾಗಲ್ಲ, ಕೇಳಲು ಅವರು ಸ್ವತಂತ್ರರು ಆದರೆ ಅಂತಿಮ ತೀರ್ಮಾನ ತೆಗೆದುಕೊಳ್ಳೋದು, ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಮತ್ತು ಪಕ್ಷದ ಹೈಕಮಾಂಡ್ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಟಿಕೆಟ್ ಯಾರಿಗೆ ಸಿಗಲಿದೆ ಅನ್ನೋದನ್ನು ಎಐಸಿಸಿ ನಿರ್ಧರಿಸುತ್ತದೆ !
Date: