ಟಿಕ್ ಟಾಕ್ ಕ್ರೇಜ್ ದಿನೇ ದಿನೇ ಹೆಚ್ಚುತ್ತಿದೆ. ತಮ್ಮೊಳಗಿನ ನಟನಾ ಪ್ರತಿಭೆಯನ್ನು ಹೊರ ಹಾಕಲು ಜನ ಟಿಕ್ಟಾಕ್ ಅನ್ನು ವೇದಿಕೆಯಾಗಿ ಬಳಸಿಕೊಳ್ತಾ ಇದ್ದಾರೆ. ಆದ್ರೆ, ಅತಿಯಾದ್ರೆ ಅಮೃತವೂ ವಿಷ ಅನ್ನೋ ಹಾಗೆ ಮಹಿಳೆಯೊಬ್ಬರು ಈ ಟಿಕ್ಟಾಕ್ನ ಅತೀವ ಕ್ರೇಜ್ನಿಂದ ಪ್ರಾಣವನ್ನೇ ಬಿಟ್ಟಿದ್ದಾರೆ.
ಆಕೆ ತಮಿಳುನಾಡಿನ ಅರಿಯಲೂರಿನ 24 ವರ್ಷದ ಮಹಿಳೆ ಟಿಕ್ಟಾಕ್ಗಾಗಿ ಜೀವ ಕಳೆದುಕೊಂಡವರು. ಆಕೆ ಸಿಂಗಾಪೂರ್ನಲ್ಲಿ ಕೆಲಸ ಮಾಡ್ತಿರುವ ಪಜಾನಿ ವೇಲ್ ಎಂಬುವವರನ್ನು ಮದ್ವೆ ಆಗಿದ್ದರು. ಪಜಾನಿ ವೇಲ್ ಸಿಂಗಾಪುರದಲ್ಲಿದ್ದಾರೆ. ತಮಿಳುನಾಡಿನಲ್ಲೇ ಇದ್ದ ಮಹಿಳೆ ಮೊಬೈಲ್ ನಲ್ಲಿ ಟಿಕ್ ಟಾಕ್ ಆ್ಯಪ್ ಅನ್ನು ನೋಡುತ್ತಾರೆ. ಟಿಕ್ ಟಾಕ್ ಬಗ್ಗೆ ತಿಳಿದ ಆಕೆ ಆ ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಂಡು ವೀಡಿಯೊ ಮಾಡಿ ಅಪ್ ಮಾಡಲಾರಂಭಿಸಿದ್ದರು. ಟಿಕ್ಟಾಕ್ ಅಡಿಕ್ಟ್ ಆಗಿದ್ದರೆಂದರೆ ಮಕ್ಕಳ ಬಗ್ಗೆಯೂ ಗಮನಹರಿಸದೇ ಟಿಕ್ಟಾಕ್ ನಡೆಸುತ್ತಿದ್ದರಂತೆ..!
ಇದನ್ನು ಗಮಿಸಿದ ಅಕ್ಕ-ಪಕ್ಕದ ಮನೆಯವರು ಸಿಂಗಾಪುರದಲ್ಲಿರುವ ಪಜಾನಿಗೆ ಕಾಲ್ ಮಾಡಿ ನಿನ್ನ ಹೆಂಡ್ತಿ ಬರೀ ಟಿಕ್ ಟಾಕ್ ಎಂದು ಅದರಲ್ಲೇ ಮುಳುಗಿ ಹೋಗಿದ್ದಾಳೆ. ಅವಳು ಮಕ್ಕಳ ಬಗ್ಗೆ ಕೂಡ ಗಮನ ಹರಿಸುತ್ತಿಲ್ಲ ಎಂದು ಹೇಳಿದ್ದಾರೆ. ಆಗ ಹೆಂಡತಿಗೆ ಕರೆ ಮಾಡಿದ ಪಜಾನಿ ಆ ವೀಡಿಯೋ ಗೀಡಿಯಾ ಎಲ್ಲಾ ಬಿಟ್ಟು ಮಕ್ಕಳ ಕಡೆ ಗಮನ ಹರಿಸು ಎಂದು ಗದರಿದ್ದಾರೆ..! ಅಷ್ಟಕ್ಕೇ ಮನನೊಂದ ಆಕೆ ಟಿಕ್ಟಾಕ್ ವೀಡಿಯೋ ಮಾಡುತ್ತಲೇ ವಿಷ ಕುಡಿದು ಸಾವನ್ನಪ್ಪಿದ್ದಾಳೆ..!
ಟಿಕ್ಟಾಕ್ಗಾಗಿ ಪ್ರಾಣವನ್ನೇ ಬಿಟ್ಟ ಮಹಿಳೆ..!
Date: