ಟಿಕ್ ಟಾಕ್ ಅಪ್ಲಿಕೇಷನ್ ನಿಂದ ಹಲವಾರು ಅಹಿತಕರ ಘಟನೆಗಳು ಜರುಗುತ್ತಿವೆ ಇದೀಗ ಮತ್ತೊಂದು ಅಹಿತಕರ ಘಟನೆ ಬೆಂಗಳೂರಿನ ಹನುಮಂತನಗರದಲ್ಲಿ ನಡೆದಿದೆ. ಎಸ್ಎಸ್ಎಲ್ಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಪ್ರಿಯಾಂಕಾ ಶಾಲೆ ಮುಗಿಸಿ ಮನೆಗೆ ಬಂದ ತಕ್ಷಣ ಟಿಕ್ ಟಾಕ್ ವಿಡಿಯೋಗಳನ್ನು ನೋಡಲು ಮೊಬೈಲ್ ತೆಗೆದುಕೊಳ್ಳಲು ಮುಂದಾಗಿದ್ದಾಳೆ. ಟಿಕ್ ಟಾಕ್ ವೀಡಿಯೋಗಳಿಗೆ ಅಡಿಕ್ಟ್ ಆಗಿದ್ದ ಈ ಯುವತಿ ಟಿಕ್ ಟಾಕ್ ವಿಡಿಯೋ ನೋಡುವುದನ್ನು ಹವ್ಯಾಸ ಮಾಡಿಕೊಂಡು ಬಿಟ್ಟಿದ್ದಳು.
ಆದರೆ ಪ್ರಿಯಾಂಕಳ ತಾಯಿ ಓದಿಕೊಳ್ಳುವುದನ್ನು ಬಿಟ್ಟು ಮೊಬೈಲ್ ಹಿಡಿದುಕೊಂಡು ಕುಳಿತಿರುತ್ತೀಯಾ ಎಂದು ಬೈದು ಮೊಬೈಲ್ ಕೊಡಲು ನಿರಾಕರಿಸಿದ್ದಾರೆ. ಇಷ್ಟಾದರೂ ಬಿಡದ ಪ್ರಿಯಾಂಕಾ ತಾಯಿಯ ಜೊತೆಗೆ ಜಗಳಕ್ಕೆ ಇಳಿದಿದ್ದಾರೆ ಆದರೂ ಸಹ ತಾಯಿ ಮೊಬೈಲ್ ಅನ್ನು ಪ್ರಿಯಾಂಕಾಳಿಗೆ ಕೊಟ್ಟಿಲ್ಲ. ತದನಂತರ ಪ್ರಿಯಾಂಕಳ ತಾಯಿ ದೇವಸ್ಥಾನಕ್ಕೆ ತೆರಳಿದ ಸಂದರ್ಭದಲ್ಲಿ ಈಕೆ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾಳೆ. ಕೇವಲ ಒಂದು ಟಿಕ್ ಟಾಕ್ ಗಾಗಿ ಇನ್ನೂ ಬಾಳಿ ಬದುಕಬೇಕಾದ ಯುವತಿ ಪ್ರಾಣ ಬಿಟ್ಟಿರುವುದು ನಿಜಕ್ಕೂ ದುಃಖದ ಸಂಗತಿ.