ಟಿಪ್ಪರ್ ಲಾರಿಗೆ ಪೌರ ಕಾರ್ಮಿಕ ಮಹಿಳೆ ಬಲಿ..!

Date:

ಟಿಪ್ಪರ್ ಲಾರಿಗೆ ಪೌರ ಕಾರ್ಮಿಕ ಮಹಿಳೆ ಬಲಿ..!

ಬೆಂಗಳೂರು: ಟಿಪ್ಪರ್ ಲಾರಿಗೆ ಪೌರ ಕಾರ್ಮಿಕ ಮಹಿಳೆ ಬಲಿಯಾಗಿರುವ ಘಟನೆ ವಿಜಯನಗರ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶ್ರೀರಾಂಪುರ ನಿವಾಸಿ ಸರೋಜಮ್ಮ (51 ಮೃತ ದುರ್ಧೈವಿಯಾಗಿದ್ದು, ಕೆಲಸಕ್ಕೆ ಹಾಜರಾಗಲು ಹೋಗುವಾಗ ಘಟನೆ ನಡೆದಿದೆ. ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ತೀವ್ರರಕ್ತಸ್ರಾವವಾಗಿ ಮಹಿಳೆ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ವಿಜಯನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಅಲ್ಲದೇ ಸ್ಥಳದಲ್ಲಿ ಬಿಬಿಎಮ್ ಪಿ ಸಿಬ್ಬಂದಿ, ಪೌರ ಕಾರ್ಮಿಕರು ಕೂಡ ಇದ್ದರು.
ಸ್ಥಳೀಯ ವ್ಯಕ್ತಿ ರೋಷನ್ ಹೇಳಿದ್ದೇನು!?
ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ವ್ಯಕ್ತಿ ರೋಷನ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಇಂದು ಬೆಳಗ್ಗೆ 6.30ರ ಸುಮಾರಿಗೆ ಸರೋಜಮ್ಮ ಎಂಬ ಮಹಿಳೆ, ಶಿವನಹಳ್ಳಿ ಸಿಗ್ನಲ್ ದಾಟುವಾಗ ಲಾರಿ ಡಿಕ್ಕಿಯಾಗಿದೆ. ಚಾಲಕ ಗ್ರೀನ್ ಸಿಗ್ನಲ್ ಬಿತ್ತು ಅಂತಾ ಆತ ಗಾಡಿ ಮೂವ್ ಮಾಡಿದ್ದಾನೆ..
ಮೊಬೈಲ್ ನಲ್ಲಿ ಮಾತಾಡ್ಕೊಂಡು ಆಕೆ ಇರೋದು ನೋಡದೆ ಹೋಗಿದಾನೆ. ಲಾರಿಯ ಮುಂದಿನ‌ ಚಕ್ರಕ್ಕೆ ಸಿಲುಕಿ ಆಕೆ ಘಟನಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.ಇನ್ನು ಎರಡು ಮೂರು ತಿಂಗಳಲ್ಲಿ ಆಕೆ ಕೆಲಸ ಪರ್ಮನೆಂಟ್ ಆಗ್ತಿತ್ತಂತೆ. ಅಷ್ಟರಲ್ಲಿ ಈ ರೀತಿ ಘಟನೆ ಆಗಿದೆ ಎಂದು ಸ್ಥಳೀಯ ವ್ಯಕ್ತಿ ರೋಷನ್ ಹೇಳಿಕೆ ಕೊಟ್ಟಿದ್ದಾರೆ.

Share post:

Subscribe

spot_imgspot_img

Popular

More like this
Related

ಲಂಕಾ ನೆಲದಲ್ಲಿ ಕ್ರಿಕೇಟ್ ಕ”ಲಾ”ರವ !

ಲಂಕಾ ನೆಲದಲ್ಲಿ ಕ್ರಿಕೇಟ್ ಕ"ಲಾ"ರವ ! "ಲಾಯರ್" ಗಳ ಬಗ್ಗೆ ನಿಮಗೆಲ್ಲ ಗೊತ್ತೆ...

ಮೆಟ್ರೋ ಮೂರನೇ ಹಂತದ ಯೋಜನೆಯ 100 ಕಿ.ಮೀ ಕಾಮಗಾರಿಗೆ ಜನವರಿಯಲ್ಲಿ ಟೆಂಡರ್: ಡಿ.ಕೆ. ಶಿವಕುಮಾರ್

ಮೆಟ್ರೋ ಮೂರನೇ ಹಂತದ ಯೋಜನೆಯ 100 ಕಿ.ಮೀ ಕಾಮಗಾರಿಗೆ ಜನವರಿಯಲ್ಲಿ ಟೆಂಡರ್:...

ಸರ್ಫೆಸಿ ಕಾಯ್ದೆಗೆ ಪರಿಹಾರ; ದಿಲ್ಲಿಗೆ ನಿಯೋಗ ಬನ್ನಿ: ಹೆಚ್.ಡಿ. ಕುಮಾರಸ್ವಾಮಿ ಸಲಹೆ

ಸರ್ಫೆಸಿ ಕಾಯ್ದೆಗೆ ಪರಿಹಾರ; ದಿಲ್ಲಿಗೆ ನಿಯೋಗ ಬನ್ನಿ: ಹೆಚ್.ಡಿ. ಕುಮಾರಸ್ವಾಮಿ ಸಲಹೆ ಚಿಕ್ಕಮಗಳೂರು:...

ಮತ್ತೆ ಏರಿಕೆ ಕಂಡ ಬಂಗಾರ ಬೆಲೆ: ಇಂದು ಎಷ್ಟಿದೆ ಗೊತ್ತಾ ಚಿನ್ನದ ದರ?

ಮತ್ತೆ ಏರಿಕೆ ಕಂಡ ಬಂಗಾರ ಬೆಲೆ: ಇಂದು ಎಷ್ಟಿದೆ ಗೊತ್ತಾ ಚಿನ್ನದ...