ಟಿವಿ ಆ್ಯಂಕರ್ ಮಾಡಿದ ಪ್ರಪೋಸ್​​​ಗೆ ದ್ರಾವಿಡ್ ರಿಯಾಕ್ಷನ್ ಹೀಗಿತ್ತು!

Date:

ರಾಹುಲ್ ದ್ರಾವಿಡ್.., ಈ ಹೆಸರಲ್ಲೇ ಏನೋ ಒಂದು ಅಟ್ರಾಕ್ಷನ್,‌ಮ್ಯಾಗ್ನೆಟಿಕ್ ಪವರ್ ಇದೆ ಅಲ್ವಾ? ಹ್ಞೂಂ,  ಪ್ರತಿಯೊಬ್ಬ ಪ್ಲೇಯರ್ ಕೂಡ ತನ್ನದೇ ಆದ ಫ್ಯಾನ್ ಫಾಲೋರ್ಸ್ ಹೊಂದಿರ್ತಾರೆ. ಆದರೆ, ದ್ರಾವಿಡ್ ವಿಷ್ಯಕ್ಕೆ ಬಂದ್ರೆ,  ಕ್ರಿಕೆಟ್ ಅಭಿಮಾನಿಗಳೆಲ್ಲಾ ದ್ರಾವಿಡ್ ಅವರ ಅಭಿಮಾನಿಗಳೇ..! ಇದೇನು ಅತಿಶಯೋಕ್ತಿ ಅಂತ ಅನ್ಸಲ್ಲ. ದ್ರಾವಿಡ್ ಅವ್ರನ್ನ ಇಷ್ಟ ಪಡ್ದೇ ಇರೋರು ಯಾರಿದ್ದಾರೆ ಹೇಳಿ..?

ನಮ್ಮ ಹೆಮ್ಮೆಯ ಕನ್ನಡಿಗ ದ್ರಾವಿಡ್ ಕ್ರಿಕೆಟ್ ಮಾತ್ರವಲ್ಲ,ಅದರಿಂದಾಚೆಗೂ ಎಲ್ರಿಗೂ ಇಷ್ಟ ಆಗ್ತಾರೆ. ಅಂಥಾ ಒಳ್ಳೆಯ ವ್ಯಕ್ತಿತ್ವ ಅವರದ್ದು. ಕ್ರಿಕೆಟ್ ಆಯ್ತು ,ತಾವಾಯ್ತು, ತಮ್ ಕೆಲಸ ಆಯ್ತು ಅಂತ ತಮ್ ಪಾಡಿಗೆ ತಾವಿರೋ ದ್ರಾವಿಡ್ ಎಷ್ಟೋ ಹುಡ್ಗೀರ ನಿದ್ದೆ ಗೆಡಿಸಿದ್ದೂ ಇದೆ!

ಆದರೆ ,ದ್ರಾವಿಡ್ ಬೇಡದ ವಿಚಾರಗಳ ಬಗ್ಗೆ ತಲೆಕೆಡಿಸಿಕೊಂಡವರಲ್ಲ.‌ ಇಂಥಾ ದ್ರಾವಿಡ್​ಗೆ ಫೀಮೇಲ್ ಆ್ಯಂಕರ್ ಒಬ್ಬರು ಪ್ರಪೋಸ್ ಮಾಡಿದ್ದರು! ವಿಲ್ ಯು ಮ್ಯಾರಿ ಮಿ ಅಂತ ಡೈರೆಕ್ಟ್ ಆಗಿ ಕೇಳಿದ್ರು! ಇದ್ದಕ್ಕಿದ್ದಂತೆ ಆಕೆ ಹಾಗೆ ಕೇಳಿದಾಗ ದ್ರಾವಿಡ್ ಫುಲ್ ಶಾಕ್!

ಈ ಸ್ಟೋರಿ ಒಂದಿಷ್ಟು ಜನರಿಗೆ ಗೊತ್ತು. ಕೆಲವರಿಗೇ ಇವತ್ತಿಗೂ ಗೊತ್ತಿಲ್ಲ! ದ್ರಾವಿಡ್ ಲೈಫಲ್ಲೂ ಹೀಗಾಗಿತ್ತಾ ಅಂತ ನೀವು ಕೇಳ್ಬಹುದಲ್ಲ?

ಹೌದು, ಒಂದ್ ದಿನ ದ್ರಾವಿಡ್ ಮುಂಬೈಯಲ್ಲಿ ತಾವು ಉಳಿದುಕೊಂಡಿದ್ದ ರೂಂನಲ್ಲಿ ತಿಂಡಿ ತಿನ್ತಿರ್ತಾರೆ.  ಫೀಮೇಲ್ ಆ್ಯಂಕರ್ ಒಬ್ರು ಆ ರೂಂಗೆ ಬರ್ತಾರೆ. ‘ನಾನು ಸಿಂಗಾಪುರ್​​ನ ಟಿವಿ ಚಾನಲ್ ಒಂದರಿಂದ ಬಂದಿದ್ದೀನಿ. ಸಿಂಗಾಪುರ್​ನಲ್ಲಿ ತುಂಬಾ ಜನ ನಿಮ್ ಫ್ಯಾನ್ಸ್ ಇದ್ದಾರೆ. ಹಾಗಾಗಿ ಚಿಕ್ಕ ಇಂಟರ್ ವ್ಯೂ ಮಾಡ್ತೀನಿ ಅಂತ ರಿಕ್ವೆಸ್ಟ್ ಮಾಡಿಕೊಳ್ತಾರೆ. ಆ ಆ್ಯಂಕರ್ ಫೋರ್ಸ್ ಮಾಡಿದ್ರಿಂದ ದ್ರಾವಿಡ್ ಇಂಟರ್ ವ್ಯೂಗೆ ಓಕೆ ಅಂತಾರೆ.

ನಾನು ಮುಂಬೈನಿಂದ ಸೈಲಿ‌‌‌ ಅಂತ ಇಂಟ್ರುಡ್ಯೂಸ್ ಮಾಡ್ಕೊಂಡು ಇಂಟರ್ ವ್ಯೂ ಶುರುಮಾಡ್ತಾರೆ ಆ ಆ್ಯಂಕರ್.  ಸ್ವಲ್ಪ ಹೊತ್ತಾದ್ಮೇಲೆ, ಅಲ್ಲಿದ್ದವರನ್ನು ಹೊರಗೆ ಕಳುಹಿಸಿ, ದ್ರಾವಿಡ್ ಜೊತೆ ಒಬ್ಬಳೇ ಕೂತು ಮಾತಾಡ್ತಾಳೆ! ದ್ರಾವಿಡ್ ಅವಳ ಮಾತನ್ನು ಕೇಳ್ತಾ ತಮ್ ಪಾಡಿಗೆ ತಾವು ತಿಂಡಿ ತಿನ್ತಿರ್ತಾರೆ. ದ್ರಾವಿಡ್ ಪಕ್ಕದಲ್ಲೇ ಬಂದು ಕುಳಿತ ಆಕೆ ಮಾತಾಡ್ತಾ ಮಾತಾಡ್ತಾ ದ್ರಾವಿಡ್ ಗೆ ‘ವಿಲ್ ಯು ಮ್ಯಾರಿ ಮಿ’ ಅಂತ ಕೇಳಿ ಕೈ ಹಿಡಿದು‌ಕೊಳ್ತಾಳೆ! ಆಗ ಸಹಜವಾಗಿ ದ್ರಾವಿಡ್ ಗೆ ಶಾಕ್..!  ಏನ್ ಹೇಳೋದು ಅಂತ ಗೊತ್ತಾಗ್ದೇ ಕೂತಲ್ಲಿಂದ ಎದ್ದು ಹೊರಗೆ ಹೋಗೋಕೆ ರೆಡಿ ಆಗ್ತಾರೆ. ಆಗ ಆ ಯಂಗ್ ಆ್ಯಂಕರ್ ತನ್ನ ತಂದೆಯನ್ನು ಕರೀತಾಳೆ.

ಬಾಗಿಲಲ್ಲಿದ್ದ ಆಕೆಯ ತಂದೆ ದ್ರಾವಿಡ್ ಅವರನ್ನು ಹೊರ ಹೋಗದಂತೆ ತಡೆದು, ಕುಳಿತುಕೊಳ್ಳಿ ‘ಸಚಿನ್’ ಅಂತ  ಹೇಳ್ತಾರೆ. ಕನ್ ಫ್ಯೂಸ್ ಆದ್ರಾ? ಇಷ್ಟೊತ್ತು ದ್ರಾವಿಡ್ ಸ್ಟೋರಿ ಹೇಳ್ತಿದ್ರಿ, ಸಚಿನ್ ಹೇಗೆ ಬಂದ್ರು ಅಂತ..?

ಆ್ಯಂಕರ್ ತಂದೆ ದ್ರಾವಿಡ್ ಅವರನ್ನೇ ಅವ್ರು ಸಚಿನ್ ಅಂತ ಕರೆದಿದ್ದಾಗಿತ್ತು!  ಆಗ ಆ ಆ್ಯಂಕರ್ ಸಚಿನ್ ಅಲ್ಲ ರಾಹುಲ್ ರಾಹುಲ್ ಅಂತ ಅಪ್ಪಗೆ ಅರ್ಥಮಾಡಿಸ್ತಾಳೆ!

ಬಳಿಕ ದ್ರಾವಿಡ್ ಸೋಫಾ ಮೇಲೆ ಕೂತ್ಕೊಂಡು ನಿಂಗೆ ಎಷ್ಟು ವರ್ಷ ಅಂತ ಆಕೆಗೆ ಕೇಳ್ತಾರೆ. ಏಜ್ ಕೇಳಿದ್ದು ಮದ್ವೆ ಆಗೋಕೆ ಅಲ್ಲ. ಬುದ್ಧಿ ಹೇಳೋಕೆ!

ಆಕೆ ಹೇಳ್ತಾಳೆ ನನ್ನ ವಯಸ್ಸು 20 ಅಂತ. ಆಗ ದ್ರಾವಿಡ್, ಹ್ಞಾಂ ಇನ್ನೂ ನಿಂಗೆ 20 ವರ್ಷ ಚೆನ್ನಾಗಿ ಓದು ಅಂತ ಬುದ್ಧಿ ಮಾತ್ ಹೇಳಿ ಹೊರಗೆ ಹೋಗ್ತಾರೆ.ಹೀಗೆ ಮದ್ವೆ ಆಗ್ತೀನಿ ಅಂದಿದ್ದ ಹುಡ್ಗಿಗೆ ಓದು ಅಂದಿದ್ರು ದ್ರಾವಿಡ್!

ಅಂದಹಾಗೆ  ಈ ವಿಡಿಯೋ ನೀವು ನೋಡಿರ್ಬಹುದು? ನಿಮ್ಗೆ ಗೊತ್ತಿರಲೂಬಹುದು. ಇದು ರಿಯಲ್ ಅಲ್ಲ. ರಾಹುಲ್ ದ್ರಾವಿಡ್ ಈ ರೀತಿ ಎಂಟಿವಿ ಬಕ್ರಾ ಆಗಿದ್ರು.

ನಟಿಯೊಬ್ಬಳು ಆ್ಯಂಕರ್ ಗೆಟಪ್​ನಲ್ಲಿ ಬಂದು ದ್ರಾವಿಡ್ ಅವ್ರನ್ನ ಬಕ್ರಾ ಮಾಡಿದ್ದಳು. ದ್ರಾವಿಡ್ ಅವರು ಈ ಪ್ರೋಗ್ರಾಂನಲ್ಲಿ ಬಕ್ರಾ ಆಗಿರ್ಬಹುದು. ಬಟ್, ಇದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯೂ ಹೌದು. ಏನಂತೀರಿ? ಇತ್ತೀಚೆಗಷ್ಟೇ ರಿಯಾಲಿಟಿ ಶೋನಲ್ಲಿ ಸೆಕ್ಸ್ ಮತ್ತು ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಕೊಟ್ಟ ಹಾರ್ದಿಕ್ ಪಾಂಡ್ಯ, ಕೆ.ಎಲ್ ರಾಹುಲ್ ಅಂತ ಯುವ ಕ್ರಿಕೆಟಿಗರು, ಸ್ಟಾರ್ ಗಳು ದ್ರಾವಿಡ್ ಅವರನ್ನು ನೋಡಿ ಕಲಿಯಬೇಕು.

Share post:

Subscribe

spot_imgspot_img

Popular

More like this
Related

ಧರ್ಮಸ್ಥಳ ಕೇಸ್: ತರಾತುರಿಯಲ್ಲಿ ಎಸ್‌ಐಟಿ ರಚಿಸಿ ಶ್ರೀ ಕ್ಷೇತ್ರಕ್ಕೆ ಧಕ್ಕೆ – ನಿಖಿಲ್ ಕುಮಾರಸ್ವಾಮಿ

ಧರ್ಮಸ್ಥಳ ಕೇಸ್: ತರಾತುರಿಯಲ್ಲಿ ಎಸ್‌ಐಟಿ ರಚಿಸಿ ಶ್ರೀ ಕ್ಷೇತ್ರಕ್ಕೆ ಧಕ್ಕೆ -...

ಧರ್ಮಸ್ಥಳ ಪ್ರಕರಣ: ಜನರಿಗೆ ವಾಸ್ತವಾಂಶ ತಿಳಿಸುವುದಷ್ಟೇ ಸರ್ಕಾರದ ಉದ್ದೇಶ – ಡಿ.ಕೆ. ಶಿವಕುಮಾರ್

ಧರ್ಮಸ್ಥಳ ಪ್ರಕರಣ: ಜನರಿಗೆ ವಾಸ್ತವಾಂಶ ತಿಳಿಸುವುದಷ್ಟೇ ಸರ್ಕಾರದ ಉದ್ದೇಶ - ಡಿ.ಕೆ....

ಮತ್ತೆ ಏರಿಕೆ ಕಂಡ ಬಂಗಾರ: ಇಂದು ಚಿನ್ನದ ಬೆಲೆ ಎಷ್ಟು ಏರಿಕೆ ಆಗಿದೆ ಗೊತ್ತಾ?

ಮತ್ತೆ ಏರಿಕೆ ಕಂಡ ಬಂಗಾರ: ಇಂದು ಚಿನ್ನದ ಬೆಲೆ ಎಷ್ಟು ಏರಿಕೆ...

ನವರಾತ್ರಿಯ ಆರನೇ ದಿನ (ಷಷ್ಠೀ ತಿಥಿ) ಪೂಜಿಸಲ್ಪಡುವ ದೇವಿ ಮಾ ಕಾತ್ಯಾಯನಿ ಕಥೆ !

ನವರಾತ್ರಿಯ ಆರನೇ ದಿನ (ಷಷ್ಠೀ ತಿಥಿ) ಪೂಜಿಸಲ್ಪಡುವ ದೇವಿ ಮಾ ಕಾತ್ಯಾಯನಿ...