ಡೆಹ್ರಾಡೂನ್ : ಟಿವಿಯಲ್ಲಿ ಪ್ರಸಾರವಾಗುವ ಕ್ರೈಂ ಶೋನಿಂದ ಪ್ರೇರೇಪಿತರಾಗಿ ಇಬ್ಬರು ಅಪ್ರಾಪ್ತೆಯರು ಎರಡು ವರ್ಷದ ಸಹೋದರನನ್ನೇ ಕೊಲೆಗೈದ ಘಟನೆ ಬೆಳಕಿಗೆ ಬಂದಿದೆ.
ಉತ್ತರಾಖಂಡ್ನ ಹರಿದ್ವಾರದ ಜವಲಪುರದಲ್ಲಿ ಘಟನೆ ನಡೆದಿದೆ. ಅಪ್ರಾಪ್ತೆಯರನ್ನು ಪೊಲೀಸರು ಬಂಧಿಸಿದ್ದು, ಹೇಗೆ ಕೊಲೆ ಮಾಡಿದ್ದೀರಿ ಎಂದು ಪ್ರಶ್ನಿಸಿದಾಗ ಆಘಾತಕಾರಿ ವಿಷಯ ತಿಳಿದಿದೆ. ಕ್ರೈಂ ಶೋ ನೋಡಿ ನದಿಯಲ್ಲಿ ಮುಳುಗಿಸಿ ಕೊಲೆಗೈಯಲು ಸಂಚು ರೂಪಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ನವೆಂಬರ್ 29ರಂದು ಮಗುವಿನ ದೇಹ ಗಂಗಾ ನದಿಯಲ್ಲಿ ತೇಲುತ್ತಿರುವುದನ್ನು ಕಂಡ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ತನಿಖೆ ವೇಳೆ ಅಪ್ರಾಪ್ತೆಯರು ಎಸಗಿರುವ ಕೃತ್ಯ ಬಯಲಾಗಿದೆ. ತಮ್ಮನನ್ನು ನೋಡಿಕೊಳ್ಳುವುದು ಕಿರಿಕಿರಿ ಎನ್ನಿಸುತ್ತಿತ್ತು. ಕಾಟ ತಾಳಲಾರದೆ ಕೊಲೆ ಮಾಡಲು ನಿರ್ಧರಿಸಿದೆ ಎಂದು ಬಾಲಕನ ಅಕ್ಕ ಹೇಳಿದ್ದಾಳೆ.