ರಿಯಾಲಿಟಿ ಶೋ ಎಂದರೆ ನೈಜತೆಯನ್ನು ಹೊಂದಿರುವಂತಹ ಮನರಂಜನಾ ಕಾರ್ಯಕ್ರಮ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ ಆದರೆ ಇದೀಗ ಗಾಯಕಿ ಬಿಕೆ ಸುಮಿತ್ರಾ ಅವರು ಬಿಚ್ಚಿಟ್ಟಿರುವ ಸ್ಫೋಟಕ ಮಾಹಿತಿಯನ್ನು ನೋಡಿದರೆ ಇದು ರಿಯಾಲಿಟಿ ಶೋನ ಅಥವಾ ರಿಯಾಲಿಟಿ ಎಂಬ ಮುಖವಾಡವನ್ನು ಆಗುತ್ತಿರುವ ಪ್ರೀ ಫಿಕ್ಸೆಡ್ ಶೋನ ಎಂಬ ಅನುಮಾನ ಬಂದೇ ಬರುತ್ತದೆ. ಹೌದು ಏಕೆಂದರೆ ಇತ್ತೀಚೆಗಷ್ಟೇ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಬಿಕೆ ಸುಮಿತ್ರಾ ಅವರು ಮಾತನಾಡಿದರು.
ಈ ವೇಳೆ ಮಾತನಾಡಿದ ಅವರು ರಿಯಾಲಿಟಿ ಶೋಗಳು ಯಾವುದೂ ನಿಜವಲ್ಲ ಯಾವ ಸ್ಪರ್ಧಿ ಗೆಲ್ಲಬೇಕು ಎಂಬುದು ಮೊದಲೇ ನಿಶ್ಚಯವಾಗಿರುತ್ತದೆ. ಹೀಗಾಗಿಯೇ ಇಂತಹ ಕಾರ್ಯಕ್ರಮಕ್ಕೆ ಹೋಗುವುದನ್ನು ನಾನು ನಿಲ್ಲಿಸಿದ್ದೇನೆ ಎಂದು ಬಿಕೆ ಸುಮಿತ್ರಾ ಅವರು ವೇದಿಕೆಯ ಮೇಲೆಯೇ ತುಂಬಾ ಓಪನ್ ಆಗಿ ಹೇಳಿದ್ದಾರೆ. ನಾಲ್ಕೈದು ಹಾಡನ್ನು ಹಾಡಿ ಫೇಮಸ್ ಆದವರನ್ನು ಜಡ್ಜ್ ಎಂದು ತಂದು ಕೂರಿಸುತ್ತಾರೆ ಅನರ್ಹರನ್ನು ಮೊದಲೇ ಫಿಕ್ಸ್ ಮಾಡಿ ಗೆಲ್ಲಿಸುತ್ತಾರೆ ಎಂದು ರಿಯಾಲಿಟಿ ಶೋ ವಿರುದ್ಧ ಬಿಕೆ ಸುಮಿತ್ರಾ ಅವರು ಮಾತನಾಡಿದರು.