ಟಿ20 ರ್ಯಾಂಕಿಂಗ್ ಕನ್ನಡಿಗ ರಾಹುಲ್ 2 ನೇ ಸ್ಥಾನ – ಕೊಹ್ಲಿ ಎಷ್ಟನೇ ರ್ಯಾಂಕ್?

Date:

ದುಬೈ: ಭಾರತ ತಂಡದ ಆರಂಭಿಕ ಬ್ಯಾಟ್ಸ್​ಮನ್​ ಹಾಗೂ ಕನ್ನಡಿಗ ಕೆಎಲ್​ ರಾಹುಲ್ ಐಸಿಸಿಯ ಬುಧವಾರ ಬಿಡುಗಡೆ ಮಾಡಿರುವ ನೂತನ ಶ್ರೇಯಾಂಕ ಪಟ್ಟಿಯಲ್ಲಿ 2ನೇ ಸ್ಥಾನವನ್ನು ಉಳಿಸಿಕೊಂಡಿದ್ದರೆ, ನಾಯಕ ಕೊಹ್ಲಿ ಒಂದು ಸ್ಥಾನ ಬಡ್ತಿ ಪಡೆದು 6ನೇ ಸ್ಥಾನಕ್ಕೇರಿದ್ದಾರೆ.

816 ಅಂಕಗಳನ್ನು ಹೊಂದಿರುವ ಕೆಎಲ್​ ರಾಹುಲ್ 915 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿರುವ ಡೇವಿಡ್ ಮಲನ್​ ನಂತರದ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಬಾಬರ್​ ಅಜಮ್ (801) ಒಂದು ಸ್ಥಾನ ಮೇಲೇರಿ 3ಕ್ಕೇರಿದ್ದರೆ, ಆಸ್ಟ್ರೇಲಿಯಾದ ನಾಯಕ ಫಿಂಚ್​(788) 3 ರಿಂದ 4ಕ್ಕೆ ಕುಸಿದಿದ್ದಾರೆ. ದಕ್ಷಿಣ ಆಫ್ರಿಕಾದ ವಾನ್ ಡರ್​ ಡಾಸೆನ್ (700) 5 ರಲ್ಲಿದ್ದರೆ ಕೊಹ್ಲಿ (697) 6ನೇ ಶ್ರೇಯಾಂಕ ಪಡೆದಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ 99 ರನ್​ಗಳಿಸಿದ ಡೆವೋನ್ ಕಾನ್ವೆ 46 ಸ್ಥಾನಕ್ಕೆ ಜಿಗಿದು 17ಕ್ಕೆ ಹಾಗೂ 2ನೇ ಪಂದ್ಯದಲ್ಲಿ 97 ರನ್​ಗಳಿಸಿದ ಮಾರ್ಟಿನ್ ಗಪ್ಟಿಲ್​ 3 ಸ್ಥಾನ ಬಡ್ತಿ ಪಡೆದು 11ನೇ ಶ್ರೇಯಾಂಕ ಪಡೆದಿದ್ದಾರೆ.

ಬೌಲರ್​ಗಳ ರ್ಯಾಂಕಿಂಗ್​ನಲ್ಲಿ ಅಫ್ಘಾನಿಸ್ತಾನದ ರಶೀದ್ ಖಾನ್​ (736) ಅಗ್ರಸ್ಥಾನದಲ್ಲಿದ್ದಾರೆ, ನಂತರ ದಕ್ಷಿಣ ಆಫ್ರಿಕಾದ ತಬ್ರೈಜ್ ಶಂಸಿ (733), ಅಫ್ಘನ್​ನ ಮುಜೀಬ್​ (730), ಇಂಗ್ಲೆಂಡ್​ನ ಆದಿಲ್​ ರಶೀದ್​ (700) ಆಸ್ಟ್ರೇಲಿಯಾದ ಆ್ಯಡಂ ಜಂಪಾ (676) ಮೊದಲ 5 ಸ್ಥಾನದಲ್ಲಿದ್ದಾರೆ. ಟಾಪ್​ 10ರಲ್ಲಿ ಯಾವುದೇ ಭಾರತೀಯ ಬೌಲರ್​ ಕಾಣಿಸಿಕೊಂಡಿಲ್ಲ.

 

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...