ಟಿ20 ವಿಶ್ವಕಪ್ 2021ಗಾಗಿ ಪ್ರಕಟವಾಗಿರುವ ದಕ್ಷಿಣ ಆಫ್ರಿಕಾ ತಂಡ ಬಲಿಷ್ಠವಾಗಿದೆ. ಆದರೆ ಆರಂಭಿಕ ಬ್ಯಾಟ್ಸ್‌ಮನ್ ಜನ್ನೆಮನ್ ಮಲನ್ ತಂಡದಲ್ಲಿ ಕಾಣಿಸಿಕೊಂಡಿಲ್ಲ. ತೆಂಬ ಬವುಮಾ ತಂಡದ ನಾಯಕರಾಗಿ ಹೆಸರಿಸಲ್ಪಟ್ಟಿದ್ದಾರೆ. ಇನ್ನು ತಂಡದ ಪ್ರಮುಖ ಆಟಗಾರ ಕ್ವಿಂಟನ್ ಡಿ ಕಾಕ್ ವಿಶ್ವಕಪ್ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಐಡನ್ ಮಾರ್ಕ್ರಮ್ ಅವರು ಟಾಪ್ ಆರ್ಡರ್‌ನ ಮೂರನೇ ಆಯ್ಕೆಯ ಆಟಗಾರನಾಗಿ ಆರಿಸಲ್ಪಟ್ಟಿದ್ದಾರೆ.
ಇನ್ನು ತಂಡದ ಪ್ರಮುಖ ಸ್ಪಿನ್ನರ್‌ಗಳಲ್ಲಿ ಕೇಶವ್ ಮಹರಾಜ್, ಜಾರ್ನ್ ಫಾರ್ಚ್ಯುಯಿನ್ ಮತ್ತು ಟಿ20ಐ ವಿಶ್ವ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿರುವ ತಬ್ರೈಝ್ ಶಂಸಿ ವೀಶ್ವಕಪ್ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಐಡೆನ್ ಮಾರ್ಕ್ರಮ್ ಅವಶ್ಯಕತೆ ಬಿದ್ದಾಗ ಬಳಸಿಕೊಳ್ಳಬಹುದುದಾದ ಸ್ಪಿನ್ನರ್ ಆಗಿದ್ದಾರೆ.
ಅಕ್ಟೋಬರ್ 17ರಿಂದ ನವೆಂಬರ್ 14ರ ವರೆಗೆ ಟಿ20 ವಿಶ್ವಕಪ್ ಟೂರ್ನಿ ಯುಎಇ ಮತ್ತು ಓಮನ್‌ನಲ್ಲಿ ನಡೆಯಲಿದೆ. ಆರಂಭಿಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯಾದ ಸವಾಲು ಸ್ವೀಕರಿಸಲಿದೆ. ಅಕ್ಟೋಬರ್ 23ರಂದು ಅಬುಧಾಬಿಯಲ್ಲಿ ಈ ಪಂದ್ಯ ನಡೆಯಲಿದೆ.
ಟಿ20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ತಂಡ
ತೆಂಬಾ ಬವುಮಾ (ಕ್ಯಾಪ್ಟನ್), ಕೇಶವ್ ಮಹಾರಾಜ್, ಕ್ವಿಂಟನ್ ಡಿ ಕಾಕ್, ಜಾರ್ನ್ ಫಾರ್ಚ್ಯುಯಿನ್, ರೀಜಾ ಹೆಂಡ್ರಿಕ್ಸ್, ಹೆನ್ರಿಕ್ ಕ್ಲಾಸೆನ್, ಐಡೆನ್ ಮಾರ್ಕ್ರಮ್, ಡೇವಿಡ್ ಮಿಲ್ಲರ್, ವಿಯಾನ್ ಮುಲ್ಡರ್, ಲುಂಗಿ ಎನ್‌ಗಿಡಿ, ಅನ್ರಿಚ್ ನಾರ್ಟ್ಜೆ, ಡ್ವೇನ್ ಪ್ರಿಟೋರಿಯಸ್, ಕಾಗಿಸೊ ರಬಾಡಾ, ತಬ್ರೈಝ್ ಶಂಸಿ, ರಾಸ್ಸಿ ವ್ಯಾನ್ ಡೆರ್ ಡಸೆನ್,
ಮೀಸಲು ಆಟಗಾರರು: ಆಂಡಿಲೆ ಫೆಹ್ಲುಕ್ವಾಯೋ, ಜಾರ್ಜ್ ಲಿಂಡೆ, ಲಿಜಾಡ್ ವಿಲಿಯಮ್ಸ್.