ನವೆಂಬರ್ 3 ರಿಂದ ಆರಂಭವಾಗಲಿರುವ ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಟಿ ಟ್ವೆಂಟಿ ಸರಣಿಗೆ ಟೀಂ ಇಂಡಿಯಾ ತಂಡ ಪ್ರಕಟವಾಗಿದೆ. ಇನ್ನು ಬಾಂಗ್ಲಾ ವಿರುದ್ಧದ ಮೂರು ಟಿ ಟ್ವೆಂಟಿ ಪಂದ್ಯಗಳಿಗೂ ಸಹ ರೋಹಿತ್ ಶರ್ಮಾ ಅವರು ನಾಯಕರಾಗಲಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಅವರು ಟಿ ಟ್ವೆಂಟಿ ಪಂದ್ಯಗಳನ್ನು ಆಡುತ್ತಿಲ್ಲ ಹೀಗಾಗಿ ರೋಹಿತ್ ಶರ್ಮಾ ಅವರಿಗೆ ನಾಯಕ ಪಟ್ಟ ದೊರಕಿದೆ. ಅಷ್ಟೇ ಅಲ್ಲದೆ ಮನೀಶ್ ಪಾಂಡೆ, ಕೆಎಲ್ ರಾಹುಲ್ ಅವರಿಗೆ ಟೀಂ ಇಂಡಿಯಾದಲ್ಲಿ ಆಡಲು ಅವಕಾಶ ದೊರಕಿದೆ.
ಇನ್ನು ಇದಾದ ಬಳಿಕ ನವೆಂಬರ್ 14 ರಿಂದ ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿ ಆರಂಭವಾಗಲಿದ್ದು ಕೊಹ್ಲಿ ಅವರು ಮತ್ತೆ ಟೀಂ ಇಂಡಿಯಾವನ್ನು ಸೇರಲಿದ್ದು ನಾಯಕತ್ವವನ್ನು ಅವರೇ ಮುನ್ನಡೆಸಲಿದ್ದಾರೆ. ಟಿ ಟ್ವೆಂಟಿ ಪಂದ್ಯಗಳಿಗೆ ಮಾತ್ರ ಕೊಹ್ಲಿ ಅವರು ಅಲಭ್ಯರಾಗಲಿದ್ದು ಟೆಸ್ಟ್ ಸರಣಿ ಆರಂಭವಾದಾಗ ಅವರು ಮತ್ತೆ ಟೀಂ ಇಂಡಿಯಾವನ್ನು ಸೇರಿಕೊಳ್ಳಲಿದ್ದಾರೆ.