ಟೀಮ್​ ಇಂಡಿಯಾದ ನಾಯಕನಾದ ಕನ್ನಡಿಗ ಕೆ.ಎಲ್ ರಾಹುಲ್..!

Date:

ಯುವ ಆಟಗಾರ, ಕನ್ನಡಿಗ ಕೆ.ಎಲ್ ರಾಹುಲ್ ಟೀಮ್ ಇಂಡಿಯಾ ನಾಯಕನಾಗಿ ತಂಡವನ್ನು ಯಶಸ್ವಿಯಾಗಿ ಮುನ್ನೆಡೆಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ರೋಹಿತ್ ಶರ್ಮಾ ಗಾಯಕ್ಕೆ ತುತ್ತಾಗಿದ್ದರಿಂದ ರಾಹುಲ್ ನಾಯಕತ್ವದ ಜವಬ್ದಾರಿಯನ್ನು ಹೊರಬೇಕಾಯಿತು. ಅನಿರೀಕ್ಷಿತವಾಗಿ ಸಿಕ್ಕ ಹೊಸ ಹೊಣೆಯನ್ನು ರಾಹುಲ್ ನಿಭಾಯಿಸಿದರು. ಭಾರತ 7 ರನ್​ ಗಳಿಂದ ಗೆಲುವು ಸಾಧಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಾಯಕ ರೋಹಿತ್ ಶರ್ಮಾ (ಅಜೇಯ 60/ ಗಾಯಗೊಂಡು ನಿವೃತ್ತಿ) ಮತ್ತು ರಾಹುಲ್ (45) ಉತ್ತಮ ಆಟದ ನೆರವಿನಿಂದ ಭಾರತ 20 ಓವರ್​ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 163ರನ್ ಗಳನ್ನು ಮಾಡಿತು. ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ನಿಗದಿತ ಓವರ್ಗಳಲ್ಲಿ 9 ವಿಕೆಟ್​ಗೆ 156ರನ್ ಮಾತ್ರ ಗಳಿಸಲು ಸಾಧ್ಯವಾಯಿತು. ವಿಕೆಟ್ ಕೀಪರ್ ಟಿಮ್ ಸೀಫರ್ಟ್ (50) ಹಾಗೂ ರಾಸ್ ಟೇಲರ್ (53) ಹೊರತುಪಡಿಸದರೆ ಯಾರೂ ಉತ್ತಮ ರೀತಿಯಲ್ಲಿ ಬ್ಯಾಟ್ ಬೀಸಲಿಲ್ಲ.
ಈಗಾಗಲೇ ಯಾವುದೇ ಕ್ರಮಾಂಕದಲ್ಲೂ ಬ್ಯಾಟ್ ಬೀಸಬಲ್ಲೆ ಎಂದು ಸಾಬೀತು ಪಡಿಸಿರುವ ಕೆ.ಎಲ್ ರಾಹುಲ್, ವಿಕೆಟ್ ಕೀಪರ್ ಆಗಿಯೂ ಸೈ ಎನಿಸಿಕೊಂಡಿದ್ದಾರೆ. ಇದೀಗ ಟೀಮ್ ಇಂಡಿಯಾದ ಸಾರಥಿಯಾಗಿಯೂ ಯಶಸ್ವಿಯಾಗಿ ಜವಬ್ದಾರಿ ನಿಭಾಯಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ಕಿತ್ತಳೆ ಹಣ್ಣು ತಿಂದು ಸಿಪ್ಪೆ ಬೀಸಾಕೋ ಅಭ್ಯಾಸವಿದ್ರೆ ಈಗ್ಲೆ ಬಿಟ್ಟುಬಿಡಿ; ಇದರಲ್ಲೂ ಅಡಗಿದೆ ನಾನಾ ಲಾಭಗಳು!

ಕಿತ್ತಳೆ ಹಣ್ಣು ತಿಂದು ಸಿಪ್ಪೆ ಬೀಸಾಕೋ ಅಭ್ಯಾಸವಿದ್ರೆ ಈಗ್ಲೆ ಬಿಟ್ಟುಬಿಡಿ; ಇದರಲ್ಲೂ...

ಲಂಚ ಪಡೆಯುವಾಗ ಎಫ್ ಡಿಎ ಲೋಕಾಯುಕ್ತ ಬಲೆಗೆ!

ಲಂಚ ಪಡೆಯುವಾಗ ಎಫ್ ಡಿಎ ಲೋಕಾಯುಕ್ತ ಬಲೆಗೆ! ಕಲಬುರಗಿ: ಜಿಲ್ಲೆಯ ಕಮಲಾಪುರ ತಹಶಿಲ್ದಾರ್...

ಅಕ್ರಮ ವಲಸಿಗ ಶೆಡ್ ಪರಿಶೀಲನೆ: ಪುನೀತ್ ಕೆರೆಹಳ್ಳಿ ಬಂಧನ

ಅಕ್ರಮ ವಲಸಿಗ ಶೆಡ್ ಪರಿಶೀಲನೆ: ಪುನೀತ್ ಕೆರೆಹಳ್ಳಿ ಬಂಧನ ಬೆಂಗಳೂರು: ಹಿಂದೂಪರ ಕಾರ್ಯಕರ್ತ...

ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣ ಹವೆ

ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣ ಹವೆ ಬೆಂಗಳೂರು: ಕಳೆದ ಕೆಲ...