ಟೀಮ್ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡುವ ವಿಶ್ವಾಸದಲ್ಲಿ ಕನ್ನಡಿಗ …!
ಅವರು ಕನ್ನಡಿಗ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಭಾರತ ತಂಡಕ್ಕೆ ಪ್ರವೇಶ ಪಡೆದವರು . ಮೊದಲ ಪಂದ್ಯದಲ್ಲೇ ಅದ್ಭುತ ಪ್ರದರ್ಶನ ನೀಡಿ ಭರವಸೆ ಮೂಡಿಸಿದ್ದರು . ಟೀಮ್ ಇಂಡಿಯಾದಲ್ಲಿ ಗಟ್ಟಿಯಾಗಿ ನೆಲೆನಿಲ್ಲುವ ಭರವಸೆಯನ್ನು ವ್ಯಕ್ತಪಡಿಸಿದ್ದರು . ಆದರೆ ಕಳಪೆ ಫಾರ್ಮಿಂದ ತಂಡದಿಂದ ದೂರ ಉಳಿದಿದ್ದಾರೆ . ಇದೀಗ ಮತ್ತೆ ಭಾರತ ತಂಡಕ್ಕೆ ಕಮ್ ಬ್ಯಾಕ್ ಆಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ .
ಆ ಕನ್ನಡದ ಕ್ರಿಕೆಟಿಗ ಬೇರಾರು ಅಲ್ಲ .. ಕೊಡಗಿನ ವೀರ ರಾಬಿನ್ ಉತ್ತಪ್ಪ . ಹೌದು ಭಾರತ ತಂಡದಿಂದ ಸ್ಥಾನ ಕಳೆದುಕೊಂಡಿರುವ ಕರ್ನಾಟಕದ ಕಂದ ರಾಬಿನ್ ಉತ್ತಪ್ಪ ತಂಡಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ . ಟೀಮ್ ಇಂಡಿಯಾಗೆ ನಾನು ಮತ್ತೆ ಬಂದೇ ಬರ್ತೀನಿ . ನನ್ನಲ್ಲಿನ್ನೂ ಒಂದು ವಿಶ್ವಕಪ್ ಆಡುವ ಸಾಮರ್ಥ್ಯವಿದೆ ಅಂತ ಉತ್ತಪ್ಪ ಹೇಳಿಕೊಂಡಿದ್ದಾರೆ .
2007 ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚೊಚ್ಚಲ ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯರಾಗಿದ್ದರು ಈ ಬಲಗೈ ಬ್ಯಾಟ್ಸ್ ಮನ್ ಉತ್ತಪ್ಪ . ಆದರೆ ಖಾಯಂ ಸ್ಥಾನ ಉಳಿಸಿಕೊಳ್ಳಲು ವಿಫಲರಾದರು . 2015 ರ ನಂತರ ಟೀಮ್ ಇಂಡಿಯಾದಲ್ಲಿ ಸಂಪೂರ್ಣವಾಗಿ ಸ್ಥಾನ ಕಳೆದುಕೊಂಡಿದ್ದಾರೆ .
ಆದರೆ ಅವರಲ್ಲಿ ದೇಶದ ಪರ ಮತ್ತೆ ಕ್ರಿಕೆಟ್ ಆಡುವ ಅಚಲ ವಿಶ್ವಾಸವಿದೆ .ಕ್ರಿಕ್ ಇನ್ಫೋ ಜೊತೆ ಮಾತನಾಡಿದ ಉತ್ತಪ್ಪ , ತಮ್ಮ ಮನದ ಮಾತನ್ನು ಹಂಚಿಕೊಂಡಿದ್ದಾರೆ . ಟಿ20 ಮಾದರಿಗೆ ಮತ್ತೆ ಮರಳುವೆ ಎಂದು ವಿಶ್ವಾಸದ ನುಡಿಗಳನ್ನಾಡಿದ್ದಾರೆ .
ಟೀಮ್ ಇಂಡಿಯಾ ಪರ ಆರಂಭಿಕನಾಗಿ ತಂಡ ಕೂಡಿಕೊಂಡಿದ್ದರು . ಅಂದಿನ ನಾಯಕ , ಕನ್ನಡಿಗರೇ ಆದ ರಾಹುಲ್ ದ್ರಾವಿಡ್ ಜೊತೆ ಮೊದಲ ಪಂದ್ಯದಲ್ಲಿ ಇನ್ನಿಂಗ್ಸ್ ಆರಂಭಿಸಿದ್ದರು . ನಂತರ ಸಾಕಷ್ಟು ಪಂದ್ಯಗಳಲ್ಲಿ ಓಪನರ್ ಆಗಿದ್ದರು . ಬೇರೆ ಬೇರೆ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದೂ ಇದೆ . ಇದೀಗ ಅವರು ಫಿನಿಷರ್ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ . ಆರಂಭಿಕನಾಗಿ ಬರುವ ಆಸೆ ಇಲ್ಲ ..! ಟೀಮ್ ಇಂಡಿಯಾಗೆ ಉತ್ತಮ ಫಿನಿಷರ್ ಆಗಬಲ್ಲೆ .. ಫಿನಿಷರ್ ಆಗಿಯೇ ಕಮ್ ಬ್ಯಾಕ್ ಆಗುತ್ತೇನೆ ಎಂದು ಹೇಳಿದ್ದಾರೆ .
2015ರಿಂದ ತಂಡದಲ್ಲಿ ಅವಕಾಶ ಪಡೆಯದ ಅವರು 2011 ರಿಂದ ಇದುವರೆಗೆ ಭಾರತದ ಪರ ಆಡಿರುವುದು ಕೇವಲ 8 ಏಕದಿನ ಮತ್ತು ನಾಲ್ಕು ಟಿ20 ಪಂದ್ಯಗಳನ್ನು ಮಾತ್ರ ..! 2015 ರ ಜುಲೈನಲ್ಲಿ ಜಿಂಬಾಬ್ವೆ ಪ್ರವಾಸದ ವೇಳೆ ಕೊನೆಯದಾಗಿ ಆಡಿದ್ದರು .
ಐಪಿಎಲ್ ನಲ್ಲಿ ಕೆಕೆಆರ್ ಸೇರಿದಂತೆ ನಾನಾ ತಂಡಗಳ ಪರ ಆಡಿರುವ ಅವರು ಈ ಬಾರಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
“ನಾನು ಯಾವಾಗಲೂ ಸಹ ಸ್ಪರ್ಧಾತ್ಮಕವಾಗಿರಲು ಬಯಸುತ್ತೇನೆ . ನನ್ನಲ್ಲಿನ್ನೂ ಆಟವಿದೆ . ಉತ್ತಮವಾಗಿ ಆಡಲು ಬಯಸುತ್ತೇನೆ . ನನ್ನಲ್ಲಿ ಮತ್ತೊಂದು ವಿಶ್ವಕಪ್ ಆಡುವ ಸಾಮರ್ಥ್ಯ ಉಳಿದಿದೆ ಎಂದು ಪ್ರಾಮಾಣಿಕವಾಗಿ ನಂಬಿದ್ದೇನೆ . ಇದನ್ನು ಸಾಧಿಸುವ ಪ್ರಯತ್ನದಲ್ಲಿದ್ದೇನೆ . ಪ್ರಮುಖವಾಗಿ ಟಿ20 ಯಲ್ಲಿ ” ಎಂದು ತಿಳಿಸಿದ್ದಾರೆ ..
ಉತ್ತಪ್ಪ ಟೀಮ್ ಇಂಡಿಯಾಕ್ಕೆ ಮರಳಲು ಐಪಿಎಲ್ ವೇದಿಕೆ. ಕೊರೋನಾ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿರುವ ಐಪಿಎಲ್ ನಡೆಯುವುದು ಸಹ ಅನುಮಾನವಿದೆ .. ಎಲ್ಲವನ್ನೂ ಕಾದು ನೋಡಬೇಕು.
ಲಾಕ್ ಡೌನ್ ನಲ್ಲಿ ರೋರಿಂಗ್ ಸ್ಟಾರ್ ಶ್ರೀಮುರುಳಿಯಿಂದ ಜೀವನ ಪಾಠ …!
ಕೊರೋನಾ ಎಮರ್ಜೆನ್ಸಿ ನಡುವೆಯೇ ಸದ್ದಿಲ್ಲದೆ IPL ಆಯೋಜನೆಗಾಗಿ BCCI ಚಿಂತನೆ ..!
2011ರ ವರ್ಲ್ಡ್ ಕಪ್ ಗೆಲುವಿನ ಹಿಂದಿನ ಆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಧೋನಿ ಅಲ್ಲ …!
ಕೆಟ್ಟದಾಗಿ ಸ್ಪರ್ಶಿಸಿದ್ದ ಆ ಕ್ರಿಕೆಟರ್ ಗೆ ಪ್ರಿಯಾಮಣಿ ಕಪಾಳಮೋಕ್ಷ ಮಾಡಿದ್ದು ಸತ್ಯನಾ?
2011 ರ ವಿಶ್ವಕಪ್ ನಲ್ಲಿ ಸಚಿನ್ ಪುತ್ರ ಅರ್ಜುನ್ ಜೊತೆ ಮ್ಯಾಚ್ ನೋಡಿದ್ದ ಪೋರ ಇವತ್ತು ಟೀಮ್ ಇಂಡಿಯಾ ಆಟಗಾರ…!
ಇದು ಕಾಳಿಂಗ ಸರ್ಪಗಳ ರಾಜಧಾನಿ…! ಇದು ನಿಮಗೂ ಚಿರಪರಿಚಿತ ..!
ಮನಸ್ಸು ಗಾಯಗೊಳಿಸಿ ಕ್ಷಮೆ ಎಂಬ ಮುಲಾಮು ಹಚ್ಚುವುದಲ್ಲ…
ಧೋನಿ ನಾಯಕತ್ವದ ವಿಶ್ವ ಏಕದಿನ ತಂಡ ಪ್ರಕಟಿಸಿದ ವಾಸಿಮ್ ಜಾಫರ್ ..!
ದಿ ನ್ಯೂ ಇಂಡಿಯನ್ ಟೈಮ್ಸ್ ನಿಂದ ಹಿಮಾಲಯ ಡ್ರಗ್ಸ್ ಸಹಯೋಗದಲ್ಲಿ ಮಿತ್ರರಿಗೆ ಸ್ಯಾನಿಟೈಸರ್ ವಿತರಣೆ
ನೀವಿಬ್ಬರು ಹೀಗಿದ್ದರೆ ನಿಮ್ಮ ನಡುವೆ ಇರೋದು ಬರೀ ಫ್ರೆಂಡ್ಶಿಪ್ ಅಲ್ಲ…!
ಫ್ರೀ ಟಾಕ್ ಟೈಮ್ ಆಫರ್ , ವ್ಯಾಲಿಡಿಟಿ ವಿಸ್ತರಣೆ ನೀಡುತ್ತಿವೆ ಟೆಲಿಕಾಂ ಕಂಪನಿಗಳು..!
ಬಾಸ್ ನೀನೇನು ಮಾಡ್ತಿದ್ಯಾ … ? ಸಿಕ್ಸರ್ ಸಿಡಿಸಿದ ಅಯ್ಯರ್ ಗೆ ದ್ರಾವಿಡ್ ಕೂಲ್ ವಾರ್ನಿಂಗ್ ..!