2019ರಲ್ಲಿ ಇಂಗ್ಲೆಂಡ್ನಲ್ಲಿ ನಡೆದ ಏಕದಿನ ವಿಶ್ವಕಪ್ ಬಳಿಕ ಟೀಮ್ ಇಂಡಿಯಾದಿಂದ ದೂರ ಉಳಿದಿರುವ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಿವೃತ್ತಿಗೆ ಕಾಲ ಸನ್ನಿಹಿತವಾಗಿದೆ ಎಂದೇ ಹೇಳಲಾಗುತ್ತಿದೆ. ಧೋನಿಯ ಅನುಪಸ್ಥಿತಿ ಆಗಾಗ ಕಾಡುತ್ತಿದ್ದರೂ ಯುವ ಆಟಗಾರರು ನಿರೀಕ್ಷೆಯನ್ನು ಹುಸಿಯಾಗಿಸದೆ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಆದರೂ ಧೋನಿ ಧೋನಿಯೇ ಬಿಡ್ರಿ.
ಧೋನಿ ಈ ಸರಣಿಗೆ ಆಯ್ಕೆ ಆಗ್ತಾರೆ.. ಮುಂದಿನ ಸರಣಿಗೆ ಕಮ್ಬ್ಯಾಕ್ ಮಾಡ್ತಾರೆ.. ಟಿ20 ವರ್ಲ್ಡ್ಕಪ್ನಲ್ಲಿ ಪಕ್ಕಾ ಕಣಕ್ಕಿಳಿಯುತ್ತಾರೆ ಎಂದು ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ. ಈ ನಡುವೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರರ ಪೈಕಿ ಒಬ್ಬರಾದ, ಸದ್ಯ ತಂಡದಲ್ಲಿ ಸ್ಥಾನ ಪಡೆಯಲು ಹರಸಾಹಸ ಪಡುತ್ತಿರುವ ಎಡಗೈ ಬ್ಯಾಟ್ಸ್ಮನ್ ಸುರೇಶ್ ರೈನಾ ಧೋನಿ ಬಗ್ಗೆ ಮಾತಾಡಿದ್ದಾರೆ. ಧೋನಿಯ ಆತ್ಮೀಯ ಗೆಳೆಯರೂ ಆಗಿರುವ ರೈನಾ ಧೋನಿ ನಿವೃತ್ತಿಯನ್ನು ತೆಗೆದುಕೊಳ್ಳಬೇಕೆಂದು ಡಿಸೈಡ್ ಮಾಡಿದ್ರೆ ಯಾವ್ದೇ ದೊಡ್ಡ ಸಂಚಲನ ಉಂಟು ಮಾಡಲು ಬಯಸಲ್ಲ. ನಾನು ಧೋನಿ ಮತ್ತೆ ತಂಡದಲ್ಲಿ ಆಡುವುದನ್ನು ಬಯಸುತ್ತೇನೆ. ತಂಡಕ್ಕೆ ಅವರ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.
33 ವರ್ಷದ ಸುರೇಶ್ ರೈನಾ ಕಳೆದ ಐಪಿಎಲ್ ಬಳಿಕ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಈ ಬಾರಿಯ ಐಪಿಎಲ್ನಲ್ಲಿ ಮಿಂಚಿ ಟೀಮ್ ಇಂಡಿಯಾಕ್ಕೆ ಕಮ್ಬ್ಯಾಕ್ ಆಗುವ ತುಡಿತದಲ್ಲಿದ್ದಾರೆ.