ಟೀಮ್ ಇಂಡಿಯಾದಲ್ಲಿ ಸರಿಯಾದ ಅವಕಾಶ ಕೊಡ್ತಿಲ್ಲ : ಚಾಹಲ್

Date:

ತನಗೆ ಮತ್ತು ಕುಲ್‌ದೀಪ್ ಯಾದವ್‌ಗೆ ಟೀಂ ಇಂಡಿಯಾ ತಂಡದಲ್ಲಿ ಸತತವಾಗಿ ಆಡುವ ಅವಕಾಶ ಸಿಗದಿರುವುದರ ಬಗ್ಗೆ ಯುಜುವೇಂದ್ರ ಚಹಾಲ್ ಮೌನ ಮುರಿದಿದ್ದಾರೆ. 2019ರ ವಿಶ್ವಕಪ್ ಟೂರ್ನಿಯ ಗ್ರೂಪ್ ಹಂತದ ಪಂದ್ಯದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಸೋಲನ್ನು ಕಂಡಿತ್ತು. ಹೀಗಾಗಿ ಪಂದ್ಯದ ಮಧ್ಯಮ ಓವರ್‌ಗಳಲ್ಲಿ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದ ಚಹಾಲ್ ಮತ್ತು ಕುಲ್‌ದೀಪ್ ಇಬ್ಬರನ್ನೂ ತಂಡದಿಂದ ಹೊರಗಿಡಲಾಯಿತು.

ಆ ಪಂದ್ಯದ ಬಳಿಕ ಯುಜುವೇಂದ್ರ ಚಹಾಲ್ ಮತ್ತು ಕುಲ್‌ದೀಪ್ ಯಾದವ್ ಒಂದೇ ಪಂದ್ಯದಲ್ಲಿ ಆಡುವ ಅವಕಾಶವನ್ನೇ ಪಡೆದಿಲ್ಲ. ಯಾವುದಾದರೂ ಸರಣಿಗೆ ಯುಜುವೇಂದ್ರ ಚಹಾಲ್ ಮತ್ತು ಕುಲ್‌ದೀಪ್ ಯಾದವ್ ಇಬ್ಬರೂ ಆಯ್ಕೆಯಾದರೂ ಸಹ ಅರ್ಧದಷ್ಟು ಪಂದ್ಯಗಳಲ್ಲಿ ಚಹಾಲ್ ಮತ್ತು ಉಳಿದ ಪಂದ್ಯಗಳಲ್ಲಿ ಕುಲ್‌ದೀಪ್ ಆಡುವ ಅನಿವಾರ್ಯತೆ ಉಂಟಾಗಿದೆ. ಇದೀಗ ಯುಜುವೇಂದ್ರ ಚಹಾಲ್ ತಾನು ಮತ್ತು ಕುಲ್‌ದೀಪ್ ಒಟ್ಟಿಗೆ ತಂಡದಲ್ಲಿ ಆಡದೆ ಇರುವುದರ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದ್ದಾರೆ.

 

‘ನಾನು ಮತ್ತು ಕುಲ್‌ದೀಪ್ ಸರಣಿಗೆ ಆಯ್ಕೆಯಾದರೂ ಹಾರ್ದಿಕ್ ಪಾಂಡ್ಯ ತಂಡದಲ್ಲಿರುವ ಕಾರಣ ಇಬ್ಬರಲ್ಲೊಬ್ಬರು ಬೆಂಚ್ ಕಾಯುವ ಪರಿಸ್ಥಿತಿ ಎದುರಾಗುತ್ತದೆ. 2018ರಲ್ಲಿ ಹಾರ್ದಿಕ್ ಪಾಂಡ್ಯ ಗಾಯಕ್ಕೊಳಗಾಗಿ ತಂಡದಿಂದ ಹೊರಗುಳಿದಾಗ ರವೀಂದ್ರ ಜಡೇಜಾ ಮತ್ತೆ ಟೀಮ್ ಇಂಡಿಯಾವನ್ನು ಸೇರಿಕೊಂಡರು, ಅವರೂ ಕೂಡ ಸ್ಪಿನ್ನರ್ ಆದಕಾರಣ ಕುಲ್‌ದೀಪ್ ಮತ್ತು ನಾನು ಇಬ್ಬರಲ್ಲೊಬ್ಬರು ಮಾತ್ರ ತಂಡದಲ್ಲಿ ಆಡುವ ಅವಕಾಶವನ್ನು ಪಡೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಯಿತು. ಹೀಗಾಗಿ 5 ಪಂದ್ಯಗಳ ಸರಣಿಯಲ್ಲಿ 3 ಪಂದ್ಯಗಳಲ್ಲಿ ನನಗೆ ಅವಕಾಶ ದೊರೆತರೆ ಉಳಿದ ಪಂದ್ಯಗಳಲ್ಲಿ ಕುಲ್‌ದೀಪ್ ಅವಕಾಶ ಪಡೆಯುತ್ತಾರೆ ಅಥವಾ ಕುಲ್‌ದೀಪ್ 3 ಪಂದ್ಯಗಳನ್ನಾಡಿದರೆ ನಾನು 2 ಪಂದ್ಯಗಳನ್ನಾಡುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಯುಜುವೇಂದ್ರ ಚಹಾಲ್ ತಾನು ಮತ್ತು ಕುಲ್‌ದೀಪ್ ಯಾದವ್ ಯಾಕೆ ಒಂದೇ ಪಂದ್ಯದಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂಬುದರ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದ್ದಾರೆ.

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...