ಬಾಕ್ಸ್ ಆಫೀಸ್ ನಲ್ಲಿ ಒಂದದರ ಹಿಂದೊಂದರಂತೆ ಹಿಟ್ ಚಿತ್ರಗಳನ್ನು ನೀಡಿದ ಸೌತ್ ಚೆಲುವೆ ಕಾಜಲ್ ಅಗರ್ ವಾಲ್ ಸದ್ಯ ಪ್ಯಾರಿಸ್ ಪ್ಯಾರಿಸ್ ಸಿನಿಮಾದ ಬಿಡುಗಡೆಯ ಕಾತುರದಲ್ಲಿದ್ದಾರೆ. ತಮಿಳು, ತೆಲುಗು ಮಾತ್ರವಲ್ಲ , ಬಾಲಿವುಡ್ ಗೂ ಆಗೊಮ್ಮೆ ಈಗೊಮ್ಮೆ ಪಯಣ ಬೆಳೆಸುತ್ತಿರುವ ನಟಿ ಕಾಜಲ್ ಬಹುಬೇಡಿಕೆಯ ನಟಿ.
ದಕ್ಷಿಣ ಭಾರತ ಹಾಗೂ ಆ ಕಡೆ ಬಾಲಿವುಡ್ ನಲ್ಲಿ ನಟಿಸಿ ಗಮನ ಸೆಳೆದಿರುವ ಸೌತ್ ಚೆಲುವೆ ಕಾಜಲ್ ಈಗ ಖಾಸಗಿ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಭಾರತದ ಖ್ಯಾತ ಕ್ರಿಕೆಟರ್ ಜೊತೆ ಕಾಜಲ್ ಹೆಸರು ಕೇಳಿಬರ್ತಿದೆ. ಹೌದು, ಭಾರತ ಕ್ರಿಕೆಟ್ ತಂಡ ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರ ಮೇಲೆ ಕಾಜಲ್ ಗೆ ಕ್ರಶ್ ಆಗಿತ್ತಂತೆ. ರೋಹಿತ್ ಶರ್ಮಾ ಅಂದ್ರೆ ಕಾಜಲ್ ಗೆ ಸಿಕ್ಕಾಪಟ್ಟೆ ಇಷ್ಟವಂತೆ. ಕೇವಲ ಕ್ರಶ್ ಮಾತ್ರವಲ್ಲ ಅವರ ಬಹುದೊಡ್ಡ ಅಭಿಮಾನಿ ನಾನು” ಎಂದು ಸಂದರ್ಶನವೊಂದರಲ್ಲಿ ಕಾಜಲ್ ಹೇಳಿಕೊಳ್ಳುವ ಮೂಲಕ ತಮ್ಮ ಕ್ರಶ್ ಬಗ್ಗೆ ಬಾಯಿ ಬಿಟ್ಟಿದ್ದಾರೆ.
ಕಾಜಲ್ ಅವರ ಈ ಮಾತು ಕೇಳಿ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ. ರೋಹಿತ್ ಶರ್ಮಾ ಅಭಿಮಾನಿಗಳು ಹಾಗೂ ಕಾಜಲ್ ಅಭಿಮಾನಿಗಳು ಕಾಮೆಂಟ್ ಮಾಡ್ತಿದ್ದಾರೆ. ‘ಸಾರಿ, ರೋಹಿತ್ ಶರ್ಮಾಗೆ ಮದುವೆ ಆಗಿದೆ’ ಎಂದು ಹಾಸ್ಯಚಟಾಕಿ ಹಾರಿಸುತ್ತಿದ್ದಾರೆ.