ಹಿಂದೆ ತಂಡವನ್ನು ಮುನ್ನಡೆಸಿದ್ದ ರವಿ ಶಾಸ್ತ್ರಿ ಅವರ ಅವಧಿ ಪೂರ್ಣಗೊಂಡಿದೆ ಹೀಗಾಗಿ ಬಿಸಿಸಿಐಯು ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಸೇರಿ ಸಹಾಯಕ ಸಿಬ್ಬಂದಿಗಳ ಸ್ಥಾನಗಳಿಗೆ ಅರ್ಜಿ ಕರೆದಿತ್ತು.
ಇದರ ಸಲುವಾಗಿ ಟೀಮ್ ಇಂಡಿಯಾ ಹೆಡ್ ಕೋಚ್ ಸ್ಥಾನಕ್ಕೆ ಬಂದ ಒಟ್ಟು ಅರ್ಜಿಗಳೆಷ್ಟು ಎಂಬುದು ತಿಳಿದರೆ ನಿಜಕ್ಕೂ ಅಚ್ಚರಿ ಪಡ್ತೀರಾ..?
ಹೌದು ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ಬರೋಬ್ಬರಿ 2000 ಅರ್ಜಿಗಳು ಬಂದಿವೆ, ಬರೀ ಹೆಡ್‌ಕೋಚ್ ಸ್ಥಾನಕ್ಕಾಗಿಯೇ ಬಿಸಿಸಿಐ ಸುಮಾರು 2000ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
