ರಾಜ್ಯ ರಾಜಕೀಯದ ಬೆಳವಣಿಗೆ ಕುರಿತು ಅಮೆರಿಕ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಕ್ಕೆ ಬಿಜೆಪಿ ನಾಯಕ ಕೆ. ಎಸ್ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ಸಿಎಂ ಕುಮಾರಸ್ವಾಮಿ ಟ್ವೀಟ್ ಗೆ ತಿರುಗೇಟು ನೀಡಿದ ಈಶ್ವರಪ್ಪ ‘ ಟೆಂಪಲ್ ರನ್, ರೆಸಾರ್ಟ್ ರನ್ ಮುಗಿಸಿ ಈಗ ಅಮೆರಿಕ ರನ್ ನಲ್ಲಿರುವ ಮುಖ್ಯಮಂತ್ರಿಗಳೇ ಎಂದೇ ಟ್ವೀಟ್ ಆರಂಭಿಸಿದ್ದಾರೆ, ಸಮುದ್ರಕ್ಕೆ ಹೋದರೂ ಮೊಣಕಾಲುದ್ದ ನೀರು ಅನ್ನುವಂತೆ ಅಮೆರಿಕಾದಲ್ಲೂ ನಿಮಗೆ ಬಿಜೆಪಿಯದ್ದೇ ಚಿಂತೆ ಎಂದು ಈಶ್ವರಪ್ಪ ಟ್ವೀಟ್ ಮಾಡಿದ್ದಾರೆ.