ಟಿಕ್ ಟಾಕ್ ಅಪ್ಲಿಕೇಷನ್ ನಿಂದ ಇತ್ತೀಚೆಗೆ ಮನರಂಜನೆಗಿಂತ ಹೆಚ್ಚಾಗಿ ಅಹಿತಕರ ಘಟನೆಗಳೇ ಹೆಚ್ಚಾಗಿಬಿಟ್ಟಿದೆ. ಟಿಕ್ ಟಾಕ್ ಅಪ್ಲಿಕೇಷನ್ ನಿಂದ ಸಾವು ಮತ್ತು ಅನೈತಿಕ ವಿಡಿಯೋಗಳು ಹೆಚ್ಚಾಗುತ್ತಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಷಯವೇ. ಇನ್ನು ಇದುವರೆಗೂ ಟಿಕ್ ಟಾಕ್ ನಿಂದಾಗಿ ಕೆಲ ಮಂದಿ ಪ್ರಾಣ ಬಿಟ್ಟಿದ್ದರು. ಇದೀಗ ಟಿಕ್ ಟಾಕ್ ನಿಂದಾಗಿ ಮತ್ತೊಬ್ಬ ಯುವಕ ಸಾವನ್ನಪ್ಪಿದ್ದಾನೆ.
ತೆಲಂಗಾಣದ ನಿಜಾಮಾಬಾದ್ ಸಮೀಪದ ಗೋನಗುಪ್ಪಲ ಕಪ್ಪಲದ ಬಳಿ ಇರುವ ಚೆಕ್ ಡ್ಯಾಂ ಒಂದರಿಂದ ರಭಸವಾಗಿ ನೀರು ಹರಿಯುತ್ತಿತ್ತು. ಈ ನೀರಿಗೆ ಇಳಿದ ದಿನೇಶ್ ಎಂಬ ಯುವಕ ತೆಲುಗಿನ ಚಿತ್ರವೊಂದರ ಹಾಡಿಗೆ ಟಿಕ್ ಟಾಕ್ ಮಾಡುತ್ತಿದ್ದ. ದಿನೇಶ್ ಹಾಡಿಗೆ ಟಿಕ್ ಟಾಕ್ ಮಾಡುತ್ತಿದ್ದರೆ ಅದರ ಇಬ್ಬರು ಸ್ನೇಹಿತರು ಆ ವಿಡಿಯೋವನ್ನು ಶೂಟ್ ಮಾಡುತ್ತಿದ್ದರು. ದುರಾದೃಷ್ಟವಶಾತ್ ಇದೇ ಸಮಯಕ್ಕೆ ಆತ ನೀರಿನ ರಭಸ ಹೆಚ್ಚಾಗಿದ್ದ ಕಾರಣ ಕೊಚ್ಚಿಕೊಂಡು ಹೋಗಿದ್ದಾನೆ. ಯಾವುದೇ ರೀತಿಯ ಲಾಭ ಇಲ್ಲದ ಟಿಕ್ ಟಾಕ್ ವಿಡಿಯೊ ಮಾಡಲು ಹೋಗಿ ಇದೀಗ ಆತ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.