ಟೆಸ್ಟ್​​​ನಲ್ಲೂ ನಂಬರ್-1 ಪಟ್ಟ ಕಾಯ್ದುಕೊಂಡ ಕೊಹ್ಲಿ..!

Date:

ಐಸಿಸಿ ನೂತನ ಟೆಸ್ಟ್​ ರ‍್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಟೀಮ್ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ ನಂಬರ್ 1 ಪಟ್ಟವನ್ನು ಕಾಯ್ದುಕೊಂಡಿದ್ದಾರೆ. ಒಡಿಐನಲ್ಲೂ ಕೊಹ್ಲಿ ನಂಬರ್ 1 ಪಟ್ಟದಲ್ಲಿದ್ದು, ಟೆಸ್ಟ್​ನಲ್ಲೂ ಅದೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಟೆಸ್ಟ್ ಹಾಗೂ ಏಕದಿನ ಎರಡು ಮಾದರಿಯಲ್ಲೂ ಟೀಮ್ ಇಂಡಿಯಾದ ನಾಯಕನೇ ನಂಬರ್ 1!
ಇಂದು ನೂತನ ಟೆಸ್ಟ್ ರ್ಯಾಕಿಂಗ್ ಪಟ್ಟಿಯನ್ನು ಐಸಿಸಿ ಬಿಡುಗಡೆ ಮಾಡಿದೆ. 922 ಅಂಕಗಳೊಂದಿಗೆ ಕೊಹ್ಲಿ ನಂಬರ್ 1 ಸ್ಥಾನದಲ್ಲಿ ಉಳಿದುಕೊಂಡಿದ್ದಾರೆ. ನ್ಯೂಜಿಲೆಂಡ್ ನಾಯಕ ವಿಲಿಯಮ್​ಸನ್ 913 ಅಂಕಗಳೊಂದಿಗೆ ನಂಬರ್ 2 ಸ್ಥಾನದಲ್ಲಿದ್ದಾರೆ. ಟೀಮ್ ಇಂಡಿಯಾದ ಟೆಸ್ಟ್​ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ 881 ಅಂಕಗಳೊಂದಿಗೆ 3ನೇ ಆಸ್ಟ್ರೇಲಿಯಾದ ಸ್ಮಿತ್ 857 ಅಂಕಗಳೊಂದಿಗೆ 4ನೇ, ನ್ಯೂಜಿಲೆಂಡ್​ನ ನಿಕೋಲ್ಸ್ 778 ಅಂಕಗಳೊಂದಿಗೆ ನ್ಯೂಜಿಲೆಂಡ್, ಇಂಗ್ಲೆಂಡ್ ನ ಜೆ,ಇ ರೂಟ್ 763 ಅಂಕಗಳೊಂದಿಗೆ 6ನೇ, ಆಸೀಸ್​ನ ಡೇವಿಡ್ ವಾರ್ನರ್ 756 ಅಂಕಗಳೊಂದಿಗೆ 7ನೇ, 719 ಅಂಕಗಳೊಂದಿಗೆ ಸೌತ್​​ ಆಫ್ರಿಕಾದ ಆಟಗಾರರಾದ ಎ.ಕೆ ಮಾರ್ಕ್ರಮ್ 719 ಅಂಕಗಳೊಂದಿಗೆ 8ನೇ,ಡ ಡಿಕಾಕ್ 718 ಅಂಕಗಳೊಂದಿಗೆ 9ನೇ, ಡುಪ್ಲೆಸಿಸ್​ 702 ಅಂಕಗಳೊಂದಿಗೆ 10ನೇ ಸ್ಥಾನದಲ್ಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ರವೀಂದ್ರ ಜಡೇಜಾ ಹಾಗೂ ರವಿಚಂದ್ರನ್ ಅಶ್ವಿನ್ ಕ್ರಮವಾಗಿ 6 ಮತ್ತು 10ನೇ ಸ್ಥಾನದಲ್ಲಿದ್ದಾರೆ.

ಏಕದಿನ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾದ ನಾಯಕ ಕೊಹ್ಲಿ 886 ಅಂಕಗಳೊಂದಿಗೆ ನಂಬರ್ 1 ಹಾಗೂ ಉಪನಾಯಕ ರೋಹಿತ್ ಶರ್ಮಾ881 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಬುಮ್ರಾ ಮೊದಲ ಸ್ಥಾನದಲ್ಲಿದ್ದಾರೆ. ಟಿ20ಯಲ್ಲಿ ಪಾಕಿಸ್ತಾನದ ಬಾಬರ್ ಅಜಮ್ ಮೊದಲ, ನ್ಯೂಜಿಲೆಂಡ್​ನ ಮನ್ರೋ ಎರಡನೇ, ಭಾರತದ ರೋಹಿತ್ ಶರ್ಮಾನ 10ನೇ ಸ್ಥಾನದಲ್ಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಅಪ್ಘಾನಿಸ್ತಾನ್​ ರಶಿದ್ ಖಾನ್ ಮೊದಲ, ಪಾಕ್​ ನ ಇಮಾದ್ ವಾಸಿಂ 2ನೇ ಸ್ಥಾನದಲ್ಲಿದ್ದಾರೆ.

Share post:

Subscribe

spot_imgspot_img

Popular

More like this
Related

ಸ್ಯಾಂಡಲ್ ವುಡ್ ಖ್ಯಾತ ಖಳನಟ ‘ಹರೀಶ್ ರಾಯ್’ ನಿಧನ

ಸ್ಯಾಂಡಲ್ ವುಡ್ ಖ್ಯಾತ ಖಳನಟ ‘ಹರೀಶ್ ರಾಯ್’ ನಿಧನ ಸ್ಯಾಂಡಲ್‌ವುಡ್‌ನ ಖ್ಯಾತ ನಟ...

ಸರ್ಕಾರಿ ಸ್ಥಳಗಳಲ್ಲಿ ಕಾರ್ಯಕ್ರಮಕ್ಕೆ ಅನುಮತಿ ಕಡ್ಡಾಯ ವಿಚಾರ : ರಾಜ್ಯ ಸರ್ಕಾರದ ಮೇಲ್ಮನವಿ ಅರ್ಜಿ ವಜಾ

ಸರ್ಕಾರಿ ಸ್ಥಳಗಳಲ್ಲಿ ಕಾರ್ಯಕ್ರಮಕ್ಕೆ ಅನುಮತಿ ಕಡ್ಡಾಯ ವಿಚಾರ : ರಾಜ್ಯ ಸರ್ಕಾರದ...

ಮಹಿಳೆಯರೇ ಈ ವಿಷ್ಯ ತಿಳಿದುಕೊಳ್ಳಿ! ಚಳಿಗಾಲದಲ್ಲಿ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆಯಬೇಕಾ? ಇಲ್ಲಿ ತಿಳಿಯಿರಿ

ಮಹಿಳೆಯರೇ ಈ ವಿಷ್ಯ ತಿಳಿದುಕೊಳ್ಳಿ! ಚಳಿಗಾಲದಲ್ಲಿ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆಯಬೇಕಾ?...

ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಬಿಜೆಪಿ ಕುತಂತ್ರ, ಅಸೂಯೆ: ಡಿ.ಕೆ. ಸುರೇಶ್ ವಾಗ್ದಾಳಿ

ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಬಿಜೆಪಿ ಕುತಂತ್ರ, ಅಸೂಯೆ: ಡಿ.ಕೆ....