ಟೆಸ್ಟ್ ಡ್ರೈವ್ ಗೆಂದು ರಾಯಲ್ ಎನ್ ಫೀಲ್ಡ್ ಗಾಡಿ ತೆಗೆದುಕೊಂಡು ಪರಾರಿಯಾದ ?

Date:

ಕಾರು ಅಥವಾ ಬೈಕ್ ಕಳ್ಳತನವಾಗುವುದು ಹೊಸತೇನಲ್ಲ ಇದನ್ನು ನಾವು ದಿನನಿಯ್ತ ಕೇಳುತ್ತಿರುತ್ತೇವೆ ಮತ್ತೆ ನಮಗೆ ಕೂಡಾ ಅನುಭವ ಆಗಿರುತ್ತೆ ಅಂತ ನೀವು ಅಂದುಕೊಳ್ಳಬಹುದು.

ಆದರೆ ನಾವಿಂದು ಹೇಳಲು ಹೊರಟಿರುವ ವಿಚಾರ ಏನಪ್ಪ ಆಂದ್ರೆ ಅದು ಶೋರುಂನಿಂದಲೇ ಟೆಸ್ಟ್ ಡ್ರೈವ್‍ಗೆಂದು ತೆಗೆದುಕೊಂಡು ಹೋದ ಬೈಕ್ ಮತ್ತೆ ವಾಪಸ್ ಬಂದೇ ಇಲ್ಲವಂತೆ.ಹೌದು, ಇಂಥ ನೈಜ ಘಟನೆ ಚೆನ್ನೈ ನಗರದಲ್ಲಿ ನಡೆದಿದ್ದು, ರಾಯಲ್ ಎನ್‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಬೈಕ್ ಅನ್ನು ಟೆಸ್ಟ್ ಡ್ರೈವ್‍ಗೆಂದು ತೆಗೆದುಕೊಂಡು ಹೋಗಿ ಮತ್ತೆ ವಾಪಸ ಬಂದೇ ಇಲ್ಲವಂತೆ. ಈ ಕುರಿತಾಗಿ ಶೋರುಂನವರು ಪೊಲೀಸರಿಗೆ ದೂರನ್ನು ನೀಡಲಾಗಿದ್ದು, ಅವರಿ ಖದೀಮನನ್ನು ಹುಡುಕುವ ಕಾರ್ಯದಲ್ಲಿದ್ದಾರೆ ಎನ್ನಲಾಗಿದೆ. ಮೊದಲಿಗೆ ಈ ವ್ಯಕ್ತಿ ಚೆನ್ನೈ ನಗರದ ಜಪ್ಫರ್‍‍ಖಾನ್‍ಪೇಟ್ ಏರಿಯಾದಲ್ಲಿನ ರಾಯಲ್ ಎನ್‍ಫೀಲ್ಡ್ ಶೋರುಂ‍ಗೆ ಹೋಗಿ ಅಲ್ಲಿ ತನ್ನ ಗೆಳೆಯನೊಂದಿಗೆ ಬೈಕ್ ಕದಿಯಲು ಪ್ಲಾನ್ ಪ್ರಕಾರ ಹೋದರೆ, ಗೆಳೆಯ ಸಹಕರಿಸದ ಕಾರಣ ಪ್ಲಾನ್ ಫೇಲ್ ಆಯ್ತು.

ಆದರೆ ಎರಡನೆಯ ಬಾರಿ ಅದೇ ಚೆನ್ನೈನ ಕ್ರೋಮ್‍ಪೇಟ್‍ ಏರಿಯಾದಲ್ಲಿನ ರಾಯಲ್ ಎನ್‍ಫೀಲ್ಡ್ ಶೋರುಂನಲ್ಲಿ ಒಬ್ಬನೇ ಹೋಗಿ ಬೈಕ್ ಕದ್ದಿದ್ದಾನೆ. ಇವೆಲ್ಲಾ ದೃಶ್ಯಗಳು ರಾಯಲ್ ಎನ್‍ಫೀಲ್ಡ್ ಶೋರುಂನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕದೀಮ ಯಾವ ತರಹ ಶೋರುಂ ಸಿಬ್ಬಂದಿಗೆ ಚಳ್ಳೆಹಣ್ಣು ತಿಸಿದ್ದಾನೆ ಅಂತ ಈ ವಿಡಿಯೋ ನೋಡಿ ನಿಮಗೇ ತಿಳಿಯುತ್ತೆ. ಟೆಸ್ಟ್ ಡ್ರೈವ್‍ಗೆಂದು ತೆಗೆದುಕೊಂಡು ಹೋಗುವ ಮೊದಲು ಶೋರುಂ ಸಿಬ್ಬಂದಿಯು ಖದೀಮನ ಹತ್ತಿರ ಬೇಕಾದ ಡಾಕ್ಯುಮೆಂಟ್‍ಗಳನ್ನು ಪಡೆದಿದ್ದಾರೊ ಇಲ್ಲವೋ ಎಂಬುದು ಇನ್ನು ಖಚಿತವಾಗಲಿಲ್ಲ. ಇದರಿಂದ ಶೋರುಂ ಸಿಬ್ಬಂದಿಯವರ ನಿರ್ಲಕ್ಷ್ಯವು ಕಾಣಿಸಿತ್ತದೆ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಅಷ್ಟಕ್ಕು ಈ ಖದೀಮ ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕ್‍ಗಳನ್ನೆ ಕದಿಯಲು ಕಾರಣವಾದ್ರು ಏನು? ರಾಯಲ್ ಎನ್‍ಫೀಲ್ಡ್ ಸಂಸ್ಥೆಯಲ್ಲಿನ ಹಲವಾರು ಬೈಕ್‍ಗಳನ್ನು ಬಿಟ್ಟು ಆ ಬೈಕ್‍ಗಳನ್ನೆ ಯಾಕೆ ಕದಿಬೇಕು ಎಂಬುದು ನಿಮ್ಮ ಪ್ರಶ್ನೆ ಇರ್ಬೋದು.

ಆ ಕಾರಣ ನಮಗು ಗೊತ್ತಿಲ್ಲ ಆದರೆ ರಾಯಲ್ ಎನ್‍‍ಫೀಲ್ಡ್ 650 ಟ್ವಿನ್ ಬೈಕ್‍ಗಳು ಹೆಚ್ಚು ಜನಪ್ರೀಯತೆಯನ್ನು ಪಡೆದುಕೊಳ್ಳುತ್ತಿದ್ದು ಇದೇ ಕಾರಣದಿಂದ ಅದನ್ನು ಆತ ಕದ್ದಿರಬಹುದು ಎಂದು ಹೇಳಲಾಗುತ್ತಿದೆ.

Share post:

Subscribe

spot_imgspot_img

Popular

More like this
Related

ಮಂಡ್ಯದಲ್ಲಿ ಮನಕಲಕುವ ಘಟನೆ: ಸಾವಿನಲ್ಲೂ ಒಂದಾದ ದಂಪತಿ

ಮಂಡ್ಯದಲ್ಲಿ ಮನಕಲಕುವ ಘಟನೆ: ಸಾವಿನಲ್ಲೂ ಒಂದಾದ ದಂಪತಿ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ...

ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದ ಇಬ್ಬರು ಅರೆಸ್ಟ್!

ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದ ಇಬ್ಬರು ಅರೆಸ್ಟ್!ಬೆಂಗಳೂರು: ಐಷಾರಾಮಿ ಜೀವನಕ್ಕಾಗಿ ಕಳ್ಳತನ...

ಯಾವುದೇ ಸರ್ಕಾರ ಬಂದ್ರು ಪೊಲೀಸರು ಆತ್ಮವಿಶ್ವಾಸ, ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬೇಡಿ: ಡಿ.ಕೆ. ಶಿವಕುಮಾರ್

ಯಾವುದೇ ಸರ್ಕಾರ ಬಂದ್ರು ಪೊಲೀಸರು ಆತ್ಮವಿಶ್ವಾಸ, ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬೇಡಿ: ಡಿ.ಕೆ....

ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ: ಸಾಧಿಸಿ ತೋರಿಸಿ: ಸಿ.ಎಂ ಸಿದ್ದರಾಮಯ್ಯ ಕರೆ

ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ:...