ಟೈಲೆಟ್​ಗಿಂತಲೂ ಮಿನಿ ಬ್ಯಾಂಕ್​ ಗಬ್ಬು…

Date:

ಎಟಿಎಂಗಳು ಕೆಲವು ವೇಳೆ ಮಿನಿ ಬ್ಯಾಂಕ್‌ಗಳಾಗಿ ಕಾರ್ಯ ನಿರ್ವಹಿಸುತ್ತವೆ. ಈಗಲಂತೂ ಬಹುತೇಕ ಬ್ಯಾಂಕ್​​ ವ್ಯವಹಾರಗಳನ್ನು ATMನಲ್ಲೇ ಮಾಡಬಹುದು ಬಿಡಿ. ಬ್ಯಾಂಕ್‌ಗೆ ಹೋಗುವ ಅಗತ್ಯವೇ ಇರೋದಿಲ್ಲ. ಆದ್ರೆ ಎಟಿಎಂ ಬಳಕೆ ನಮ್ಮ ಆರೋಗ್ಯದ ಮೇಲೆ ಎಷ್ಟು ಪರಿಣಾಮ ಬೀರುತ್ತವೆ ಗೊತ್ತಾ.. ನಿಮಗೆ ಆಶ್ಚರ್ಯ ಆಗಬಹುದು.

ಸಾಮಾನ್ಯವಾಗಿ ಹಲವು ಮಂದಿ ಎಟಿಎಂ ಕೇಂದ್ರಗಳಲ್ಲಿ ಹಣ ವಿತ್ ಡ್ರಾ, ಬ್ಯಾಲೆನ್ಸ್ ಪರಿಶೀಲನೆ, ಫಂಡ್ ಟ್ರಾನ್ಸ್‌ಫರ್, ಪಿನ್ ಚೇಂಜ್ ಹೀಗೆ ಇನ್ನಿತರೆ ಕಾರ್ಯಗಳಿಗೆ ಬಳಸುತ್ತಾರೆ. ಆದ್ರೆ ಎಟಿಎಂ ಯಂತ್ರದ ಕೀ ಬೋರ್ಡ್, ಪಬ್ಲಿಕ್ ಟಾಯ್ಲೆಟ್‌ಗಿಂತಲೂ ಹೆಚ್ಚು ಗಲೀಜಾಗಿರುತ್ತವೆಯಂತೆ ಹಾಗಂತ ಅಧ್ಯಯನವೊಂದು ತಿಳಿಸಿದೆ.

ವಾಸ್ತವವಾಗಿ ಹೇಳಬೇಕು ಅಂದ್ರೆ ಎಟಿಎಂ ಕೀಬೋರ್ಡ್​ನಲ್ಲಿ​​ ಸೂಕ್ಷ್ಮ ಜೀವಿಗಳು ಜೀವಿಸುತ್ತಿರುತ್ತವೆ. ಎಟಿಎಂ ಕೀ ಬೋರ್ಡ್‌ನಲ್ಲಿ ಅಧಿಕ ಬ್ಯಾಕ್ಟೀರಿಯಾಗಳು ಇರೋದ್ರಿಂದ ಅನಾರೋಗ್ಯ ತಂದೊಡ್ಡಬಹುದು ಎಂದು ಅಧ್ಯಯನದಿಂದ ತಿಳಿದು ಬಂದಿದೆ. ಬ್ರಿಟಿಷ್ ಸಂಶೋಧಕರು ಈ ರಿಸರ್ಚ್ ನಡೆಸಿದ್ದು, ಎಟಿಎಂ ಕೀ ಬೋರ್ಡ್‌ ಹಾಗೂ ಸಾರ್ವಜನಿಕ ಶೌಚಾಲಯಗಳ ಸ್ವಾಬ್‌ ಪರೀಕ್ಷೆ ನಡೆಸಲಾಗಿತ್ತು. ಸಂಶೋಧಕರಲ್ಲೂ ಇದು ಆಶ್ಚರ್ಯ ಮೂಡಿಸಿತ್ತಾದ್ರೂ ಇದು ಸತ್ಯ. ಸಾರ್ವಜನಿಕ ಶೌಚಾಲಯಗಳಂತೆ, ಎಟಿಎಂ ಯಂತ್ರದ ಸ್ಥಳಗಳಲ್ಲಿ ಹೆಚ್ಚು ಬ್ಯಾಕ್ಟೀರಿಯಾಗಳು ಕಂಡು ಬರುತ್ತವೆ. ಇದು ಮನುಷ್ಯರಲ್ಲಿ ಅನಾರೋಗ್ಯ ಉಂಟು ಮಾಡುತ್ತವೆ. ಇಲ್ಲಿರುವ ಸೂಕ್ಷ್ಮಾಣು ಜೀವಿಗಳು ಸ್ವೆಲಿಂಗ್‌ ಹಾಗೂ ಭೇದಿಗೆ ಕಾರಣವಾಗಬಲ್ಲದು ಎಂದು ತಿಳಿದು ಬಂದಿದೆ. ಅಷ್ಟೇ ಅಲ್ಲದೇ, ಸಾರ್ವಜನಿಕ ಸ್ಥಳಗಳಲ್ಲಿರುವ ಟೆಲಿಫೋನ್‌ಗಳು ಕೂಡಾ ಹೆಚ್ಚು ಸೂಕ್ಷ್ಮಾಣು ಜೀವಿಗಳಿಂದ ಕೂಡಿರುತ್ತವಂತೆ. ಹೆಚ್ಚಿನ ಜನರು ಟೆಲಿಫೋನ್‌ಗಳನ್ನು ತಮ್ಮ ಮೂಗು ಹಾಗೂ ಬಾಯಿಯ ಹತ್ತಿರಕ್ಕೆ ಇಟ್ಟುಕೊಂಡು ಮಾತಾಡುತ್ತಾರೆ. ಹೀಗಾಗಿ ಬ್ಯಾಕ್ಟೀರಿಯಾಗಳು ಅಧಿಕ ಪ್ರಮಾಣದಲ್ಲಿ ಹರಡುವ ಸಾಧ್ಯತೆ ಹೆಚ್ಚಿನ ಸಾಧ್ಯತೆ ಇರುತ್ತವೆ. ಎಟಿಎಂ ಯಂತ್ರ ಉಪಯೋಗಿಸಿದ ಬಳಿಕ ನಮ್ಮ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಂಡರೆ ಯಾವುದೇ ತೊಂದರೆ ಇಲ್ಲ ಎಂದು ಸಲಹೆಯನ್ನು ಸಹ ನೀಡಿದೆ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...