ಟೊಕಿಯೊ ಒಲಿಂಪಿಕ್ಸ್; ಮೊದಲ ಪದಕ ಗೆದ್ದ ಭಾರತ

admin
1 Min Read

ಭಾರತ ಒಲಿಂಪಿಕ್ಸ್‌ನಲ್ಲಿ ಮೊದಲ ಪದಕವನ್ನು ಗೆದ್ದುಕೊಂಡಿದೆ. ಭಾರತದ ವೈಟ್‌ಲಿಫ್ಟರ್ ಮೀರಾಬಾಯಿ ಚಾನು ಬೆಳ್ಳಿಯ ಪದಕವನ್ನು ಗೆಲ್ಲುವ ಮೂಲಕ ಸಾಧನೆ ಮಾಡಿದ್ದಾರೆ. ಈ ಮೂಲಕ ಭಾರತ ಈ ಬಾರಿಯ ಒಲಿಂಪಿಕ್ಸ್ ಕೂಟದಲ್ಲಿ ಶುಭಾರಂಭವನ್ನು ಮಾಡಿದೆ.

49 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಮೀರಾಬಾಯಿ ಚಾನು ಸ್ಪರ್ಧಿಸಿ ಪದಕಕ್ಕೆ ಮುತ್ತಿಕ್ಕಿದ್ದಾರೆ. ಚಾನು 84 ಕೆಜಿ ಹಾಗೂ 87 ಕೆಜಿಯನ್ನು ಎತ್ತುವಲ್ಲಿ ಯಶಸ್ವಿಯಾದರು. ಆದರೆ 89 ಕೆಜಿ ಎತ್ತುವಲ್ಲಿ ವಿಫಲರಾದರು. ಹೀಗಾಗಿ ಅವರು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಚೀನಾದ ಹೌಸ್ ಜಿಹು ಈ ಸ್ಪರ್ಧೆಯಲ್ಲಿ ಮೊದಲ ಸ್ಥಾನವನ್ನು ಗಳಿಸಿ ಚಿನ್ನದ ಪದಕ ಗೆದ್ದಿದ್ದಾರೆ. 94 ಕೆಜಿ ಭಾರತ ಎತ್ತುವ ಮೂಲಕ ಅವರು ಒಲಿಂಪಿಕ್ಸ್ ದಾಖಲೆ ಮಾಡಿದ್ದಾರೆ.

 

 

Share This Article
Leave a Comment