ಟ್ರಾಕ್ಟರ್ ಕಳ್ಳತನ ಮಾಡ್ತಿದ್ದ ನಾಲ್ವರು ಆರೋಪಿಗಳು ಅರೆಸ್ಟ್!

Date:

ಟ್ರಾಕ್ಟರ್ ಕಳ್ಳತನ ಮಾಡ್ತಿದ್ದ ನಾಲ್ವರು ಆರೋಪಿಗಳು ಅರೆಸ್ಟ್!

ಬೆಂಗಳೂರು:- ಟ್ರಾಕ್ಟರ್ ಕಳ್ಳತನ ಮಾಡ್ತಿದ್ದ ನಾಲ್ವರು ಆರೋಪಿಗಳನ್ನು ಕೋಣನಕುಂಟೆ ಪೊಲೀಸರು ರೆಡ್ ಹ್ಯಾಂಡ್ ಆಗಿ ಅರೆಸ್ಟ್ ಮಾಡಿದ್ದಾರೆ.

ತುಮಕೂರಿನ‌ ನೊಣವಿನಕೆರೆಯಲ್ಲಿ ಸಾಧಿಕ್, ಸೈಫುಲ್ಲಾ, ಪರ್ವೇಜ್, ಸಾಧಿಕ್ ಎಂಬುವವರನ್ನು ಬಂಧಿಸಲಾಗಿದೆ. ಆರೋಪಿಗಳು, ಬೆಂಗಳೂರಲ್ಲಿ ನಿಂತಿದ್ದ ಟ್ರಾಕ್ಟರ್ ಗಳ‌ ಕಳ್ಳತನ ಮಾಡಿದ್ದರು.

ನೊಣವಿನ‌ ಕೆರೆಯಲ್ಲಿ ಸೈಫುಲ್ಲ ಎಂಬಾತನಿಗೆ ಮಾರಾಟ ಮಾಡಿದ್ದಾರೆ. ಬಂಧಿತರಿಂದ 20 ಲಕ್ಷ ಮೌಲ್ಯದ ನಾಲ್ಕು ಟ್ರ್ಯಾಕ್ಟರ್ ವಶಕ್ಕೆ ಪಡೆಯಲಾಗಿದೆ. ಮೊದಲು ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಟ್ರ್ಯಾಕ್ಟರ್ ಕಳ್ಳತನ ನಡೆದಿತ್ತು. ಸಿಸಿಟಿವಿ ದೃಶ್ಯ ಆಧರಿಸಿ ಪೊಲೀಸರು, ಪರಿಶೀಲನೆ ನಡೆಸಿದ್ದರು.

ನೊಣವಿನಕೆರೆವರೆಗೆ ಫಾಲೋ ಮಾಡಿ ಹೊರಟಿದ್ದರು. ಆದರೆ ಮೊದಲಿಗೆ ಪೊಲೀಸರಿಗೆ ಆರೋಪಿಗಳು ಸಿಕ್ಕಿರಲಿಲ್ಲ. ಮತ್ತೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ‌ ಟ್ರ್ಯಾಕ್ಟರ್ ಕಳ್ಳತನವಾಗಿತ್ತು. ವಿಚಾರ ಗೊತ್ತಾಗಿ ನೊಣವಿನ ಕೆರೆಯಲ್ಲಿ ಪೊಲೀಸರು ಕಾಯುತ್ತಿದ್ದರು. ಆರೋಪಿಗಳು ಟ್ರ್ಯಾಕ್ಟರ್ ಜೊತೆಗೆ ಬರ್ತಿದ್ದಂತೆ ಅರೆಸ್ಟ್ ಮಾಡಿದ್ದಾರೆ.

ಕೋಣನಕುಂಟೆ ಪೊಲೀಸರಿಂದ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಕೂಲಿ‌ ಕೆಲಸ ಮಾಡಿಕೊಂಡಿದ್ದ ಆರೋಪಿಗಳು,
ಹಣ ಸಂಪಾದನೆ ಮಾಡಲು ಟ್ರ್ಯಾಕ್ಟರ್ ಕಳ್ಳತನ ಹಾದಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಟ್ರ್ಯಾಕ್ಟರ್ ಡೌನ್‌ ನಲ್ಲಿ ನಿಂತಿದ್ದತೆ ತಳ್ಳಿ ಸ್ಟಾರ್ಟ್ ಮಾಡಿಕೊಳ್ತಿದ್ರು. ಇದೇ ರೀತಿ ನಿಂತಿದ್ದ ಟ್ರ್ಯಾಕ್ಟರ್ ಗಳ‌ ಕಳ್ಳತನ ಮಾಡಿರೋದು ಬೆಳಕಿಗೆ ಬಂದಿದೆ.

Share post:

Subscribe

spot_imgspot_img

Popular

More like this
Related

ಜೂನ್ 30ರೊಳಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ: ಸುಪ್ರೀಂಕೋರ್ಟ್ ನಿರ್ದೇಶನ

ಜೂನ್ 30ರೊಳಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ: ಸುಪ್ರೀಂಕೋರ್ಟ್ ನಿರ್ದೇಶನ ಬೆಂಗಳೂರು: ಗ್ರೇಟರ್...

ಎಐ ಯುವತಿಯ ಮೋಹಕ್ಕೆ ಬಿದ್ದು 1.53 ಲಕ್ಷ ರೂ. ಕಳೆದುಕೊಂಡ ಯುವಕ.!

ಎಐ ಯುವತಿಯ ಮೋಹಕ್ಕೆ ಬಿದ್ದು 1.53 ಲಕ್ಷ ರೂ. ಕಳೆದುಕೊಂಡ ಯುವಕ.! ಬೆಂಗಳೂರು:...

ಬೆಂಗಳೂರಿನ ಚಳಿಗೆ ಜನರು ಗಡಗಡ! ಇನ್ನೂ ನಾಲ್ಕು ದಿನ ಇದೇ ವಾತಾವರಣ

ಬೆಂಗಳೂರಿನ ಚಳಿಗೆ ಜನರು ಗಡಗಡ! ಇನ್ನೂ ನಾಲ್ಕು ದಿನ ಇದೇ ವಾತಾವರಣ ಬೆಂಗಳೂರು:...

SSLC ಪೂರ್ವಸಿದ್ಧತಾ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ: ಶಿಕ್ಷಕರು ಸೇರಿ 8 ಮಂದಿ ಬಂಧನ

SSLC ಪೂರ್ವಸಿದ್ಧತಾ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ: ಶಿಕ್ಷಕರು ಸೇರಿ 8 ಮಂದಿ...