ಪ್ರಧಾನಿ ನರೇಂದ್ರ ಮೋದಿ ಅವರು ಖಾಸಗೀ ವಾಹಿನಿಯಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಜೊತೆ ಸಂದರ್ಶನದಲ್ಲಿ ಪಾಲ್ಗೊಂಡು ತಮ್ಮ ಜೀವನದ ಅನೇಕ ಆಶ್ಚರ್ಯಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಬಾಲಿವುಡ್ ಕಿಲಾಡಿ ನಟ ಅಕ್ಷಯ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂದರ್ಶನವನ್ನು ಮಾಡಿದ್ದು ಈ ಸಂದರ್ಶನದಲ್ಲಿ ಮೋದಿ ಮೊಟ್ಟ ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಮಿಮ್ಸ್ ಗಳ ಬಗ್ಗೆ ಮಾತನಾಡಿದ್ದಾರೆ..!
ಅಕ್ಷಯ್ ಕುಮಾರ್ ಅವರು ಮೋದಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಮಿಮ್ಸ್ ಗಳನ್ನು ತೋರಿಸಿ ಇದರ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸುವಂತೆ ಕೇಳಿಕೊಂಡಾಗ ಮೋದಿ ಅವರು ನಾನು ಮಿಮ್ಸ್ ಗಳನ್ನು ಸಾಕಷ್ಟು ಎಂಜಾಯ್ ಮಾಡುತ್ತೇನೆ.
ಮಿಮ್ಸ್ಮಿಳನ್ನು ನೋಡಿ ನೊಂದುಕೊಳ್ಳುವುದಿಲ್ಲ ಬದಲಾಗಿ ಇವುಗಳ ಮೂಲಕ ನಾನು ಮಿಮ್ಸ್ ಮಾಡುವವರ ಕ್ರಿಯೆಟಿವಿಟಿಯನ್ನು ನೋಡುತ್ತೇನೆ ಮತ್ತು ಜನರು ನನ್ನ ಬಗ್ಗೆ ಏನೂ ಯೋಚನೆ ಮಾಡುತ್ತಾರೆ ಎಂದು ನಾನು ತಿಳಿದುಕೊಳ್ಳುತ್ತೇನೆ ಹಾಗೂ ಕೆಟ್ಟ ಟ್ರೋಲ್ ಗಳ ಬಗ್ಗೆ ಅಥವಾ ಕೆಟ್ಟ ಜನರ ಬಗ್ಗೆ ಪ್ರತಿಕ್ರಿಯಿಸಲು ಹೋಗುವುದಿಲ್ಲ ಎಂದು ಹೇಳಿದ್ದಾರೆ.