ಟ್ರೋಲಿಗರಿಗೆ ಸರಿಯಾದ ಉತ್ತರ ನೀಡಿದ ಮಹೇಶ್ ಬಾಬು!

Date:

ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಎಂದೇ ಹೆಸರು ಮಾಡಿರುವ ಮಹೇಶ್ ಬಾಬು ದೇಶದಾದ್ಯಂತ ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸದಾ ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಹ ಚಿತ್ರಗಳನ್ನು ಆಯ್ದುಕೊಳ್ಳುವ ಮಹೇಶ್ ಬಾಬು ಹಲವಾರು ಜನರಿಗೆ ರೋಲ್ ಮಾಡೆಲ್ ಆಗಿದ್ದಾರೆ.

ಇನ್ನೂ ಇತ್ತೀಚಿನ ಕೆಲ ಚಿತ್ರಗಳಲ್ಲಿ ಮಹೇಶ್ ಬಾಬು ಮಾಡಿದ ಪಾತ್ರಗಳನ್ನು ಟ್ರೋಲಿಗರು ಟ್ರೋಲ್ ಮಾಡಿದ್ದರು. ಯಾವಾಗಲೂ ಚಿತ್ರಗಳನ್ನೇ ಮಾಡುವ ಮಹೇಶ್ ಬಾಬು ಎಲ್ಲಾ ಚಿತ್ರಗಳಲ್ಲಿಯೂ ಒಂದೇ ರೀತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ, ಪ್ರಯೋಗಾತ್ಮಕ ಚಿತ್ರಗಳನ್ನು ಮಾಡುವುದನ್ನೇ ಬಿಟ್ಟು ಬಿಟ್ಟಿದ್ದಾರೆ ಹಾಗೂ ವಿಭಿನ್ನ ಚಿತ್ರಗಳಲ್ಲಿ ಅಭಿನಯಿಸಿದರೆ ಸಿನಿಮಾ ಫ್ಲಾಪ್ ಆಗುವ ಭಯ ಮಹೇಶ್ ಬಾಬುಗಿದೆ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದರು.

ಆದರೆ ಇದೀಗ ಈ ಎಲ್ಲ ಟೀಕೆಗಳಿಗೆ ಮಹೇಶ್ ಬಾಬು ತಮ್ಮ ಮುಂದಿನ ಚಿತ್ರದ ಟೀಸರ್ ಮೂಲಕ ಉತ್ತರ ನೀಡಿದ್ದಾರೆ. ಹೌದು ಮಹೇಶ್ ಬಾಬು ಅಭಿನಯದ ಮುಂದಿನ ಚಿತ್ರ ಸರ್ಕಾರು ವಾರು ಪಾಠದ ಟೀಸರ್ ಮಹೇಶ್ ಬಾಬು ಹುಟ್ಟುಹಬ್ಬದ ಪ್ರಯುಕ್ತ ಇಂದು ಬಿಡುಗಡೆಯಾಗಿದೆ. ಈ ಟೀಸರ್ ಮೂಲಕ ಟ್ರೋಲಿಗರಿಗೆ ಮಹೇಶ್ ಬಾಬು ಸರಿಯಾದ ಉತ್ತರವನ್ನೇ ನೀಡಿದ್ದಾರೆ. ಕುತ್ತಿಗೆಯಲ್ಲಿ ಒಂದು ರೂಪಾಯಿ ನಾಣ್ಯದ ಹಚ್ಚೆ, ಕೈನಲ್ಲಿ ವಿಭಿನ್ನವಾದ ದಾರ, ಕುತ್ತಿಗೆಯಲ್ಲಿ ಓಂ ಲಾಕೆಟ್ ಹೊಂದಿರುವ ಕಪ್ಪು ಬಣ್ಣದ ದಾರ ಹಾಗೂ ಉದ್ದನೆಯ ಕೂದಲು ಬಿಟ್ಟುಕೊಂಡು ವಿಭಿನ್ನ ಅವತಾರದಲ್ಲಿ ಟೀಸರ್ ಮೂಲಕ ಕಾಣಿಸಿಕೊಂಡಿದ್ದಾರೆ.

‘ಎಫ್ ಟೈಗರ್ ಟೇಕ್ಸ್ ರಾಬಿಟ್..’ ಎಂಬ ಖಡಕ್ ಎಚ್ಚರಿಕೆಯ ಡೈಲಾಗ್ ಮೂಲಕ ಆರಂಭವಾಗುವ ಟೀಸರ್ ಎಲ್ಲೆಡೆ ಹಲ್ ಚಲ್ ಎಬ್ಬಿಸಿದೆ. ಟೀಸರ್ ಉದ್ದಕ್ಕೂ ಮಹೇಶ್ ಬಾಬು ಕಳೆದ ಐದಾರು ಸಿನಿಮಾಗಳಲ್ಲಿ ಕಾಣಿಸಿಕೊಳ್ಳದೆ ಇರುವಂತಹ ಅವತಾರದಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ ಮತ್ತು ಟ್ರೋಲ್ ಮಾಡಿದವರಿಗೆ ಕೊನೆಗೂ ಸರಿಯಾದ ಉತ್ತರವೇ ಸಿಕ್ಕಿದೆ.

 

 

Share post:

Subscribe

spot_imgspot_img

Popular

More like this
Related

ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ! ನಿಮ್ಮ ನಗರದಲ್ಲಿ ಬಂಗಾರದ ಬೆಲೆ ಎಷ್ಟು ತಿಳಿಯಿರಿ

ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ! ನಿಮ್ಮ ನಗರದಲ್ಲಿ ಬಂಗಾರದ ಬೆಲೆ...

ಸಿನಿಮಾ ಮಾಡುವುದಾಗಿ ಹೇಳಿ ನಟಿಗೆ ಕಿರುಕುಳ: ನಿರ್ಮಾಪಕ ಹೇಮಂತ್ ಬಂಧನ

ಸಿನಿಮಾ ಮಾಡುವುದಾಗಿ ಹೇಳಿ ನಟಿಗೆ ಕಿರುಕುಳ: ನಿರ್ಮಾಪಕ ಹೇಮಂತ್ ಬಂಧನ ಸಿನಿಮಾ ಮಾಡುವುದಾಗಿ...

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ ಕೋಲಾರ:- ಜಿಲ್ಲೆ...

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ ಸಿದ್ದರಾ,ಯ್ಯ

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ...