ಟ್ವಿಟ್ಟರ್ ಅಮಾನತು ಬೆನ್ನಲ್ಲೇ ಕಂಗಾನಗೆ ಮತ್ತೊಂದು ಶಾಕ್!

Date:

ಬಾಲಿವುಡ್ ನಟಿ ಕಂಗನಾರವರ ಟ್ವಿಟ್ಟರ್ ಅಕೌಂಟ್‌ಅನ್ನು ಶಾಶ್ವತವಾಗಿ ಅಮಾನತುಗೊಳಿಸಲಾಗಿದೆ. ಪದೇ ಪದೇ ದ್ವೇಷದ ಮಾತುಗಳು ಹಾಗೂ ಹಿಂಸಾಚಾರಕ್ಕೆ ಪ್ರಚೋದನೆ ನೀಡುವಂತಹ ಟ್ವೀಟ್‌ಗಳನ್ನು ಮಾಡಿ, ಟ್ವಿಟ್ಟರ್‌ ನಿಯಮಗಳನ್ನು ಉಲ್ಲಂಘಿಸಿದ ಕಾರಣ ಮೇ 4ರಂದು ಕಂಗನಾ ಅವರ ಟ್ವಿಟ್ಟರ್ ಅಕೌಂಟ್‌ಅನ್ನು ಪರ್ಮನೆಂಟ್‌ಆಗಿ ಸಸ್ಪೆಂಡ್ ಮಾಡಲಾಯಿತು. ಇದಾದ ಬೆನ್ನಲ್ಲೇ ನಟಿ ಕಂಗನಾ ರಣಾವತ್‌ಗೆ ಮತ್ತೊಂದು ಆಘಾತ ಎದುರಾಗಿದೆ.

ಬಾಲಿವುಡ್‌ನ ಖ್ಯಾತ ಫ್ಯಾಶನ್ ಡಿಸೈನರ್‌ಗಳು ಕಂಗನಾರನ್ನ ಬಾಯ್‌ಕಾಟ್ ಮಾಡಿದ್ದಾರೆ. ದ್ವೇಷವನ್ನು ಪ್ರಚೋದಿಸುವ ಕಂಗನಾರಿಂದ ದೂರ ಸರಿಯಲು ಹಾಗೂ ಇನ್ಮುಂದೆ ಅವರ ಜೊತೆಗೆ ಕೆಲಸ ಮಾಡದಿರಲು ಫ್ಯಾಶನ್ ಡಿಸೈನರ್‌ಗಳಾದ ಆನಂದ್ ಭೂಷಣ್ ಹಾಗೂ ರಿಮ್‌ಝಿಮ್ ದಾದು ನಿರ್ಧಾರ ಮಾಡಿದ್ದಾರೆ.

ಅಮಾನತು

”ಕಂಗನಾ ಜೊತೆಗೆ ಕೆಲಸ ಮಾಡಿದ ಎಲ್ಲಾ ಫೋಟೋಗಳನ್ನು ನಾವು ಸೋಷಿಯಲ್ ಮೀಡಿಯಾದಿಂದ ಡಿಲೀಟ್ ಮಾಡಲು ನಿರ್ಧಾರ ಮಾಡಿದ್ದೇವೆ. ಇನ್ಮುಂದೆ ನಾವು ಕಂಗನಾ ರಣಾವತ್ ಜೊತೆಗೆ ಕೆಲಸ ಮಾಡುವುದಿಲ್ಲ. ನಾವು ದ್ವೇಷದ ಮಾತುಗಳನ್ನು ಬೆಂಬಲಿಸುವುದಿಲ್ಲ” ಎಂದು ಫ್ಯಾಶನ್ ಡಿಸೈನರ್ ಆನಂದ್ ಭೂಷಣ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

”ಕಂಗನಾ ರಣಾವತ್ ಜೊತೆಗೆ ಈ ಹಿಂದೆ ನಾವು ಕೆಲಸ ಮಾಡಿದ್ದ ಎಲ್ಲಾ ಪೋಸ್ಟ್‌ಗಳನ್ನು ಡಿಲೀಟ್ ಮಾಡುತ್ತಿದ್ದೇವೆ. ಭವಿಷ್ಯದಲ್ಲಿ ನಾವು ಕಂಗನಾ ಜೊತೆಗೆ ಕೆಲಸ ಮಾಡುವುದಿಲ್ಲ” ಎಂದು ಫ್ಯಾಶನ್ ಡಿಸೈನರ್ ರಿಮ್‌ಝಿಮ್ ದಾದು ಹೇಳಿದ್ದಾರೆ.

ಫ್ಯಾಶನ್ ಡಿಸೈನರ್‌ಗಳಾದ ಆನಂದ್ ಭೂಷಣ್ ಹಾಗೂ ರಿಮ್‌ಝಿಮ್ ದಾದು ನಡೆಗೆ ನಟಿ ಸ್ವರಾ ಭಾಸ್ಕರ್ ಸಂತಸ ಪಟ್ಟಿದ್ದಾರೆ. ”ಆನಂದ್ ಭೂಷಣ್ ಹಾಗೂ ರಿಮ್‌ಝಿಮ್ ದಾದು ನಿರ್ಧಾರ ಕಂಡು ಸರ್‌ಪ್ರೈಸ್ ಆಯ್ತು. ನಿಮ್ಮ ಬಗ್ಗೆ ಹೆಮ್ಮೆ ಇದೆ” ಎಂದು ಸ್ವರಾ ಭಾಸ್ಕರ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

 

ಕಂಗನಾರನ್ನ ಫ್ಯಾಶನ್ ಡಿಸೈನರ್ಸ್ ಬಾಯ್‌ಕಾಟ್ ಮಾಡುತ್ತಿದ್ದಂತೆಯೇ ಸಹೋದರಿ ರಂಗೋಲಿ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ”ಕಂಗನಾ ಹೆಸರಿನಲ್ಲಿ ಆನಂದ್ ಭೂಷಣ್ ಮೈಲೇಜ್ ಪಡೆಯುತ್ತಿದ್ದಾರೆ. ನಾವು ಅವರೊಂದಿಗೆ ಅಸೋಸಿಯೇಟ್ ಆಗಿಲ್ಲ. ಆತ ಯಾರು ಎಂಬುದೇ ನಮಗೆ ಗೊತ್ತಿಲ್ಲ. ಆತನ ವಿರುದ್ಧ ನಾನು ಕೋರ್ಟ್‌ನಲ್ಲಿ ಮೊಕದ್ದಮೆ ಹೂಡುತ್ತೇನೆ” ಎಂದು ರಂಗೋಲಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.

 

Share post:

Subscribe

spot_imgspot_img

Popular

More like this
Related

ಡಿ ಕೆ ಶಿವಕುಮಾರ್ ಬೆಂಗಳೂರು ಅಭಿವೃದ್ಧಿಯ ಹೊಣೆ ಹೊತ್ತಿರುವುದು ನಮ್ಮ ಪುಣ್ಯ: ನಾಗರಿಕರ ಪ್ರಶಂಸೆ

ಡಿ ಕೆ ಶಿವಕುಮಾರ್ ಬೆಂಗಳೂರು ಅಭಿವೃದ್ಧಿಯ ಹೊಣೆ ಹೊತ್ತಿರುವುದು ನಮ್ಮ ಪುಣ್ಯ:...

ಜಾರ್ಖಂಡ್‌ನಲ್ಲಿ ವೈದ್ಯಕೀಯ ನಿರ್ಲಕ್ಷ್ಯ — ರಕ್ತ ಪಡೆದ ಐದು ಮಕ್ಕಳಿಗೆ ಎಚ್‌ಐವಿ ಸೋಂಕು

ಜಾರ್ಖಂಡ್‌ನಲ್ಲಿ ವೈದ್ಯಕೀಯ ನಿರ್ಲಕ್ಷ್ಯ — ರಕ್ತ ಪಡೆದ ಐದು ಮಕ್ಕಳಿಗೆ ಎಚ್‌ಐವಿ...

ಬೆಳಿಗ್ಗೆ ಎದ್ದಾಕ್ಷಣ ಇವುಗಳನ್ನು ನೋಡಿದರೆ ಅದೃಷ್ಟ – ಆದರೆ ಈ ಕೆಲಸ ತಪ್ಪದೇ ಬಿಡಿ!

ಬೆಳಿಗ್ಗೆ ಎದ್ದಾಕ್ಷಣ ಇವುಗಳನ್ನು ನೋಡಿದರೆ ಅದೃಷ್ಟ – ಆದರೆ ಈ ಕೆಲಸ...

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ: HDK

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ:...