ಠಾಣೆ ಮೇಲೆ ದಾಳಿ ಪ್ರಕರಣ: ವೀರಪ್ಪನ್ ಗ್ಯಾಂಗ್ ಸದಸ್ಯೆಯಾಗಿದ್ದ ಸ್ಟೆಲ್ಲಾ ಮೇರಿಗೆ ಕ್ಲೀನ್’ಚಿಟ್

Date:

ಚಾಮರಾಜನಗರ: ವೀರಪ್ಪನ್ ಕೇಸ್ ಗಳಲ್ಲಿ ಆರೋಪಿಯಾಗಿದ್ದ ಸ್ಪೆಲ್ಲಾ ಮೇರಿ ಖುಲಾಸೆಯಾಗಿದೆ. ಹೌದು ರಾಮಾಪುರ ಪೊಲೀಸ್ ಠಾಣೆ ಮೇಲೆ ದಾಳಿ ಪ್ರಕರಣದಲ್ಲಿ ಸ್ಟೆಲ್ಲಾಮೇರಿ ಆರೋಪಿಯಾಗಿದ್ದಳು. ಇದೀಗಾ ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿ ಚಾಮರಾಜನಗರ ಬಾಲ ನ್ಯಾಯಮಂಡಳಿ ಆದೇಶ ಹೊರಡಿಸಿದೆ. 2020ರ ಫೆಬ್ರವರಿಯಲ್ಲಿ ಸ್ಟೆಲ್ಲಾಮೇರಿಯನ್ನು ಬಂಧಿಸಲಾಗಿತ್ತು. ಟಾಡಾ, ಶಸ್ತ್ರಾಸ್ತ್ರ ಕಾಯ್ದೆ, ಸ್ಫೋಟಕ ಕಾಯ್ದೆ ಸೇರಿದಂತೆ ವಿವಿಧ ಆರೋಪಗಳಡಿ ಪೊಲೀಸರು ಬಂಧಿಸಿದ್ದರು.
ಮಾನವ ಹಕ್ಕುಗಳ ಸಂಘಟನೆಗಳು ಸ್ಟೆಲ್ಲಾಮೇರಿ ಬಂಧನ ಪ್ರಶ್ನಿಸಿದ್ದವು. ಸ್ಟೆಲ್ಲಾಮೇರಿ ಬಿಡುಗಡೆ ಮಾಡಿ ಪ್ರಕರಣವನ್ನು ಬಾಲ ನ್ಯಾಯ ಮಂಡಳಿಗೆ ಚಾಮರಾಜನಗರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಹಿಸಿತ್ತು. ಪಾಲಾರ್ ಬಾಂಬ್ ಸ್ಫೋಟ ಮತ್ತು ರಾಮಾಪುರ ಪೊಲೀಸ್ ಠಾಣೆ ಮೇಲೆ ದಾಳಿ ನಡೆದಾಗ ಸ್ಟೆಲ್ಲಾಮೇರಿ ಅಪ್ರಾಪ್ತೆ ಎಂದು ಮಾನವ ಹಕ್ಕುಗಳ ಸಂಘಟನೆ ವಾದವಾಗಿತ್ತು.
ಸ್ಟೆಲ್ಲಾಮೇರಿಯನ್ನು ವೀರಪ್ಪನ್ ಸಹಚರ ಸುಂಡವಲಿಯಾರ್ ಎಂಬಾತ ಅಪಹರಿಸಿ ಮದುವೆಯಾಗಿದ್ದ ಎಂದು ಪ್ರತಿಪಾದಿಸಿದ್ದಾರೆ. ಪೊಲೀಸ್ ಎನ್ಕೌಂಟರ್ನಲ್ಲಿ ಸುಂಡವಲಿಯಾರ್ ಬಲಿಯಾಗಿದ್ದಾನೆ. ವಾದ ಪುರಸ್ಕರಿಸಿದ ಬಾಲ ನ್ಯಾಯ ಮಂಡಳಿ ಸ್ಟೆಲ್ಲಾಮೇರಿಯನ್ನು ಆರೋಪಗಳಿಂದ ಮುಕ್ತಗೊಳಿಸಿದೆ.

Share post:

Subscribe

spot_imgspot_img

Popular

More like this
Related

ಕರ್ನಾಟಕದಲ್ಲಿ ಭಾರಿ ಮಳೆಯ ಮುನ್ಸೂಚನೆ: 4 ಜಿಲ್ಲೆಗಳಿಗೆ ಯೆಲ್ಲೋ ಮತ್ತು ಆರೆಂಜ್ ಅಲರ್ಟ್

ಕರ್ನಾಟಕದಲ್ಲಿ ಭಾರಿ ಮಳೆಯ ಮುನ್ಸೂಚನೆ: 4 ಜಿಲ್ಲೆಗಳಿಗೆ ಯೆಲ್ಲೋ ಮತ್ತು ಆರೆಂಜ್...

ಈ ಸಮಸ್ಯೆ ಇರುವವರು ಯಾವುದೇ ಕಾರಣಕ್ಕೂ ಸೀತಾಫಲ ತಿನ್ನಬಾರದು.!

ಈ ಸಮಸ್ಯೆ ಇರುವವರು ಯಾವುದೇ ಕಾರಣಕ್ಕೂ ಸೀತಾಫಲ ತಿನ್ನಬಾರದು.! ಸೀತಾಫಲ (Custard Apple)...

ಸಂತೋಷದಿಂದ ಹಬ್ಬವನ್ನು ಆಚರಿಸಿ, ಕಾಂಗ್ರೆಸ್ ಲೂಟಿಯ ವಿರುದ್ಧ ಹೋರಾಡುತ್ತೇವೆ: ನಿಖಿಲ್ ಕುಮಾರಸ್ವಾಮಿ

ಸಂತೋಷದಿಂದ ಹಬ್ಬವನ್ನು ಆಚರಿಸಿ, ಕಾಂಗ್ರೆಸ್ ಲೂಟಿಯ ವಿರುದ್ಧ ಹೋರಾಡುತ್ತೇವೆ: ನಿಖಿಲ್ ಕುಮಾರಸ್ವಾಮಿ ಬೆಂಗಳೂರು...

ಕರ್ನಾಟಕದಲ್ಲಿ ಭಾರೀ ಮಳೆ: 23 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ!

ಕರ್ನಾಟಕದಲ್ಲಿ ಭಾರೀ ಮಳೆ: 23 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ! ಬೆಂಗಳೂರು: ರಾಜ್ಯದ...