ಸಿಂಪಲ್ಲಾಗಿನ್ನೊಂದ್ ಲವ್ ಸ್ಟೋರಿ ಸಿನಿಮಾದ ನಾಯಕಿ ಮೇಘನಾ ಗಾವ್ಕರ್ ಸದ್ಯ ‘ಕಾಳಿದಾಸ ಕನ್ನಡ ಮೇಷ್ಟ್ರು’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಇದೀಗ ಡಬ್ಬಿಂಗ್ ನಲ್ಲಿನಿರತರಾಗಿದ್ದಾರೆ. ಈಗಾಗಲೇ ಈ ಸಿನಿಮಾ ಡಬ್ಬಿಂಗ್ ಕಾರ್ಯದಲ್ಲಿ ಮೇಘನ ಭಾಗಿಯಾಗಿದ್ದು, ಡಬ್ಬಿಂಗ್ ವೇಳೆ ಈ ನಟಿ ಕಣ್ಣೀರು ಹಾಕಿದ್ದಾರೆ.
ಕೆಲವೊಮ್ಮೆ ಸಿನಿಮಾ ನಟ – ನಟಿಯರು ಆ ಪರಿಸ್ಥಿತಿಗೆ ತಕ್ಕಂತೆ ಬದಲಾಗಬೇಕಾಗುತ್ತದೆ. ಅಳು, ನಗು, ಕಾಮಿಡಿ ಅವರಿಗೆ ಕರಗತವಾಗಿರುತ್ತವೆ. ಹಾಗಿದ್ದಾಗ ಮಾತ್ರ ಅವರು ಪರಿಪೂರ್ಣವಾಗಿ ಪಾತ್ರ ನಿಭಾಯಿಸಲು ಸಾಧ್ಯವಾಗುತ್ತದೆ. ಇದೀಗ ನಟ ಮೇಘನಾ ಕೂಡ ತಮ್ಮ ಪಾತ್ರದಲ್ಲಿ ಸಂಪೂರ್ಣವಾಗಿ ಮಗ್ನರಾಗಿ ನಿಭಾಯಿಸಿದ್ದಾರೆ.