ಡಾಲಿಗೆ ಅವಮಾನ ಮಾಡಿದ ಪೊಗರು ಚಿತ್ರತಂಡ..!?

Date:

 

ದಾವಣಗೆರೆಯಲ್ಲಿ ಫೆಬ್ರವರಿ 14 ರಂದು ಪುಲ್ವಾಮಾ ಕಹಿ ಘಟನೆಯ ನೆನಪಿನಲ್ಲಿಯೂ ಪೊಗರು ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ಭರ್ಜರಿಯಾಗಿ ನಡೆಸಲಾಯಿತು. ಈ ಮಹಾ ಕಾರ್ಯಕ್ರಮಕ್ಕೆ ಇಡೀ ಚಿತ್ರತಂಡವೇ ಬಂದಿತ್ತು.

ಆದರೆ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿರುವ ಡಾಲಿ ಧನಂಜಯ್ ಮಾತ್ರ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಹಾಜರಿರಲಿಲ್ಲ. ಎಷ್ಟೋ ಜನಕ್ಕೆ ಇದನ್ನು ನೋಡಿ ಶಾಕ್ ಆಗಿದ್ದಂತೂ ನಿಜ. ಪ್ರಮುಖ ವಿಲನ್ ಧನಂಜಯ್ ಅವರೇ ಇಲ್ಲದೇ ಆಡಿಯೋ ಬಿಡುಗಡೆ ಹೇಗೆ? ಎಂದು ಸಿನಿ ಪ್ರೇಕ್ಷಕರು ಅಸಮಾಧಾನರಾದರು.

ಆಡಿಯೋ ಬಿಡುಗಡೆಯ ಪೋಸ್ಟರ್ ಗಳಲ್ಲಿ ಮಾತ್ರ ಡಾಲಿ ಧನಂಜಯ್ ಅವರ ಫೋಟೋ ಇತ್ತು. ಅದೂ ಕೂಡ ಎಲ್ಲ ಕಲಾವಿದರ ಫೋಟೋಗಳಿಗಿಂತ ಚಿಕ್ಕದಾಗಿ & ಪೋಸ್ಟರ್ ನ ಕೊನೆಯಲ್ಲಿ ಇತ್ತು…! ಪೋಸ್ಟರ್ ನಲ್ಲಿ ಧನಂಜಯ್ ಅವರ ಫೋಟೋ ನೋಡಿದ್ರೆ ಬೇಕೋ ಬೇಡ್ವೋ , ಸೈಡ್ ನಲ್ಲಿ ಇವನೊಬ್ಬ ಇರಲಿ ಬಿಡು ಎನ್ನುವ ರೀತಿ ಹಾಕಲಾಗಿದೆ ಎನಿಸದೇ ಇರಲಾರದು. ಅಷ್ಟರ ಮಟ್ಟಿಗೆ ಒಬ್ಬ ಲೀಡಿಂಗ್ ಕಲಾವಿದನ ಫೋಟೋವನ್ನು ಕಡೆಗಣಿಸಿ ಹಾಕಲಾಗಿತ್ತು.

ಅಷ್ಟು ಮಾತ್ರವಲ್ಲದೇ ಚಿತ್ರತಂಡದವರಾರೂ ಧನಂಜಯ್ ಅವರ ಬಗ್ಗೆ ದನಿ ಎತ್ತಲಿಲ್ಲ. ಅವರ ಕುರಿತು ಒಂದೇ ಒಂದು ಪೋಸ್ಟರ್ ಕೂಡ ಬಿಟ್ಟಿಲ್ಲ ಚಿತ್ರತಂಡ. ಇನ್ನು ಧನಂಜಯ್ ಅವರೂ ಸಹ ಪೊಗರು ಕುರಿತು ಎಲ್ಲಿಯೂ ಮಾತನಾಡಿಲ್ಲ & ಆ ಚಿತ್ರದ ಪ್ರಮೋಷನ್ ಕೂಡ ಮಾಡ್ತಾ ಇಲ್ಲ. ಇದನ್ನೆಲ್ಲಾ ಗಮನಿಸಿದ ನೆಟ್ಟಿಗರು ಧನಂಜಯ್ ಅವರನ್ನು ಪೊಗರು ಚಿತ್ರತಂಡ ಕಡೆಗಣಿಸಿದೆ , ಬೇಕಂತಲೇ ಅವರನ್ನು ಕಾರ್ಯಕ್ರಮಕ್ಕೆ ಕರೆದಿಲ್ಲ ಎಂದೆಲ್ಲಾ ಮಾತನಾಡಿಕೊಳ್ಳುತ್ತಿದ್ದಾರೆ.

ವಿದೇಶಗಳಿಂದ ವಿಲನ್ ಗಳನ್ನು ಕರೆಸಿ ಅವರಿಗೆ ಸ್ಟೇಜ್ ಕೊಟ್ಟು ಬಾಡಿ ಪ್ರದರ್ಶನ ಮಾಡಿಸಿ ಬಿಲ್ಡಪ್ ಕೊಟ್ರು , ಆದರೆ ನಮ್ಮದೇ ನಾಡಿನ ಪ್ರತಿಭಾವಂತ ನಟನನ್ನು ಮಾತ್ರ ಆಡಿಯೋ ಲಾಂಚ್ ಗೆ ಕರೆಸಲಿಲ್ಲ. ನಮ್ಮ ಕಲಾವಿದರು ಮುಖ್ಯ ಅನ್ನೋದು ಇಲ್ಲಿ ಬರಿ ಬಾಯಿ ಮಾತಿಗೆ ಸೀಮಿತ.. ಮದಗಜ & ರಾಬರ್ಟ್ ತಂಡಗಳು ತಮ್ಮ ಚಿತ್ರದ ವಿಲನ್ ಜಗಪತಿ ಬಾಬು ಅವರ ಹುಟ್ಟುಹಬ್ಬಕ್ಕೆ ವಿಶೇಷ ಪೋಸ್ಟರ್ & ಟೀಸರ್ ಬಿಡುಗಡೆ ಮಾಡಿದ್ದವು , ಆದರೆ ಪೊಗರು ಚಿತ್ರತಂಡ ಮಾತ್ರ ಇದುವರೆಗೆ ಬಿಡುಗಡೆ ಮಾಡಿರುವ ಯಾವುದೇ ಪೋಸ್ಟರ್ ನಲ್ಲಿಯೂ ಧನಂಜಯ್ ಅವರಿಗೆ ಸ್ಥಾನ ಕೊಡದೇ ಕಡೆಗಣಿಸಿದೆ..

 

ಏನೇ ಆಗಲಿ ಸಿನಿಮಾದ ಅತೀ ಪ್ರಮುಖ & ಅತಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ಧನಂಜಯ್ ಅವರನ್ನು ಕಡೆಗಣಿಸಿದ್ದು ಮಾತ್ರ ನಿಜಕ್ಕೂ ತಪ್ಪು.

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...