ದುಡ್ಡು ಕೊಡ್ತೀವಿ ಅಂತ ಈ ರೀತಿನೂ ನಡೆಸಿಕೊಳ್ತಾರಾ?

0
63

ಪೊಗರು ಚಿತ್ರದ ಟೈಟಲ್ ಟ್ರ್ಯಾಕ್ ನ ವಿಡಿಯೋ ಇತ್ತಿಚಿಗಷ್ಟೇ ಯುಟ್ಯೂಬ್ ನಲ್ಲಿ ಬಿಡುಗಡೆಗೊಂಡಿದೆ. ಈ ಹಿಂದೆ ಕರಾಬು ಎಂಬ ಹಾಡನ್ನ ಬಿಡುಗಡೆ ಮಾಡಿ ಸಾಕಷ್ಟು ಟ್ರೋಲ್ ಗಳಿಗೆ ಒಳಗಾಗಿದ್ದ ಪೊಗರು ಚಿತ್ರತಂಡ ಇದೀಗ ಟೈಟಲ್ ಟ್ರ್ಯಾಕ್ ಬಿಡುಗಡೆ ಆದ ಮೇಲೂ ಸಹ ಸಿಕ್ಕಾಪಟೆ ಟ್ರೋಲ್ ಗೆ ಒಳಗಾಗಿದೆ. ತನ್ನ ಅತೀ ಕೆಟ್ಟ ಕೊರಿಯೋಗ್ರಫಿ ಇಂದ ಈ ಹಾಡು ಪ್ರೇಕ್ಷಕರನ್ನು ಗೆಲ್ಲುವಲ್ಲಿ ವಿಫಲವಾಗಿದೆ.

 

ಹಾಡಿನ ಉದ್ದಕ್ಕೂ ಜಾತ್ರೆ ಬಟ್ಟೆ ಮತ್ತು ಪ್ಯಾಂಟ್ ಗಳನ್ನು ಹಾಕುವ ನಾಯಕನಟ ಡಾನ್ಸ್ ಮಾಡ್ತಾ ಇದ್ದಾನಾ ಅಥವಾ ಫೈಟ್ ಮಾಡ್ತಾ ಇದ್ದಾನಾ, ಇಲ್ಲ ಯಾರಿಗಾದರೂ ಹೊಡಿತೀನಿ ಬಡಿತೀನಿ ಅಂತ ಆವಾಜ್ ಹಾಕ್ತಾ ಇದ್ದಾನೋ ಅನ್ನೋದೇ ಗೊತ್ತಾಗಲ್ಲ.. ಅಷ್ಟು ಹಿಂಸಾತ್ಮಕ ವಾಗಿದೆ ಈ ಹಾಡಿನ ಕೊರಿಯೋಗ್ರಫಿ..

 

 

ಇನ್ನೂ ಈ ಹಾಡಿನಲ್ಲಿ ಹಲವಾರು ಜ್ಯೂನಿಯರ್ ಆರ್ಟಿಸ್ಟ್ ಗಳನ್ನ ಬಳಸಿಕೊಳ್ಳಲಾಗಿದೆ. ಎಲ್ಲಾ ಹಾಡಿನಲ್ಲಿಯೂ ಬಳಸಿಕೊಳ್ಳುವಂತೆ ಈ ಹಾಡಿನಲ್ಲಿ ಜ್ಯೂನಿಯರ್ ಆರ್ಟಿಸ್ಟ್ ಗಳನ್ನ ಬಳಸಿಕೊಳ್ಳಲಾಗಿಲ್ಲ ಬದಲಾಗಿ ವಿಶೇಷವಾಗಿ ರಾಜಮರ್ಯಾದೆಯನ್ನು ಈ ಹಾಡಿನಲ್ಲಿ ನೀಡಿದ್ದಾರೆ ಅಂತಾನೇ ಹೇಳ್ಬಹುದು. ಹೌದೋ ಜ್ಯೂನಿಯರ್ ಆರ್ಟಿಸ್ಟ್ ತಲೆ ಮೇಲೆ ಚಪ್ಪಲಿ ಹಾಕಿಕೊಂಡು ನಾಯಕನಟ ಕಾಲನ ಇಡ್ತಾರೆ. ಮತ್ತೊಬ್ಬ ಜೂನಿಯರ್ ಆರ್ಟಿಸ್ಟ್ ನಾಯಕನಟ ಹಾಕಿರುವ ಚಪ್ಪಲಿಯನ್ನ ತನ್ನ ಕೈಯಿಂದ ಬಿಚ್ಚುತ್ತಾನೆ.

 

 

ಮತ್ತೊಂದು ದೃಶ್ಯದಲ್ಲಿ ನಾಯಕ ನಟ ಶೂ ಹಾಕಿಕೊಂಡು ಜ್ಯೂನಿಯರ್ ಆರ್ಟಿಸ್ಟ್ ತಲೆಮೇಲೆ ಕಾಲಿಡುತ್ತಾನೆ , ಹಾಗೆ ಚಿಕನ್ ಪೀಸ್ ತಿನ್ನುತ್ತಾ ಶೂ ಧರಿಸಿರುವ ಆತನ ಕಾಲನ್ನು ಜ್ಯೂನಿಯರ್ ಆರ್ಟಿಸ್ಟ್ ಬೆನ್ನ ಮೇಲೆ ಹಾಕಿ ನೆಲಕ್ಕೆ ತುಳಿಯುತ್ತಾನೆ.. ಇದೆಲ್ಲಾ ನಾಯಕನಿಗೆ ಬಿಲ್ಡಪ್ ಕೊಡಲು ಬೇಕಿತ್ತಾ ಎನಿಸದೆ ಇರಲಾರದು. ದುಡ್ಡು ಕೊಟ್ಟು ಜ್ಯೂನಿಯರ್ ಆರ್ಟಿಸ್ಟ್ ಗಳನ್ನ ಕರೆಸಿ ಅವರ ಕೈಯಲ್ಲಿ ಹೊರತು ಈ ರೀತಿ ದೈಹಿಕವಾಗಿ ಹಿಂಸೆಯನ್ನು ಕೊಡಬಾರದು.

 

 

ಚಪ್ಪಲಿ ಮತ್ತು ಶೂ ಧರಿಸಿ ಜ್ಯೂನಿಯರ್ ಆರ್ಟಿಸ್ಟ್ ಮೇಲೆ ಕಾಲಿಡುವ ದೃಶ್ಯವನ್ನು ಧ್ರುವ ಸರ್ಜಾ ಅವರು ಹೇಗಾದರೂ ಒಪ್ಪಿಕೊಂಡರೋ ಏನೋ? ಅಣ್ಣಾವ್ರು ಏನಾದ್ರೂ ಬದುಕಿದಿದ್ದಿದ್ರೆ ಅವರ ಬಾಯಿಂದ ಬರುತ್ತಿದ್ದ ಬುದ್ಧಿ ವಾದವೇ ಬೇರೆ ಬಿಡಿ. ಅಭಿಮಾನಿಗಳು ಕಾಲಿಗೆ ಬೀಳಲು ಬಂದಾಗ ಅವರ ಕೈಗೆ ಕಾಲು ತಾಗಬಾರದು ಅಂತ ಮುಂಜಾಗ್ರತೆ ವಹಿಸಿ ಕಾಲನ ಪಕ್ಕಕ್ಕೆ ಸರಿಸಿ ಕೊಳ್ಳುವ ನಮ್ಮ ಕನ್ನಡ ನಟರ ನಡುವೆ ಈ ರೀತಿ ಜ್ಯೂನಿಯರ್ ಆರ್ಟಿಸ್ಟ್ ಗಳ ತಲೆ ಮೇಲೆ ಚಪ್ಪಲಿ ಕಾಲನ್ನು ಇಡುವುದು ಎಷ್ಟು ಸರಿ?

 

ಇದನ್ನೆಲ್ಲ ನೋಡಿಕೊಂಡು ಮಾನವ ಹಕ್ಕುಗಳ ಆಯೋಗ ಸುಮ್ಮನೆ ಕೂತಿದೆಯಾ? ನೃತ್ಯ ಮಾಡುವವರನ್ನ ಈ ರೀತಿಯೆಲ್ಲಾ ಕೆಟ್ಟದಾಗಿ ಬಳಸಿಕೊಳ್ಳುವುದು ಎಷ್ಟು ಸರಿ?

 

ಅಷ್ಟೇ ಅಲ್ಲದೆ ಈ ಹಾಡಿನ ದೃಶ್ಯದಲ್ಲಿ ಮತ್ತೊಂದು ಮಹಾನ್ ಹೀರೋಯಿಸಂ ಸೀನ್ ಇದೆ. ನಟ ಜ್ಯೂನಿಯರ್ ಆರ್ಟಿಸ್ಟ್ ಒಬ್ಬನ ಪ್ಯಾಂಟನ್ನ ಹಿಡಿದು ಎಳೆದು ಬಿಸಾಕುತ್ತಾನೆ ಆ ರಭಸಕ್ಕೆ ಜ್ಯೂನಿಯರ್ ಆರ್ಟಿಸ್ಟ್ ಪ್ಯಾಂಟ್ ಕಿತ್ತು ಹೋಗುತ್ತದೆ. ಪಾಪ ಆ ಜ್ಯೂನಿಯರ್ ಆರ್ಟಿಸ್ಟ್ ನ ಬೆತ್ತಲೆಯಾಗಿ ಈ ಹಾಡಿನಲ್ಲಿಯೇ ತೋರಿಸಲಾಗಿದೆ. ಹೀರೋಗೆ ಬಿಲ್ಡಪ್ ಬೇಕು ಅಂತ ಇದನ್ನೆಲ್ಲಾ ಮಾಡುವ ಅಗತ್ಯತೆ ಇದೆಯಾ? ಇವೆಲ್ಲಾ ದೌರ್ಜನ್ಯ ಅನಿಸದೆ ಇರೋಕೆ ಸಾಧ್ಯನೇ ಇಲ್ಲ ಬಿಡಿ.

 

LEAVE A REPLY

Please enter your comment!
Please enter your name here