ರಾಘವೇಂದ್ರ ಮಠದಲ್ಲಿ ಬೆಳಿಗ್ಗೆ 9ರಿಂದಲೇ ಇಷ್ಟಾರ್ಥ ಸಿದ್ಧಿಗಾಗಿ ಮಹಾಗಣಪತಿ ಹೋಮದಲ್ಲಿ ಪುಣ್ಯಃ, ಗಣಪಾರಾಧನೆ, ಹವನ, ಹೋಮ, ಪೂಜ ವಿಧಿ-ವಿಧಾನಗಳ ಮೂಲಕ ಹೋಮ ನಡೆಸಲಾಯಿತು. ಬೆಂಗಳೂರು ಬನಶಂಕರಿಯ ಕತ್ರಿಗುಪ್ಪೆಯ ಆಗಮಿತರಾದ ಪ್ರದೀಪ್‍ಶರ್ಮರವರ ತಂಡದ ನೇತೃತ್ವದಲ್ಲಿ ಮಹಾಗಣಪತಿ ಹೋಮ ಮತ್ತು ಯಜ್ಞ, ಪೂಜ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ಬ್ರಾಹ್ಮಣ ಸಮುದಾಯದ ಸುಬ್ರಹ್ಮಣ್ಯ ಮತ್ತು ಬಾಲಾಜಿ ಶ್ರೀನಿವಾಸ್‍ಮಾತನಾಡಿ, ಡಿ.ಕೆ.ಶಿವಕುಮಾರ್ ಅವರಿಗೆ ಬಂದಿರುವ ಕಂಟಕಗಳು ದೂರವಾಗಬೇಕೆಂದು ಈ ಹೋಮಹವನ ಹಮ್ಮಿಕೊಳ್ಳಲಾಗಿತ್ತು ಎನ್ನಲಾಗ್ತಿದೆ. ಕೆಲವು ಮುಕಂಡರುಗಳು ಬಾಗಿಯಾಗಿದ್ದರು.