ಇಡಿ ಅಧಿಕಾರಿಗಳು ಕಾಂಗ್ರೆಸ್ನ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಅವರನ್ನು ಬಿಡುವು ಕೂಡ ನೀಡದೆ ತನಿಖೆ ನಡೆಸುತ್ತಿದ್ದಾರೆ. ಇದು ರಾಷ್ಟ್ರಾದ್ಯಂತ ಗಣೇಶ ಚತುರ್ಥಿಯನ್ನು ಅದ್ಧೂರಿಯಿಂದ ಜನರು ಆಚರಿಸುತ್ತಿದ್ದು ಮರಣ ಹೊಂದಿರುವ ಹಿರಿಯರಿಗೆ ಎಡೆ ಇಡುವುದು ಸಾಮಾನ್ಯ.
ಇನ್ನು ಡಿಕೆ ಶಿವಕುಮಾರ್ ಅವರು ಸಹ ತಮ್ಮ ತಂದೆಗೆ ಗೌರಿ ಗಣೇಶ ಹಬ್ಬದಂದು ಎಡೆ ಇಡುತ್ತಿದ್ದರು. ಆದರೆ ಇಡಿ ಅಧಿಕಾರಿಗಳು ಹಬ್ಬದ ದಿನವೂ ಸಹ ಅವರ ತನಿಖೆಯನ್ನು ಮುಂದುವರೆಸಿದ ಕಾರಣ ಅವರ ತಂದೆಗೆ ಜೀವನದಲ್ಲಿ ಇದೇ ಮೊದಲ ಬಾರಿಗೆ ಎಡೆ ಇಟ್ಟು ಪೂಜೆ ಮಾಡಲು ಆಗಿಲ್ಲ ಎಂದು ನವದೆಹಲಿಯಲ್ಲಿ ಅವರು ಕಣ್ಣೀರು ಇಟ್ಟಿದ್ದಾರೆ. ಅಷ್ಟೇ ಅಲ್ಲದೆ ಬಿಜೆಪಿ ನಾಯಕರು ಬೇಕಂತಲೇ ಈ ರೀತಿ ನನ್ನನ್ನು ಸಿಕ್ಕಿಸಿ ಹಾಕುತ್ತಿದ್ದಾರೆ ಎಂದು ಸಹ ಅವರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.