ಬೆಂಗಳೂರು: ಡಿಕೆಶಿ ನೋಟಿಸ್ ಕೊಡಲಿ ಕೊಟ್ಟ ಮೇಲೆ ನಾನು ಮಾತಾಡ್ತೇನೆ ಎಂದು ಸಚಿವ ರಾಜಣ್ಣಹೇಳಿದ್ದಾರೆ. ಸಿಎಂ, ಡಿಸಿಎಂ ವಿಚಾರವಾಗಿ ಸಾರ್ವಜನಿಕವಾಗಿ ಹಾಗೂ ಮಾಧ್ಯಮಗಳ ಮುಂದೆ ಮಾತನಾಡುವವರಿಗೆ ವಿಧಿಯಿಲ್ಲದೇ ನೋಟಿಸ್ ಕೊಟ್ಟು, ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾಋವಾಗಿ ಬೆಂಗಳೂರು ನಗರದಲ್ಲಿ ಮಾತನಾಡಿದರು,
ಡಿಕೆಶಿ ನೋಟಿಸ್ ಕೊಡಲಿ ಕೊಟ್ಟ ಮೇಲೆ ನಾನು ಮಾತಾಡ್ತೇನೆ. ಸಲಹೆ ನೀಡುವಾಗ ಸಾರ್ವಜನಿಕವಾಗಿ ವಿವಾದ ಆಗಬಾರದು ಎಂದು ಅವರು ಹೇಳಿರಬಹುದು. ಅದಕ್ಕೆ ನಾನು ಒಪ್ಪುತ್ತೇನೆ. ಬೇರೆಯವರು ಒಪ್ಪಬಹುದು. ನಾವು ಡಿಸಿಎಂ ಬಗ್ಗೆ ಹೇಳಿದ್ರೆ ಏನು ತಪ್ಪಾಗುತ್ತದೆ? ನಾವು ಕೇಳಬಾರದಾ? ನಾವು ಕೇಳಿದ್ದೇ ತಪ್ಪಾಗುತ್ತದೆಯೇ? ಕೇಳಿದ್ದೇ ತಪ್ಪು ಎಂದರೆ ಯಾವುದೇ ಕ್ರಮ ತೆಗೆದುಕೊಂಡರೂ ಎದುರಿಸಲು ನಾನು ತಯಾರಿದ್ದೇನೆ ಎಂದು ಅವರು ಡಿಸಿಎಂಗೆ ಸವಾಲು ಹಾಕಿದ್ದಾರೆ.
ಡಿಕೆಶಿ ನೋಟಿಸ್ ಕೊಡಲಿ ಕೊಟ್ಟ ಮೇಲೆ ನಾನು ಮಾತಾಡ್ತೇನೆ: ಸಚಿವ ರಾಜಣ್ಣ
Date: