ಡಿಕೆ ಶಿವಕುಮಾರ್ ಜೊತೆಗೆ ನಾಟಿಕೋಳಿ ಸಾರು, ಬಿಸಿ ಬಿಸಿ ಇಡ್ಲಿ ಸವಿದ ಸಿಎಂ ಸಿದ್ದರಾಮಯ್ಯ
ಡಿಕೆ ಶಿವಕುಮಾರ್ ಜೊತೆಗೆ ನಾಟಿಕೋಳಿ ಸಾರು, ಬಿಸಿ ಬಿಸಿ ಇಡ್ಲಿ ಸವಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಮತ್ತು ಅಧಿಕಾರ ಹಂಚಿಕೆ ಚರ್ಚೆಗಳನ್ನು ಶಮಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ‘ಬ್ರೇಕ್‌ಫಾಸ್ಟ್ ಮೀಟಿಂಗ್’ ಮುಂದುವರಿದಿದೆ. ಸದಾಶಿವನಗರದಲ್ಲಿರುವ ಡಿ.ಕೆ. ಶಿವಕುಮಾರ್ ಅವರ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸಿ ನಾಟಿಕೋಳಿ ಸಾರು ಮತ್ತು ಬಿಸಿ ಬಿಸಿ ಇಡ್ಲಿಯನ್ನು ಸವಿದರು.
ಚರ್ಚೆಯ ಮಧ್ಯೆ ಇಬ್ಬರೂ ಪಕ್ಷದ ಒಳರಾಜಕೀಯ ಮತ್ತು ಮುಂದಿನ ತೀರ್ಮಾನಗಳಿಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿದರು. ಆದರೆ, ಡಿ.ಕೆ. ಶಿವಕುಮಾರ್ ಮಾತ್ರ ಉಪಾಹಾರ ಕೂಟದಲ್ಲಿ ನಾನ್-ವೆಜ್ ಸೇವಿಸಲಿಲ್ಲ ಎಂದು ಮೂಲಗಳು ತಿಳಿಸಿವೆ. ಬ್ರೇಕ್ ಫಾಸ್ಟ್ ಮೀಟಿಂಗ್ನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಹೋದರ ಡಿಕೆ ಸುರೇಶ್ ಹಾಗೂ ಶಾಸಕ ಡಾ.ರಂಗನಾಥ್ ಭಾಗಿಯಾಗಿದ್ದರು. ನಾಟಿ ಕೋಳಿ ಪದಾರ್ಥದ ಜೊತೆ ಇಡ್ಲಿಯನ್ನು ಸಿದ್ದರಾಮಯ್ಯ ಸವಿದರು. ಹಾಗೆ ಡಿಸಿಎಂ ಶಿವಕುಮಾರ್, ನಾನ್ವೆಜ್ ಸೇವನೆ ಮಾಡಿಲ್ಲ.






