“ಇವತ್ತೇನೋ ಒಂಥರಾ ಖುಷಿ ಆಗ್ತಿದೆ. ಮೊದಲೆಲ್ಲ ನನ್ನೂರು ಭದ್ರಾವತಿ ಹಾಗೂ ಶಿವಮೊಗ್ಗಕ್ಕೆ ಬಂದು ಸಿನಿಮಾ ನೋಡ್ತಿದ್ದೆ. ಇವತ್ತು ‘ರಾಬರ್ಟ್’ ಸಿನಿಮಾದಲ್ಲಿ ನಟಿಸಿ ನಮ್ಮೂರಲ್ಲೇ ಸಿನಿಮಾ ನೋಡಲು ಬಂದಿದ್ದೀನಿ. ದರ್ಶನ್ ಅವರ ಜೊತೆ ಸಿನಿಮಾ ಮಾಡುವುದರ ಜೊತೆಗೆ ಉತ್ತಮ ನಿರ್ದೇಶಕ ತರುಣ್ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಬ್ಯಾನರ್ ಅಡಿ ಕೆಲಸ ಮಾಡುವುದು ಒಂಥರಾ ಹೆಗ್ಗಳಿಕೆ” ಎಂದು ಆಶಾ ಭಟ್ ಹೇಳಿದ್ದಾರೆ.
‘ರಾಬರ್ಟ್’ ನಂತರ ಯಾವ ಸಿನಿಮಾ ಮಾಡ್ತೀರಾ ಎಂಬ ಪ್ರಶ್ನೆಗೆ ಎಲ್ಲೂ ಸುಳಿವು ನೀಡದೇ ಜಾಣ್ಮೆಯಿಂದ ಉತ್ತರಿಸಿದ್ದಾರೆ. “ಈಗಷ್ಟೇ ರಾಬರ್ಟ್ ಸಕ್ಸಸ್ ಮೀಟ್ ಮುಗಿಸಿದ್ದೇವೆ. ಆಫರ್‌ಗಳ ಬಗ್ಗೆ ಎಲ್ಲೂ ಇದುವರೆಗೆ ಮಾತಾಡಿಲ್ಲ. ಬೆಂಗಳೂರಿಗೆ ವಾಪಸ್ ಆದ ಬಳಿಕ ಕಥೆಗಳನ್ನ ಕೇಳಬೇಕಿದೆ. ಆದರೆ ಸಾಕಷ್ಟು ಅವಕಾಶಗಳು ಬಂದಿರೋದು ನಿಜ” ಎಂಬ ಅರ್ಥದಲ್ಲಿ ಉತ್ತರಿಸಿದರು.
ಸೆಟ್‌ನಲ್ಲಿ ದರ್ಶನ್ ಹೇಗೆ ಇರ್ತಿದ್ರು ಎಂಬ ಪ್ರಶ್ನೆಗೆ ಉತ್ತರಿಸಿ, “ದರ್ಶನ್ ಯಾವತ್ತೂ ನಾನು ಅಂಥ ಅನ್ನೋವ್ರಲ್ಲ, ನಾವು ಅಂತಿದ್ರು. ರಾಬರ್ಟ್ ಬಹಳ ದೊಡ್ಡ ಕಲಾವಿದರ ತಂಡ. ಎಲ್ಲರ ಜೊತೆ ಒಂದಾಗಿ ಬೆರೀತಿದ್ರು. ಶೂಟಿಂಗ್ ಮುಗಿದ ತಕ್ಷಣ ನಾವು ವ್ಯಾನಿಟಿ ವ್ಯಾನ್‌ಗೆ ಹೋಗ್ತಿರಲಿಲ್ಲ. ಸೆಟ್‌ನಲ್ಲಿ ಕುಳಿತು ಆರಾಮಾಗಿ ಟೀ ಕುಡಿತ, ಊಟ ಮಾಡ್ತ, ಯಾವುದೋ ಟಾಪಿಕ್ ಮಾತಾಡ್ತ ಕಾಲ ಕಳೆಯುತ್ತಿದ್ವಿ. ಹೀ ಈಸ್ ದಿ ಜಂಟಲ್ ಮ್ಯಾನ್. ನಮ್ಮ ಸೆಟ್‌ಲ್ಲಿ ಎಲ್ಲ ಹಸನ್ಮುಖಿಗಳೇ ಇದ್ದರು” ಎಂದರು.
“ಕಚ್‌ನಲ್ಲಿ ಶೂಟಿಂಗ್ ಮಾಡುವಾಗ ಚಾಲೆಂಜಿಂಗ್ ಆಗಿತ್ತು. ಪ್ರತಿಕೂಲ ವಾತಾವರಣದಲ್ಲಿ ಕಣ್ಣೇ ಬಿಡಲಾಗ್ತಿರಲಿಲ್ಲ ಆದರಲ್ಲೂ ಕಣ್ಣು ಹೊಡಿಯಾಕ ಹಾಡು ಶೂಟಿಂಗ್ ಮಾಡಿದ್ವಿ ಎಂದು ತಮ್ಮ ಅನುಭವ ಹಂಚಿಕೊಂಡು ಎರಡು ಸಾಲು ಹಾಡನ್ನ ಹಾಡಿದ್ರು. ಡಿ ಬಾಸ್ ಫ್ಯಾನ್ಸ್ ರಾಕ್ ಸ್ಟಾರ್‌ಗಳಿದ್ದಂತೆ, ರಾಬರ್ಟ್ ಸಿನಿಮಾಕ್ಕೆ ನನ್ನ ಹೆಸರು ಘೋಷಣೆಯಾದ ದಿನದಿಂದ ಇಲ್ಲೀವರೆಗೆ ಅವರ ಪ್ರೀತಿ ಕಮ್ಮಿಯಾಗಿಲ್ಲ” ಎಂದರು.