ನಗರದಲ್ಲಿ ಡೆಂಗ್ಯೂ ಮಾದರಿಯ ಮತ್ತೊಂದು ಸೋಂಕು ಪತ್ತೆಯಾಗಿದೆ. ಈ ಪೈಕಿ ಥ್ರಂಬೋಸೈಟೋಪೆನಿಯಾ- ಪ್ಲೇಟ್ ಲೆಟ್ ಸಂಖ್ಯೆ ಕುಸಿತ ಕಾಣುವ ಸ್ಥಿತಿಯೊಂದಿಗೆ ವೈರಾಣು ಜ್ವರ ಇರುವುದು ಹೆಚ್ಚು ವರದಿಯಾಗುತ್ತಿರುವ ಪ್ರಕರಣಗಳಾಗಿವೆ. ಕಟ್ಟಡ ನಿರ್ಮಾಣಕ್ಕೆ ಹತ್ತಿರವಿರುವ ಪ್ರದೇಶಗಳು ಕೈಗಾರಿಕಾ ಪ್ರದೇಶಗಳ ಬಳಿ ಇರುವವರು ಈ ರೀತಿಯ ವೈರಲ್ ಜ್ವರಕ್ಕೆ ಹೆಚ್ಚು ದುರ್ಬಲರಾಗಿರುತ್ತಾರೆ ಹಾಗೂ ಹರಡುವ ಸಾಮರ್ಥ್ಯ ಹೊಂದಿರುತ್ತವೆ.
ಈ ರೀತಿಯ ಜ್ವರವನ್ನು ಹಲವು ಮಂದಿ ಡೆಂಗ್ಯೂ ಎಂದು ತಪ್ಪಾಗಿ ಭಾವಿಸುವುದುಂಟು ಆದರೆ ಡೆಂಗ್ಯೂಗೆ ಟೆಸ್ಟ್ ಮಾಡಿಸಿದರೆ ನೆಗೆಟಿವ್ ವರದಿ ಬರುತ್ತದೆ.
ಕೊಲಂಬಿಯಾ ಏಷ್ಯಾ, ಹೆಬ್ಬಾಳ (ಮಣಿಪಾಲ್ ಹಾಸ್ಪೆಟಲ್ಸ್) ನ ಸಲಹೆಗಾರರಾಗಿರುವ ಡಾ.ಇರ್ಫಾನ್ ಜಾವೀದ್ ಖಾಜಿ, ತಾವು ಪ್ರತಿ 5 ರೋಗಿಗಳ ಪೈಕಿ ಒಬ್ಬರಲ್ಲಿ ಈ ರೀತಿಯ ಕಡಿಮೆ ಪ್ಲೇಟ್ ಲೆಟ್ ಇರುವ ವೈರಲ್ ಫೀವರ್ ಇರುವ ಪ್ರಕರಣಗಳನ್ನು ನೋಡುತ್ತಿರುವುದಾಗಿ ಹೇಳಿದ್ದಾರೆ.
ಸಾಮಾನ್ಯವಾದ ರೋಗಲಕ್ಷಣಗಳೆಂದರೆ ಮೈಯಾಲ್ಜಿಯಾ, ಜ್ವರ, ತಲೆನೋವು, ಕೆಲವೊಮ್ಮೆ ಮೇಲ್ಭಾಗದ ಶ್ವಾಸೇಂದ್ರಿಯ ಸೋಂಕು ಮತ್ತು GI ರೋಗಲಕ್ಷಣಗಳೊಂದಿಗೆ ಸಂಬಂಧಿಸಿದೆ.
ವೈರಸ್‌ಗಳೊಂದಿಗೆ ಕಲುಷಿತ ನೀರು ಥ್ರಂಬೋಸೈಟೋಪೆನಿಯಾದೊಂದಿಗೆ ವೈರಲ್ ಜ್ವರಕ್ಕೆ ಕಾರಣವಾಗಬಹುದು, ಮಕ್ಕಳಿಂದ 70 ವರ್ಷದವರವರೆಗೂ ಈ ಜ್ವರ ಕಾಣಿಸಿಕೊಳ್ಳಬಹುದು ಎನ್ನುತ್ತಾರೆ ಡಾ.ಖಾಜಿ.