ಡೆಲ್ಟಾ ಸೋಂಕಿತನಿಂದ ಎಷ್ಟು ಮಂದಿಗೆ ಸೋಂಕು ಹರಡುತ್ತೆ ಗೊತ್ತಾ?

0
38

ಡೆಲ್ಟಾ ರೂಪಾಂತರಿ ಸೋಂಕಿತ ವ್ಯಕ್ತಿಯೊಬ್ಬ 8 ಮಂದಿಗೆ ಸೋಂಕು ಹರಡಬಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಸಾಮಾನ್ಯವಾಗಿ ಮೂಲ ಕೊರೊನಾ ಸೋಂಕಿತ ಮೂರು ಮಂದಿಗೆ ಸೋಂಕು ಹರಡಬಲ್ಲ, ಆದರೆ ಡೆಲ್ಟಾ ಸೋಂಕಿತರ ಬರೋಬ್ಬರಿ 8 ಮಂದಿಗೆ ಸೋಂಕು ಹರಡಬಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ.


ಕೊರೊನಾ ಸೋಂಕು ಹರಡುವಿಕೆಗೆ ಇರುವ ನಾಲ್ಕು ಪ್ರಮುಖ ಕಾರಣಗಳನ್ನು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ವಿ ಡೆಲ್ಟಾ ರೂಪಾಂತರಿ ಹರಡುವಿಕೆ ಹಾಗೂ ಕೊರೊನಾ ಲಸಿಕೆ ವಿತರಣೆ ಪ್ರಮಾಣ ಕಡಿಮೆ ಇರುವುದರಿಂದ ಸೋಂಕು ಹೆಚ್ಚಾಗುತ್ತಿದೆ.
ಆಫ್ರಿಕಾದಲ್ಲಿ ಮರಣ ಪ್ರಮಾಣವು ಕಳೆದ ಎರಡು ವಾರಗಳಲ್ಲಿ ಶೇ.30-40ರಷ್ಟು ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ 5 ಲಕ್ಷ ಹೊಸ ಪ್ರಕರಣಗಳು ವರದಿಯಾಗಿವೆ ಮತ್ತು ಸುಮಾರು 9,300 ಮಂದಿ ಮೃತಪಟ್ಟಿದ್ದಾರೆ. ಕೊರೊನಾ ಸೋಂಕು ಕಡಿಮೆಯಾಗುತ್ತಿದೆ ಎನ್ನುವ ಮಾತು ಶುದ್ಧ ಸುಳ್ಳು ಎಂದು ಹೇಳಿದ್ದಾರೆ.

ಕೊರೊನಾ ಸೋಂಕು ಹರಡುವಿಕೆಗೆ ಇರುವ ಕೆಲವು ಪ್ರಮುಖ ಕಾರಣಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ವೇಗವಾಗಿ ಹರಡುತ್ತಿರುವ ಡೆಲ್ಟಾ ರೂಪಾಂತರಿಯು ಕೊರೊನಾ ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ, ಹಾಗೂ ಇದು ಅತ್ಯಂತ ಅಪಾಯಕಾರಿಯಾಗಿದೆ.
ಮೂಲ ವೈರಸ್‌ ಸೋಂಕಿತನಿಂದ ಮೂರು ಜನರಿಗೆ ಸೋಂಕು ತಗುಲಿದರೆ ಡೆಲ್ಟಾ ರೂಪಾಂತರಿ ಸೋಂಕಿತನಿಂದ 8 ಮಂದಿಗೆ ಸೋಂಕು ತಗುಲಲಿದೆ. ಕೆಲವು ದೇಶಗಳಲ್ಲಿ ಡೆಲ್ಟಾ ರೂಪಾಂತರಿ, ಲಸಿಕೆ ವಿತರಣೆ ಕಡಿಮೆ, ಆಸ್ಪತ್ರೆಗಳ ಕೊರೆತೆ, ಆಮ್ಲಜನಕ ಕೊರತೆ, ಹಾಸಿಗೆಗಳ ಕೊರತೆಯಿಂದಾಗಿ ಮರಣ ಪ್ರಮಾಣ ಹೆಚ್ಚಾಗಿದೆ ಎಂದು ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here