ಡೆಸ್ಕ್ ಟಾಪ್ ನಲ್ಲೂ ವಾಟ್ಸ್ ಆ್ಯಪ್ ವಿಡಿಯೋ ಕಾಲ್

Date:

ನವದೆಹಲಿ: ಬಳಕೆದಾರರಿಗೆ ಮತ್ತಷ್ಟು ಹತ್ತಿರವಾಗುವ ಉದ್ದೇಶದಿಂದ ವಾಟ್ಸ್​​ಆ್ಯಪ್ ಇದೀಗ ಮತ್ತೊಂದು ಸೌಲಭ್ಯ ನೀಡಿದ್ದು, ಈ ಮೂಲಕ ಡೆಸ್ಕ್​ಟಾಪ್ ಆ್ಯಪ್ ಮೂಲಕವೂ ವಿಡಿಯೋ, ವಾಯ್ಸ್​ ಕಾಲ್​ ಮಾಡಬಹುದಾಗಿದೆ.

ವಿಂಡೋಸ್​​ ಅಥವಾ ಐಒಎಸ್‌​​ ಸಿಸ್ಟಮ್​ಗಳಲ್ಲಿ ಬಳಕೆ ಮಾಡುವ ವಾಟ್ಸ್​ಆ್ಯಪ್​​ಗಳಲ್ಲಿ ವಿಡಿಯೋ ಕಾಲ್​ ಹಾಗೂ ವಾಯ್ಸ್ ಕಾಲ್ ಮಾಡುವ ಹೊಸ ಸೌಲಭ್ಯ ನೀಡಲಾಗಿದೆ. ಇದರಲ್ಲಿ ಗ್ರೂಪ್​ ಕಾಲ್ ಮಾಡುವ ಅವಕಾಶ ನೀಡಲಾಗಿಲ್ಲವಾದರೂ, ಒಬ್ಬರಿಗೆ ಮಾತ್ರ ವಿಡಿಯೋ, ವಾಯ್ಸ್​ ಕಾಲ್ ಮಾಡಬಹುದಾಗಿದೆ. ಈ ರೀತಿ ಕರೆ ಮಾಡಲು ನಿಮ್ಮ ಬಳಿ ವೆಬ್‌ ಕ್ಯಾಮ್ ಸೌಲಭ್ಯ ಇರಬೇಕಿದೆ.

ಈ ವಿಶೇಷ ಸೌಲಭ್ಯ ಪಡೆದುಕೊಳ್ಳಲು ವ್ಯಾಟ್ಸ್​ಆ್ಯಪ್​ ವೆಬ್​ಸೈಟ್​​ನಿಂದ ಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳಬೇಕಾಗಿದೆ. ಭವಿಷ್ಯದಲ್ಲಿ ಗ್ರೂಪ್ ಕಾಲಿಂಗ್​ಗೂ ಅವಕಾಶ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ಈ ಸೌಲಭ್ಯದೊಂದಿಗೆ ಉದ್ಯೋಗಿಗಳು ತಮ್ಮ ಸಹದ್ಯೋಗಿಗಳು ಹಾಗೂ ಸ್ನೇಹಿತರೊಂದಿಗೆ ಸಂವಾದ ನಡೆಸಲು ಸಹಕಾರಿಯಾಗಲಿದೆ ಎಂದಿದೆ. ವಾಟ್ಸ್ಆ್ಯಪ್ ಖಾಸಗಿತನದ ಫೀಚರ್ ಬಗ್ಗೆ ಬಳಕೆದಾರರಿಂದ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ ಸ್ಪಷ್ಟನೆ ನೀಡಿದ್ದ ಕಂಪನಿ ಫೇಸ್​ಬುಕ್​ ಜತೆಗೆ ಯಾವುದೇ ರೀತಿಯ ಮಾಹಿತಿ ಹಂಚಿಕೊಳ್ಳುವುದಿಲ್ಲ ಎಂದು ಹೇಳಿತ್ತು.

 

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...