ಒಂದು ಕಾಲದಲ್ಲಿ ಮಲ್ಲಿಕಾ ಶೆರಾವತ್ ಸಿನಿಮಾಗಳು ಅಂದ್ರೆ ಸಿನಿ ಪ್ರೇಮಿಗಳು ಚಿತ್ರಮಂದಿರಗಳಲ್ಲಿ ಬಿಢಾರ ಹೂಡುತ್ತಿದ್ದರು. ಹಾಟ್ ಹಾಟ್ ಆಗಿ, ಸಖತ್ ಸೆಕ್ಸಿಯಾಗಿ ಕಾಣಿಸಿಕೊಂಡು ತೆರೆಮೇಲೆ ರಾರಾಜಿಸಿದ ಮಲ್ಲಿಕಾ ಶೆರಾವತ್ ಚಿತ್ರಗಳು ಈಗ ಮರೀಚಿಕೆಯಾಗಿವೆ. ಆಗೊಂದು ಹೀಗೊಂದು ಸಿನಿಮಾಗಳು ಮಾತ್ರ ರಿಲೀಸ್ ಆಗ್ತಿವೆ.. ಅವಕಾಶಗಳೇ ಸಿಗದೇ ಮನೆಯಲ್ಲಿ ಕೂರುವಂತಾಗಿದೆ.. ಅದಕ್ಕೆ ಕಾರಣವೇನು ಗೊತ್ತಾ,.?
42 ವರ್ಷದ ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ಒಂದು ಸಮಯದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಹೊಂದಿದ ನಟಿಮಣಿ. ಕನಿಷ್ಠ ಸ್ಪೆಷಲ್ ಹಾಡುಗಳಿಗಾದರೂ ಮಲ್ಲಿಕಾ ಕಾಣಿಸಿಕೊಂಡು ಮಿಂಚುತ್ತಿದ್ರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಮಲ್ಲಿಕಾ ಸಿನಿಮಾ ಮಾಡೋದು ಅಪರೂಪ ಆಗಿದೆ. ಹೀಗಿರುವಾಗ, ವೆಬ್ ಸೀರಿಸ್ ಗೆ ಮಲ್ಲಿಕಾ ಶೆರಾವತ್ ಡೆಬ್ಯೂ ಮಾಡ್ತಿದ್ದಾರೆ. ತುಷಾರ್ ಕಪೂರ್ ಜೊತೆ ಸುಮಾರು 17 ವರ್ಷದ ನಂತರ ಸ್ಕ್ರೀನ್ ಶೇರ್ ಮಾಡ್ತಿದ್ದಾರೆ. ಇಷ್ಟು ದಿನ ಯಾಕೆ ಸಿನಿಮಾಗಳನ್ನ ಮಾಡದೇ ಇರುವುದಕ್ಕೂ ಕಾರಣ ತಿಳಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ ಮಲ್ಲಿಕಾ ಶೆರಾವತ್ ನಟರ ಜೊತೆ ನಾನು ಡೇಟಿಂಗ್ ಹೋಗಿಲ್ಲ ಎಂಬ ಕಾರಣಕ್ಕೆ ನನಗೆ ಸಿನಿಮಾಗಳಲ್ಲಿ ಅವಕಾಶ ಸಿಕ್ಕಿಲ್ಲ ಎಂದು ನೇರವಾಗಿ ಹೇಳಿಕೊಂಡಿದ್ದಾರೆ. ಇಂಡಸ್ಟ್ರಿಯಲ್ಲಿ ಬಹುತೇಕ ನಟ, ನಿರ್ದೇಶಕ ಹೀರೋಗಳು ತಮ್ಮ ಚಿತ್ರಗಳಲ್ಲಿ ಅವರದ್ದೇ ಗರ್ಲ್ ಫ್ರೆಂಡ್ ಗಳನ್ನ ನೋಡಲು ಬಯಸುತ್ತಾರೆ. ಹಾಗಾಗಿ, ನಮಗೆ ಅವಕಾಶ ಸಿಗಲ್ಲ ಎಂದು ಆರೋಪಿಸಿದ್ದಾರೆ.
ಈ ಕಾರಣದಿಂದ ಒಂದು ಕಾಲದಲ್ಲಿ ಮಿಂಚುತ್ತಿದ್ದ ಮಲ್ಲಿಕಾ ಶೆರಾವತ್ ನಟಿ ಇದೀಗ ಅವಕಾಶಗಳು ಸಿಗದೇ ಮನೆಯಲ್ಲಿದ್ದಾರೆ. ಅವರ ಅಭಿಮಾನಿಗಳಿಗೂ ಬೇಸರ ತಂದಿದೆ. ಆದ್ರೆ ವೆಬ್ ಸರಣಿಯಲ್ಲಿ ಮಲ್ಲಿಕಾ ಅಭಿಮಾನಿಗಳು ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿದೆ ಅಷ್ಟೇ. ಏಕ್ತಾ ಕಪೂರ್ ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ಬೂ ಸಬ್ಕಿ ಫತೇಗಿ ವೆಬ್ ಸರಣಿಯಲ್ಲಿ ಮಲ್ಲಿಕಾ ಕಾಣಿಸಿಕೊಂಡಿದ್ದು ಜೂನ್ 27 ರಂದು ಈ ವೆಬ್ ಸೀರಿಸ್ ವಿಶ್ವ ಪ್ರದರ್ಶನವಾಗಲಿದೆ.