ಡ್ಯಾಡಿ ಆಗ್ತಿದ್ದಾರ ಕೊಹ್ಲಿ..? ಸಾಕ್ಷಿ ನೀಡ್ತಿದೆ ಅನುಷ್ಕಾ ಶರ್ಮಾ ಈ ಫೋಟೊ..!! ನೀವೆ ನೋಡಿ..!!
ಟೀ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೆ ಬಾಲಿವುಡ್ ಅನುಷ್ಕಾ ಶರ್ಮಾ ಕಳೆದ ವರ್ಷದ ಡಿಸೆಂಬರ್ ನಲ್ಲಿ ಪ್ರೀತಿಸಿ ಮದುವೆಯಾಗಿದ್ದಾರೆ.. ಇಬ್ಬರು ವಿದೇಶಗಳಲ್ಲಿ ಪ್ರಣಯ ಪಕ್ಷಿಗಳಾಗಿ ಹಾರಾಡುತ್ತಿರುತ್ತಾರೆ, ತಮ್ಮ ಅಮುಲ್ಯವಾದ ಕ್ಷಣಗಳನ್ನ ಒಟ್ಟಿಗೆ ಕಳೆಯುತ್ತಿದ್ದಾರೆ.. ಈ ನಡುವೆ ಶೂಟಿಂಗ್ ಅಂತ ಅನುಷ್ಕಾ, ಕ್ರಿಕೆಟ್ ಅಂತ ವಿರಾಟ್ ಇಬ್ಬರು ಬ್ಯೂಸಿ.. ಬಟ್ ಎಷ್ಟೇ ಕೆಲಸವಿದ್ರು ಒಬ್ಬರನ್ನ ಬಿಟ್ಟು ಒಬ್ಬರು ಇರದ ಜೋಡಿ ಇದು.. ಹೀಗಾಗೆ ಕೊಹ್ಲಿ ಜೊತೆಗೆ ಮ್ಯಾಚ್ ಸಂದರ್ಭದಲ್ಲಿ ಹೊರಡುತ್ತಾರೆ ಪತ್ನಿ ಅನುಷ್ಕಾ..

ಈ ನಡುವೆ ಈ ವಿರುಷ್ಕಾ ಜೋಡಿಯ ಬಗ್ಗೆ ಹೊಸದೊಂದು ಸುದ್ದಿ ಕೇಳಿ ಬಂದಿದೆ.. ಅದೇನಂದ್ರ ವಿರಾಟ್ ತಂದೆಯಾಗ್ತಿದ್ದಾರೆ ಅನ್ನೋದು.. ಹೌದು ಪತ್ನಿ ಅನುಷ್ಕಾ ಈಗ ಗರ್ಭಿಣಿಯಾಗಿದ್ದಾರೆ ಅನ್ನೋದನ್ನ ಫೋಟೊವೊಂದು ಸಾಭೀತು ಪಡೆಸಿದೆ ಅಂತ ಗುಲ್ಲಾಗಿದೆ..

ಹೌದು, ಅನುಷ್ಕಾ ಬೇಬಿ ಬಂಪ್ ಫೋಟೊ ವೈರಲ್ ಆಗಿದ್ದು, ಈ ಮುದ್ದಾದ ಜೋಡಿಗಳ ಬಾಳಲ್ಲಿ ಮಗುವಿನ ಆಗಮನವಾಗಲಿದೆ ಅಂತ ಸುದ್ದಿಯಾಗಿದೆ.. ಅದರೆ ಇದೆಷ್ಟು ನಿಜ ಅನ್ನೋದನ್ನ ಈ ಜೋಡಿ ಹೇಳಬೇಕು..







