ಅವತ್ತು 6-5=2, ಇವತ್ತು ಕರ್ವ..!

1
206

ಅದೊಂದು ಸಿನಿಮಾ ಕನ್ನಡಿಗರು ಮರೆಯೋಕೆ ಸಾಧ್ಯವೇ ಇಲ್ಲ..! ಅದರ ಹೆಸರು 6-5=2..! ನಿಜ ಘಟನೆಗಳ, ನಿಜ ದೃಶ್ಯಗಳನ್ನು ಹೊಂದಿದ್ದ ಈ ಸಿನಿಮಾ ರಾತ್ರೋರಾತ್ರಿ ಸೂಪರ್ ಹಿಟ್ ಆಗಿಬಿಡ್ತು..! ಆ ಸಿನಿಮಾ ನಿರ್ದೇಶಕರು ಯಾರು..? ಹೀರೋ ಯಾರು..? ಹೀರೋಯಿನ್ ಯಾರು..? ಇದ್ಯಾವದೂ ಗೊತ್ತಿರಲಿಲ್ಲ ಆದ್ರೆ ಸಿನಿಮಾ ಮಾತ್ರ ಎಲ್ಲೆಡೆ ಹೌಸ್ ಫುಲ್ ಆಗಿತ್ತು..! ನೋಡನೋಡ್ತಿದ್ದ ಹಾಗೇ 2013ರ ಸೂಪರ್ ಹಿಟ್ ಸಿನಿಮಾಗಳ ಸಾಲಿನಲ್ಲಿ ಆ ಸಿನಿಮಾ ಸೇರಿಕೊಂಡಿತ್ತು..! ಹಾರರ್ ಸಿನಿಮಾ, ಥಿಯೇಟರ್ ನಲ್ಲಿದ್ದವರನ್ನು ಕುರ್ಚಿಯ ತುದಿಯಲ್ಲಿ ತಂದು ನಿಲ್ಲಿಸಿತ್ತು..! ಈಗ ಈ ಸಿನಿಮಾ ಬಗ್ಗೆ ಯಾಕಪ್ಪ ಕಥೆ ಹೊಡೀತಿದಿಯ ಅಂತ ಕೇಳ್ತಿದೀರಾ..? ವಿಷಯ ಇದೆ. ಈಗ ಇದೇ 6-5=2 ನಿರ್ಮಾಪಕರು ಮತ್ತೊಂದು ಸಿನಿಮಾ ಮಾಡ್ತಿದ್ದಾರೆ.. ಕನ್ನಡದಲ್ಲಿ ಒಂದು ಟ್ರೆಂಡ್ ಶುರು ಮಾಡೋಕೆ ರೆಡಿ ಆಗಿದ್ದಾರೆ…!
ಹೌದು…! ಅವತ್ತು ಸೌಂಡ್ ಮಾಡಿದ್ದ 6-5=2 ಸಿನಿಮಾದ ನಿರ್ಮಾಪಕರಾದ ಕೃಷ್ಣ ಚೈತನ್ಯ ಅವರು ಅವರ ಹೊಸ ತಂಡದ ಜೊತೆ ಸ್ಯಾಂಡಲ್ ವುಡ್ ನಲ್ಲಿ ಹವಾ ಎಬ್ಬಿಸೋಕೆ ರೆಡಿ ಆಗಿದ್ದಾರೆ..! ಈ ಸಿನಿಮಾಗೆ ಹೀರೋ ಯಾರು..? ಹೀರೋಯಿನ್ ಯಾರು ಅನ್ನೋದನ್ನೂ ಅವರು ಬಿಟ್ಟುಕೊಟ್ಟಿಲ್ಲ..! ಸಿನಿಮಾ ಸಖತ್ ಡಿಫರೆಂಟಾಗಿದೆ, ಕನ್ನಡಿಗರಿಗೆ ಇಷ್ಟ ಆಗುತ್ತೆ ಅಂತ ಭರವಸೆ ಇಟ್ಕೊಂಡಿದ್ದಾರೆ..! ಅಂದಹಾಗೆ ಅವರ ಎರಡನೇ ಸಿನಿಮದ ಹೆಸರು `ಕರ್ವ’..! ಕರ್ವನಾ..? ಟೈಟಲ್ಲೇ ಡಿಫರೆಂಟಾಗಿದಿಯಲ್ಲ ಅಂದ್ರೆ ಸಿನಿಮಾ ಇನ್ನೂ ಡಿಫರೆಂಟು ಅಂತಾರೆ ನಿರ್ದೇಶಕ ನವನೀತ್..! ಅದೇನೇ ಇರಲಿ, ಅವತ್ತು ಸೌಂಡ್ ಮಾಡಿದ 6-5=2, ಬಾಲಿವುಡ್ ತನಕ ಹೋಗಿ ಬಂತು..! ಈ ಸಲ ಕರ್ವನೂ ಹಂಗೇ ಸದ್ದು ಮಾಡುತ್ತೆ ಅಂತಾದ್ರೆ ಈ ವರ್ಷದ ಕನ್ನಡದ ಹಿಟ್ ಸಿನಿಮಾಗಳ ಲೀಸ್ಟಿಗೆ `ಕರ್ವ’ ಸೇರಲಿ ಅನ್ನೋದು ಕನ್ನಡಿಗರ ಅಸೆ..!

karva-kannada-movie

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

ಐಎಎಸ್ ಅಧಿಕಾರಿ ಏಕೆ ಕೆಲಸ ಬಿಟ್ಟರು ಗೊತ್ತಾ..? ಐಎಎಸ್ ಕೆಲಸ ಬಿಡುವಂತೆ ಮಾಡಿದ ಕೆಲಸ ಯಾವುದು..?

ಭಾರತದಲ್ಲಿ ಮದುವೆಯ ಬಂಧಕ್ಕೆ ಬೆಲೆ ಇಲ್ಲದಂತಾಗುತ್ತಿದೆಯೇ..?

ಈ ವೀಡಿಯೋ ನೋಡುವಾಗ ನಿಮ್ಮ ಬೆರಳನ್ನು `ಸ್ಕ್ರೀನ್’ ಮೇಲೆ ಇಟ್ಕೊಳ್ಳಿ..!

ಅಂದು ಇಡೀ ವಿಶ್ವವೇ ಭಾರತಕ್ಕೆ ತಲೆಬಾಗಿತ್ತು..!

ಸಿಸಿಟಿವಿಯಲ್ಲಿ ಸೆರೆಯಾಯ್ತು ಸೊಸೆಯ ಕ್ರೌರ್ಯ..! ಸೊಸೆಯಿಂದಲೇ ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ..!

ತರಕಾರಿ ತಿನ್ನುವ ಮುನ್ನ ಈ ವಿಡಿಯೋ ನೋಡಿ..!

1 COMMENT

LEAVE A REPLY

Please enter your comment!
Please enter your name here